ಶಿರಸಿ: ಆಟೋದಲ್ಲಿ ಬಿಟ್ಟುಹೋದ ಬಂಗಾರದ ಆಭರಣವನ್ನು ಆಟೋಚಾಲಕ ಆ ವ್ಯಕ್ತಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನರ ಸಿರ್ಸಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇತರರಿಗೆ ತೊಂದರೆ ಕೊಡುವ ಹಾಗೂ ಕಳ್ಳತನ ಮಾಡುವ ಅದೆಷ್ಟೋ ಜನರ ನಡುವೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಸಾವಿರಾರು ಜನರನ್ನ ನಾವು ಕಾಣುತ್ತಿದ್ದೇವೆ. ಇಂತಹ ಒಂದು ಪ್ರಾಮಾಣಿಕತೆಗೆ ಸಾಕ್ಷಿಯಾದ ಘಟನೆ ಶಿರಸಿಯಲ್ಲಿ ನಡೆದಿದೆ. ಶಿರಸಿಯ ಮಾರಿಕಾಂಬಾ ದೇವಸ್ಥಾನಕ್ಕೆ ಬಂದ ಭಕ್ತನೋರ್ವ ಆಟೋದಲ್ಲಿ ಬಿಟ್ಟುಹೋದ ಬಂಗಾರದ ಆಭರಣವನ್ನು ಆಟೋಚಾಲಕ ಆ ವ್ಯಕ್ತಿಗೆ ಮರಳಿಸಿ ಪ್ರಮಾಣಿಕತೆ ಮೆರೆದು, ಗಮನಸೆಳೆದಿದ್ದಾನೆ.
ಭಟ್ಕಳ ಮೂಲದ ದೇವೇಂದ್ರ ಎಂಬಾತ ಆಟೋ ರಿಕ್ಷಾದಲ್ಲಿ ಸಂಚಾರ ಮಾಡುವಾಗ 10 ಗ್ರಾಂ ತೂಕದ ಬ್ರೆಸ್ಲೆಟ್ ರಿಕ್ಷಾದಲ್ಲೇ ಬಿದ್ದು ಹೋಗಿತ್ತು. ಅದನ್ನು ಲಕ್ಷಿಸದೆ ದೇವೇಂದ್ರ ಇಳಿದುಹೋಗಿದ್ದರು. ಆಟೋ ಚಾಲಕ ಭಾಸ್ಕರ ಮೊಗೇರ ಅವರು ಆ ಆಭರಣ ತನ್ನ ರಿಕ್ಷಾದಲ್ಲಿರುವುದನ್ನು ಕಂಡು ನೈತಿಕ ಪ್ರಜ್ಞೆಯಿಂದ ಮಾರಿಗುಡಿ ಪೊಲೀಸ್ ಔಟ್ಪೋಸ್ಟ್ ಗೆ ಬಂದು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಮರಳಿಸಿದ್ದರು ಪ್ರಾಮಾಣಿಕತೆ ಮೆರೆದ ಆಟೋ ಚಾಲಕನನ್ನು ಪೊಲೀಸ್ ಇಲಾಖೆ ವತಿಯಿಂದ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ನಗರಠಾಣೆ ಪಿಎಸ್ಐಗಳಾದ ರಾಜಕುಮಾರ್ ಉಕ್ಕಲಿ,ಪಿಎಸ್ಐ ರತ್ನ ಕೆ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
More Stories
ಪ್ರಕೃತಿ ವಿಸ್ಮಯ : ಅಪರೂಪದ ಅವಳಿ ಬೆಕ್ಕಿನ ಮರಿಗಳು.
ಮೇಸ್ತಾ ಪ್ರಕರಣದಲ್ಲಿ ಕಾಗೇರಿಯಿಂದ ಕೀಳುಮಟ್ಟದ ಹೇಳಿಕೆ ನಿರೀಕ್ಷಿಸಿರಲಿಲ್ಲ: ದೇಶಪಾಂಡೆ
ಶೂನ್ಯ ಸಾಧನೆ ಮುಚ್ಚಿಡಲು ಬಿಜೆಪಿಯಿಂದ ಮತ್ತೆ ಮೇಸ್ತಾ ಪ್ರಕರಣ ಮುನ್ನೆಲೆಗೆ: ಭೀಮಣ್ಣ ನಾಯ್ಕ