May 18, 2024

Bhavana Tv

Its Your Channel

ಸಿರಸಿಯಲ್ಲಿ ವಿದ್ವಾನ್ ದಿ. ಮಹಾರುದ್ರಪ್ಪ ಸ್ಮರಣಾರ್ಥ ಸಂಗೀತೋತ್ಸವ.

ವರದಿ: ವೇಣುಗೋಪಾಲ ಮದ್ಗುಣಿ

 ಸಿರಸಿ :  ಅರುಣೋದಯ ಕಲಾನಿಕೇತನ ರಿಜಿಸ್ಟರ್ ಶಿರಸಿ ಉತ್ತರ ಕನ್ನಡ ಶಾಸ್ತ್ರೀಯ ಸಂಗೀತ ವಿದ್ಯಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಇವರ ಸಹಯೋಗದೊಂದಿಗೆ ಸಂಸ್ಥೆಯ ಸಂಸ್ಥಾಪಕ ಸಂಗೀತ ವಿದ್ವಾನ್ ದಿ. ಮಹಾರುದ್ರಪ್ಪ ವಿ ಪೂಜಾರ್ ಅವರ ಸ್ಮರಣಾರ್ಥ, 75ನೇ ಸ್ವಾತಂತ್ರ‍್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ, ಸಂಗೀತೋತ್ಸವವನ್ನು, ಶಿರಸಿಯ ಸಾಮ್ರಾಟ್ ಹೋಟೆಲ್ ವಿನಾಯಕ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಆರಂಭದಲ್ಲಿ  ಶ್ರೀಲತಾ ಗುರುರಾಜ್ ಆಡುಕುಳ ಹೊನ್ನಾವರ, ಇವರು  ತುಂಬಾ ಸುಮಧುರವಾಗಿ ರಾಗ ಮುಲ್ತಾನಿ ಹಾಗೂ ಭಜನ್ ಅನ್ನು ಪ್ರಸ್ತುತಪಡಿಸಿದರು.. ಅವರಿಗೆ ಗುರುರಾಜ್ ಆಡುಕುಳ ರವರು  ತಬಲಾಸಾಥ್ ಹಾಗೂ  ಅಜಯ್ ಹೆಗಡೆ ಅವರು ಹಾರ್ಮೋನಿಯಂ ಸಾಥ್ ನೀಡಿದರು.

ದೀಪ ಬೆಳಗುವುದರ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಕಾಶಿನಾಥ್ ಮೂಡಿ ಅವರು, ಗುರುಗಳ ಈ ಸಂಗೀತ ಪರಂಪರೆಯನ್ನು, ಮುಂದುವರೆಸಿಕೊAಡು ಬರುತ್ತಿರುವ, ಕಲಾನಿಕೇತನದ ಅಧ್ಯಕ್ಷರಾದ ಸಂಜೀವ್ ಪೋತದಾರ್ ಅವರ ಕಾರ್ಯ ಶ್ಲಾಘನೀಯವಾದದ್ದು , ಎನ್ನುತ್ತಾ ಸಂಸ್ಥೆಯ ಸಂಸ್ಥಾಪಕರಾದ, ವಿದ್ವಾನ್ ದಿವಂಗತ ಮಹಾರುದ್ರಪ್ಪ ವಿ ಪೂಜಾರ್ ಅವರ ಜೊತೆಗಿನ, ಒಡನಾಟವನ್ನು ಅನುಭವವನ್ನು ಹಂಚಿಕೊAಡರು.
ಕಾರ್ಯಕ್ರಮದ ಅತಿಥಿಗಳಾಗಿದ್ದ ವೀರಣ್ಣ ಪತ್ತಾರ್ ಧಾರವಾಡ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರು, ಮಾತನಾಡುತ್ತಾ, ವಿವಿಧ ಕಲಾ ಪ್ರಕಾರಗಳಲ್ಲಿ ತೊಡಗಿಸಿ ಕೊಂಡಾಗ ಸದೃಢ ಸಮಾಜ ಸಾಧ್ಯ. ಶಾಸ್ತ್ರೀಯ ಸಂಗೀತದ ವೇದಿಕೆ ಕಡಿಮೆ ಇದ್ದರೂ ಉತ್ತರ ಕನ್ನಡದ ಶಿರಸಿಯ ಪ್ರತಿಭೆಗಳು, ಆ ನಿಟ್ಟಿನಲ್ಲಿ ಮೊದಲಿಗರಾಗಿರುತ್ತಾರೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಿರಸಿ ಆಯುರ್ವೇದ ವೈದ್ಯರು ಡಾ!!ರಾಮಕೃಷ್ಣ ಬಿಳಗಿಕರ , ದಿ. ವಿದ್ವಾನ್ ಮಹಾರುದ್ರಪ್ಪ ವಿ ಪೂಜಾರ ರವರ, ನಿಸ್ಪ್ರಹತೆಯನ್ನು ಸ್ಮರಿಸಿದರು. ಮಾರಿಕಾಂಬೆಯ ಸನ್ನಿಧಿಯಲ್ಲಿ ಪೂಜೆಯನ್ನು ಮಾಡುತ್ತಲೇ ಜೊತೆಗೆ, ಸಂಗೀತಾಸಕ್ತರಿಗೆ ಸಂಗೀತವನ್ನು ನಾಟಕವನ್ನು ಕಲಿಸಿದರು. 75 ವರ್ಷಗಳಷ್ಟು ಹಿಂದೆಯೇ ಸಂಗೀತ ತಬಲ ಇತ್ಯಾದಿ ಕಲಾ ಪ್ರಕಾರಗಳ ಕಲಿಕೆಗೆ ಬುನಾದಿ ಹಾಕಿದವರು, ಎಂಬುದಾಗಿ ನೆನಪಿಸಿಕೊಂಡರು.
ಸಭಾ ಕಾರ್ಯಕ್ರಮದ ನಂತರ ಆಮಂತ್ರಿತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಕುಮಾರಿ ಅನುಪಮಾ ಭಟ್ ಎಲ್ಲಾಪುರ ಇವರು ಪೂರ್ವಕಲ್ಯಾಣ ರಾಗವನ್ನು ಪ್ರಸ್ತುತಪಡಿಸಿ, ತಮ್ಮ ಅನುಪಮ ಗಾಯನದಿಂದ ಎಲ್ಲರನ್ನು ರಂಜಿಸಿದರು. ಕುಮಾರಿ ಅನುಪಮಾ ಅವರಿಗೆ ಮಂಜುನಾಥ ಮೋಟಿನ್ ಸರ್ ಅವರು ತಬಲಾಸಾತ್ ನೀಡಿದರು ಅಜಯ್ ಹೆಗಡೆ ವರ್ಗಾಸರ, ಶಿರಸಿರವರು ಹಾರ್ಮೋನಿಯಂ ಸಾಥ್ ನೀಡಿದರು.
ಮತ್ತೋರ್ವ ಆಮಂತ್ರಿತ ಕಲಾವಿದರಾದ ಡಾಕ್ಟರ್ ಕೃಷ್ಣಮೂರ್ತಿ ಭಟ್ ಬೊಮ್ಮನಹಳ್ಳಿ, ಮುಖ್ಯಸ್ಥರು ಸಂಗೀತ ಮತ್ತು ನೃತ್ಯ ವಿಭಾಗ ಎಂಎA ಕಲಾವಿಜ್ಞಾನ ಕಾಲೇಜು ಸಿರಸಿ ರವರು , ಮಿಯಾ ಮಲ್ಹಾರ್ , ರಾಗದಿಂದ ಪ್ರಾರಂಭಿಸಿ, ವಚನ ಮತ್ತು ಭಗವತಿ ಗೀತೆಯಿಂದ ಭಕ್ತಿರಸವನ್ನು ಹರಿಸಿ, ಭೈರವಿ ಇಂದ ಮುಕ್ತಾಯಗೊಳಿಸಿ, ಗಾನರಸದೌತಣವನ್ನು ನೀಡಿದರು. ಅರುಣೋದಯ ಕಲಾನಿಕೇತನದ ಅಧ್ಯಕ್ಷರಾದ ಪ್ರೊಫೆಸರ್ ಸಂಜೀವ್ ಪೋತದಾರ ರವರು, ಎಲ್ಲರಿಗೂ ಸ್ವಾಗತವನ್ನು ಕೋರಿದರು. ಪ್ರಾರ್ಥನೆಯನ್ನು
ಕಲಾನಿಕೇತನದ ವಿದ್ಯಾರ್ಥಿನಿಯರಾದ ಕುಮಾರಿ ಸಂಜನಾ, ಕುಮಾರಿ ಮೇಘನಾ, ಕುಮಾರಿ ಸಂಧ್ಯಾ ರವರು, ಸುಶ್ರಾವ್ಯವಾಗಿ ನಡೆಸಿಕೊಟ್ಟರು.
ಅರುಣೋದಯ ಕಲಾನಿಕೇತನದ ಸಂಸ್ಥಾಪಕರಾದ ಸಂಗೀತ ವಿದ್ವಾನ್ ದಿ. ಮಹಾರುದ್ರಪ್ಪ ವಿ ಪೂಜಾರ ರವರ ಕುರಿತು ಹಾಗೂ , ಸಂಸ್ಥೆಯ ಬೆಳವಣಿಗೆ, ಸಾಧನೆಯ ಕುರಿತಾಗಿ ಸಾವಿತ್ರಿ ಶಾಸ್ತ್ರಿಯವರು ವಾಚಿಸಿದರು. ಅರುಣೋದಯ ಕಲಾನಿಕೇತನದ ಪ್ರಧಾನ ಕಾರ್ಯದರ್ಶಿಗಳಾದ, ಮನೋಹರ ಕಳಸಣ್ಣವರ್ ರವರು, ವಂದನಾರ್ಪಣೆಯನ್ನು ಸಲ್ಲಿಸಿದರು.ಕಾರ್ಯಕ್ರಮವನ್ನು ಸಾವಿತ್ರಿ ಶಾಸ್ತ್ರಿ ಯವರು ನಿರ್ವಹಿಸಿದರು

error: