ಶಿರಸಿ: ಪ್ರಸಕ್ತ ವರ್ಷ ಪ್ರಕಟಗೊಂಡಿರುವ ಎಸ್ಎಸ್ಎಲ್ಸಿ ಮತ್ತು ಸಿಬಿಎಸ್ಇ ನಲ್ಲಿ ಫಲಿತಾಂಶ ಶೇ. 95 ಹಾಗೂ ಪಿಯುಸಿ ನಲ್ಲಿ ಶೇ. 90 ಕ್ಕೂ ಹೆಚ್ಚು ಅಂಕಗಳನ್ನು ಪಡೆದುಕೊಂಡಿರುವ ನಾಮಧಾರಿ ಸಮಾಜದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ಬೆಂಗಳೂರು ನಾಮಧಾರಿ ಕ್ಷೇಮಾಭಿವೃದ್ಧಿ ಸಂಘ(ರಿ.) ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಸಂಘದ ಪ್ರಟಣೆಯಲ್ಲಿ ತಿಳಿಸಲಾಗಿದೆ.
ಅತೀ ಹೆಚ್ಚು ಅಂಕಗಳನ್ನು ಪಡೆದ ಆಯ್ದ ಮತ್ತು ನಿರ್ದಿಷ್ಟ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತಿದ್ದು, ಆಸಕ್ತ ವಿದ್ಯಾರ್ಥಿಗಳು ಅರ್ಜಿಯ ಜೊತೆಯಲ್ಲಿ ದೃಢೀಕರಿಸಿದ ಅಂಕಪಟ್ಟಿ, ಜಾತಿ ಮತ್ತು ವರಮಾನ ಪತ್ರದೊಂದಿಗೆ ವಿದ್ಯಾರ್ಥಿಯ ಪೂರ್ಣ ವಿಳಾಸ ಮತ್ತು ಮೋಬೈಲ್
ನಂಬರ್ ಮಾಹಿತಿಯನ್ನು ಅಗಸ್ಟ 20, 2022 ರ ಒಳಗೆ- ಆರ್ ಎಲ್ ನಾಯಕ,# 23, 3ನೇ ಬ್ಲಾಕ್, ಬಿಡಿಎ ಕಾಂಪ್ಲೆಕ್ಸ ಹಿಂದುಗಡೆ, ನಾಮಧಾರಿ ಭವನ ಹತ್ತಿರ, ನಾಗರಭಾವಿ, 2 ನೇ ಹಂತ, ಬೆಂಗಳೂರು-560072 ವಿಳಾಸಕ್ಕೆ ತಲುಪಿಸಲು ಸಂಘದ ಅಧ್ಯಕ್ಷ ಟಿ ಹೆಚ್ ನಾಯ್ಕ ಹಾಗೂ ಕಾಯದರ್ಶಿ ಡಾ|| ಮೋಹನದಾಸ್ ಕೆ ಎನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ ಮೋ: 9900158367 ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ
More Stories
ಪ್ರಕೃತಿ ವಿಸ್ಮಯ : ಅಪರೂಪದ ಅವಳಿ ಬೆಕ್ಕಿನ ಮರಿಗಳು.
ಮೇಸ್ತಾ ಪ್ರಕರಣದಲ್ಲಿ ಕಾಗೇರಿಯಿಂದ ಕೀಳುಮಟ್ಟದ ಹೇಳಿಕೆ ನಿರೀಕ್ಷಿಸಿರಲಿಲ್ಲ: ದೇಶಪಾಂಡೆ
ಶೂನ್ಯ ಸಾಧನೆ ಮುಚ್ಚಿಡಲು ಬಿಜೆಪಿಯಿಂದ ಮತ್ತೆ ಮೇಸ್ತಾ ಪ್ರಕರಣ ಮುನ್ನೆಲೆಗೆ: ಭೀಮಣ್ಣ ನಾಯ್ಕ