May 3, 2024

Bhavana Tv

Its Your Channel

ಭೂಮಿ ಹಕ್ಕು, ಮೂಲ ಸೌಕರ್ಯಕ್ಕಾಗಿ ಹಳ್ಳಿ ಕಡೆ ನಡಿಗೆ; ಜಿಲ್ಲಾ ಮಟ್ಟದ ಕಾರ್ಯಕ್ರಮ- ಅಗಸ್ಟ ೨೯ ರಂದು ದೇವನಳ್ಳಿಯಲ್ಲಿ ಪ್ರಾರಂಭ.

ಶಿರಸಿ: ಸ್ವತಂತ್ರ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲಾದ್ಯಂತ ೭೫ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಹಮ್ಮಿಕೊಂಡ ಭೂಮಿ ಹಕ್ಕು, ಮೂಲ ಸೌಕರ್ಯಕ್ಕಾಗಿ ಹಳ್ಳಿ ಕಡೆ ನಡಿಗೆ ಕಾರ್ಯಕ್ರಮವು ಶಿರಸಿ ತಾಲೂಕ ದೇವನಳ್ಳಿ ಗ್ರಾಮ ಪಂಚಾಯತದಲ್ಲಿ ಅಗಸ್ಟ ೨೯ ಸೋಮವಾರ ಮುಂಜಾನೆ ೯:೦೦ ಗಂಟೆಗೆ ಜಿಲ್ಲಾಮಟ್ಟದ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಹಳ್ಳಿ ಕಡೆ ನಡಿಗೆ ಕಾರ್ಯಕ್ರಮವು ಅಂದು ಮುಂಜಾನೆ ೯:೦೦ ಗಂಟೆಗೆ ಶಿರಸಿ ತಾಲೂಕಿನ, ದೇವನಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ, ಕರೂರ ಗ್ರಾಮದ ಈಶ್ವರ ದೇವಸ್ಥಾನದ ಏದುರುಗಡೆಯಿಂದ ಪ್ರಾರಂಭಗೊAಡು ಶಿರಬೈಲ್ ಮಾರ್ಗವಾಗಿ ೭ ಕೀ.ಮೀ ದೂರ ಸಂಚರಿಸಿ ದೇವನಳ್ಳಿ ಗ್ರಾಮ ಪಂಚಾಯತದಲ್ಲಿ ಮಧ್ಯಾಹ್ನ ೧೦:೩೦ ಕ್ಕೆ ಸಭೆ ಸಂಘಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಭೂಮಿ ಹಕ್ಕು ಮತ್ತು ಮೂಲ ಸೌಕರ್ಯದ ಸಮಸ್ಯೆಗಳನ್ನ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಜಿಲ್ಲಾದ್ಯಂತ ೭೫ ಗ್ರಾಮ ಪಂಚಾಯತದಲ್ಲಿ ಮುಂದಿನ ಒಂದು ವರ್ಷದ ಅವಧಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಆಸಕ್ತರು ಆಗಮಿಸಲು ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

error: