April 26, 2024

Bhavana Tv

Its Your Channel

ಆನ್ ಲೈನ್ ಆಧಾರಿತ ರಾಜ್ಯಮಟ್ಟದ ಸ್ಪರ್ಧೆಯಲ್ಲಿ, ಸಿದ್ದನಕೊಪ್ಪಲು ಕುಮಾರ್ ಗೆ ‘ನವಚಿಂತನ ಯೋಧ ನಮನ ಪ್ರಶಸ್ತಿ’

ಶಿರಸಿ; ‘ನವಚಿಂತನ ಬಳಗ’ ಜನವರಿ 15 ರಂದು ‘ಭಾರತೀಯ ಸೇನಾ ದಿನಾಚರಣೆ’ ಯ ನಿಮಿತ್ತವಾಗಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಆನ್ ಲೈನ್ ಆಧಾರಿತ ಸ್ವರಚಿತ ಕವನ ರಚನೆ ಹಾಗೂ ವಾಚನ ಸ್ಪರ್ಧೆಯಲ್ಲಿ ಮೈಸೂರಿನ ಶ್ರೀ ಸಿದ್ದನಕೊಪ್ಪಲು ಕುಮಾರವರು ಪ್ರಥಮ ಸ್ಥಾನ ಪಡೆದರು. 25 ಕ್ಕಿಂತ ಅಧಿಕ ಪ್ರತಿಭೆಗಳನ್ನೊಳಗೊಂಡ ಬೇರೆ ಬೇರೆ ಜಿಲ್ಲೆಗಳಿಂದ ಭಾಗವಹಿಸಿದ್ದ ಸ್ಪರ್ಧೆಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಶ್ರೀಮತಿ ಶಿಲ್ಪಾ ಜಗದೀಶ್ – ದ್ವಿತೀಯ ಸ್ಥಾನ, ಮಾಣಿ ಮಂಗಳೂರಿನ ಶ್ರೀಮತಿ ಮಾನಸ ವಿಜಯ್ ತೃತೀಯ ಸ್ಥಾನ, ಹೊನ್ನಾವರ ತಾಲ್ಲೂಕು ಮಂಕಿಯ ಶ್ರೀ ನಾಗರಾಜ್ ನಾಯ್ಕ್ ಮಂಕಿ ಚತುರ್ಥ ಸ್ಥಾನ, ಉಡುಪಿಯ ಶ್ರೀಮತಿ ಪುಷ್ಪ ಪ್ರಸಾದ್ ಪಂಚಮ ಸ್ಥಾನ ಪಡೆದುಕೊಂಡರು. ನಿರ್ಣಾಯಕರಾಗಿ ಯುವ ಕವಿ, ಸಾಹಿತಿ, ರಂಗಭೂಮಿ ಕಲಾವಿದ ಅನಂತ್ ಕುಣಿಗಲ್ ಅವರು ಕಾರ್ಯ ನಿರ್ವಹಿಸಿದ್ದಾರೆ.

ಸ್ಪರ್ಧೆ ಸುಸೂತ್ರವಾಗಿ ನಡೆಯಲು ಕಾರಣರಾದ ಎಲ್ಲಾ ಸ್ಪರ್ಧಾಳುಗಳಿಗೆ, ನಿರ್ಣಾಯಕರಿಗೆ ಮತ್ತು ಸಂಸ್ಥೆಯ ಪದಾಧಿಕಾರಿಗಳಿಗೆ ‘ನವಚಿಂತನ ಬಳಗ, ಶಿರಸಿ’ ಯ ನಿರ್ದೇಶಕರಾದ ಪ್ರಸನ್ನ ಮರಾಠಿ ಧೂಳಳ್ಳಿ, ಕಾರ್ಯದರ್ಶಿಗಳಾದ ವಿನಯ್ ನಾಯ್ಕ್ ಮಂಕಿ, ಸಂಚಾಲಕರಾದ ಮೋಹನ್ ನಾಯ್ಕ್ ಭಟ್ಕಳ್, ಪದಾಧಿಕಾರಿಗಳಾದ ಯೋಗೇಶ್ ನಾಗರಾಜ್ ಭಂಡಾರಿ, ನಾಗರಾಜ್ ಶೇಟ್, ಸಚಿನ್ ಗೋಸಾವಿ, ರೋಹನ್ ಎಸ್ ನಾಯ್ಕ್ ಪ್ರಕಟಣೆಯಲ್ಲಿ ಧನ್ಯವಾದಗಳನ್ನು ತಿಳಿಸಿದ್ದಾರೆ.

error: