April 26, 2024

Bhavana Tv

Its Your Channel

ಅರಣ್ಯವಾಸಿಗಳ ಪರ ಕಾನೂನು ಹೋರಾಟ :ರಾಜ್ಯಾದ್ಯಂತ ಸಾಂಘಿಕ ಹೋರಾಟಕ್ಕೆ ನಿರ್ಧಾರ

ಶಿರಸಿ: ಮಲೆನಾಡಿನ ಜನಜೀವನದಲ್ಲಿ ಅರಣ್ಯವಾಸಿಗಳಪ್ರದೇಶವನ್ನು ವಾಸ್ತವ್ಯ ಮತ್ತು ಸಾಗುವ ವಳಿಗಾಗಿ ಒತ್ತುವರಿ ಮಾಡಿಕೊಂಡಿರುವ ಅರಣ್ಯವಾಸಿಗಳಿಗೆ ಅರಣ್ಯ ಹಕ್ಕು ಕಾಯಿದೆಯಡಿ ಮಂಜೂರಿಗೆ ಸಂಬAಧಿಸಿ, ಕಾನೂನಾತ್ಮಕ ಬೆಂಬಲ ಮತ್ತು ಅರಣ್ಯವಾಸಿಗಳ ಪರ ಸರಕಾರದ ಮೇಲೆ ಸಾಂಘಿಕ ಹೋರಾಟಗಳ ಮೂಲಕ ಒತ್ತಡ ತರಲು ಭೂ ಹಕ್ಕು ಹೋರಾಟದ ಪ್ರಮುಖರು ತೀರ್ಮಾನಿಸಿದ್ದಾರೆ.
ಸೆ.೧೮ರ ಸಂಜೆ ಸಾಗರದ ಹಿರಿಯ ಸಾಮಾಜಿಕ ಚಿಂತಕ ಕಾಗೋಡ ತಿಮ್ಮಪ್ಪರ ಅಧ್ಯಕ್ಷತೆಯಲ್ಲಿ ಅವರ ನಿವಾಸದಲ್ಲಿಜರುಗಿದ ಚರ್ಚೆಯಲ್ಲಿ ತೀರ್ಮಾನಿಸಿದ್ದಾರೆ.
ಸುಪ್ರಿಂ ಕೋರ್ಟ ಅರಣ್ಯ ಹಕ್ಕು ಕಾಯಿದೆಯಡಿಯಲ್ಲಿ ಬಂದಿರುವ ಅರ್ಜಿಗಳನ್ನು ಮರುಪರಿಶೀಲನೆ ಮಾಡಲು ನಿರ್ದೆಶನ ನೀಡಿದ ಹಿನ್ನೆಲೆಯಲ್ಲಿ , ರಾಜ್ಯ ಸರಕಾರವು ೧೮ತಿಂಗಳಲ್ಲಿ ಅರ್ಜಿ ಪುನರ ಪರಿಶೀಲಿಸಲಾಗುವದೆಂದು ಸುಪ್ರಿಂ ಕೋರ್ಟಿನಲ್ಲಿ ಪ್ರಮಾಣಪತ್ರ ಸಲ್ಲಿಸಿದ ಅವಧಿ ಪ್ರಸಕ್ತ ವರುಷ ಜನವರಿಯಲ್ಲಿ ಮುಗಿದರೂ ಭೂಮಿಹಕ್ಕು ಮಂಜೂರಿ ಮಂದಗತಿಯಲ್ಲಿ ಜರುಗಿರುವದಕ್ಕೆ ಚರ್ಚೆ ಸಂದರ್ಭದಲ್ಲಿ ಪ್ರಮುಖರು ಖೇದ ವ್ಯಕ್ತಪಡಿಸಿದರು. ಪುನರ ಪರಿಶೀಲನಾ ಸಂದರ್ಭದಲ್ಲಿ ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿವಿಧಾನ ಅನುಸರಿಸದೇ ಹಾಗೂಕೇಂದ್ರ ಸರಕಾರದ ಅದೇಶ ಉಲ್ಲಂಘಿಸಿ ಅರ್ಜಿ ವಿಲೇವಾರಿ ಮಾಡುತ್ತಿರುವದಕ್ಕೆ ಸುಪ್ರಿಮ ಮತ್ತು ಹೈಕೋರ್ಟನಲ್ಲಿ ಆಕ್ಷೇಪಣಾ ಅರ್ಜಿ ಸಲ್ಲಿಸಲಯ ಚರ್ಚೆ ಸಂದರ್ಭದಲ್ಲಿ ನಿರ್ಧರಿಸಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: