May 2, 2024

Bhavana Tv

Its Your Channel

ಅರಣ್ಯ ಇಲಾಖೆಯಿಂದ ಐದು ವರ್ಷದಲ್ಲಿ ಲಕ್ಷಕ್ಕೂ ಮಿಕ್ಕಿ ಗಿಡ ಮರ ನಾಶ; ಸಮಗ್ರ ತನಿಖೆಗೆ ಒತ್ತಾಯ- ರವೀಂದ್ರನಾಯ್ಕ.

ಶಿರಸಿ: ಪರಿಸರ ವಿರೋಧಿ ಅವೈಜ್ಞಾನಿಕ ನೀತಿ ಅಳವಡಿಸಿ, ಇತ್ತೀಚಿನ ಐದು ವರ್ಷಗಳಲ್ಲಿ ಜಿಲ್ಲಾದ್ಯಂತ ಒಂದು ಲಕ್ಷಕ್ಕೂ ಮಿಕ್ಕಿ ಬೆಲೆ ಬಾಳುವ ಗಿಡ, ಮರ ಕಡಿದು ಕೋಟ್ಯಾಂತರ ರೂಪಾಯಿಯ ಅರಣ್ಯ ಪರಿಸರ ಮೌಲ್ಯದ ನಾಶಕ್ಕೆ ಕಾರಣವಾಗಿರುವ ಅರಣ್ಯ ಇಲಾಖೆ ವಿರುದ್ಧ ಸಮಗ್ರ ತನಿಖೆ ಒಳಪಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷರವೀಂದ್ರನಾಯ್ಕ ರಾಜ್ಯಪಾಲರಿಗೆ ಅಗ್ರಹಿಸಿದ್ದಾರೆ.

ಅರಣ್ಯ ಇಲಾಖೆಯ ವಿವಿಧ ಕಾಮಗಾರಿಗಳ ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ದಟ್ಟ ಅರಣ್ಯ ಪ್ರದೇಶದಲ್ಲಿ ಕಾಮಗಾರಿ ಜರುಗಿಸಿ, ಕಳೆದ ಐದು ವರ್ಷದ ಅವಧಿಯಲ್ಲಿ ಅರಣ್ಯ ಪ್ರದೇಶದಲ್ಲಿನ ಒಟ್ಟು ಕಾಮಗಾರಿಕೆ ಕ್ಷೇತ್ರವನ್ನ ಅರಣ್ಯ ಸಾಂದ್ರತೆಯ ಅನುಪಾತಕ್ಕೆ ಹೊಲಿಸಿದಾಗ ಸುಮಾರು ಒಂದು ಲಕ್ಷ ಗಿಡ ಮರ ನಾಶವಾಗಿರಬಹುದೆಂದು ಅವರು ಆಪಾದಿಸಿದ್ದಾರೆ. ಅಲ್ಲದೇ, ಈ ಕಾರ್ಯ ಇಂದಿಗೂ ಸಹಿತ ಮುಂದುವರೆಸಿಕೊAಡು ಬಂದಿರುವುದು ವಿಷಾದಕರ ಎಂದು ಅವರು ಹೇಳಿದರು.
ಪ್ರತಿ ವರ್ಷವೂ ಸಾವಿರಾರು ಮೀಟರ್ ಉದ್ದದ ಪ್ರಾಣಿಗಳ ನಿರ್ಭಂಧಕ್ಕೆ (ಏಪಿಟಿ ಅಳತೆಯ) ಹಾಗೂ ಮಾಲ್ಕಿ ಮತ್ತು ಅರಣ್ಯ ಗಡಿ ಗುರುತಿಸುವಿಕೆಗೆ (ಇಪಿಟಿ ಅಳತೆಯ) ಅಗಳಗಳನ್ನು ಹಾಗೂ ವಿಧ, ವಿಧವಾದ ವಿಶಾಲವಾದ ಅಳತೆಯ ಪ್ರತಿ ವರ್ಷ ಸುಮಾರು 300 ಕ್ಕೂ ಮಿಕ್ಕಿ ಕೆರೆಗಳನ್ನು ಜಿಲ್ಲಾದ್ಯಂತ ಅರಣ್ಯ ಪ್ರದೇಶದಲ್ಲಿನ ಗಿಡ, ಮರ ಇರುವ ಸ್ಥಳದಲ್ಲಿಯೇ ತೆಗೆಯುವುದರಿಂದ, ಅರಣ್ಯನಾಶಕ್ಕೆ ನೇರವಾಗಿ ಇಲಾಖೆಯೇ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿಕ್ರಮವಿಲ್ಲ: ಪರಿಸರಕ್ಕೆ ನಾಶವಾಗಿರುವ ಅರಣ್ಯ ಅಧಿಕಾರಿಯ ಮೇಲೆ ಸೂಕ್ತ ಕ್ರಮ ಜರುಗಿಸಲು ಕಳೆದ ಎರಡು ವರ್ಷದಲ್ಲಿ ಮುಖ್ಯಮಂತ್ರಿಗಳಿಗೆ ಮೂರು ಸಾರೇ ಮನವಿ ನೀಡಿ ಗಮನಕ್ಕೆ ತಂದಾಗಲೂ, ಯಾವುದೇ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಅಗ್ರಹಿಸುತ್ತಿದ್ದೇವೆ.

error: