March 29, 2024

Bhavana Tv

Its Your Channel

ಹಣ ಮಂಜೂರಿ ಇಲ್ಲದೇ, ಕಾಮಗಾರಿ ಘೋಷಣೆ, ಭೂಮಿ ಪೂಜೆಪ್ರಚಾರ ತಂತ್ರ- ಕಾಂಗ್ರೇಸ್ ಧುರೀಣ ರವೀಂದ್ರನಾಯ್ಕ ಟೀಕೆ.

ಶಿರಸಿ: ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶಿರಸಿ-ಸಿದ್ಧಾಪುರ ಕ್ಷೇತ್ರ ವ್ಯಾಪ್ತಿಯ ವಿವಿಧ ಇಲಾಖೆಯ ಕಾಮಗಾರಿಗಳಿಗೆ ಹಣ ಮಂಜೂರಿ ಇಲ್ಲದೇ, ಕಾಮಗಾರಿ ಘೋಷಿಸಿ, ಸ್ಥಳೀಯ ಶಾಸಕರು ಭೂಮಿ ಪೂಜೆ ಮಾಡಿರುವುದು ಚುನಾವಣೆ ಪ್ರಚಾರ ತಂತ್ರವಾಗಿದೆ ಎಂದು ಕಾಂಗ್ರೇಸ್ ಧುರೀಣ ರವೀಂದ್ರನಾಯ್ಕ ಅವರು ಸ್ಥಳೀಯ ಶಾಸಕರ ನೀತಿಯನ್ನು ಟೀಕಿಸಿದ್ದಾರೆ.
ಸ್ಥಳೀಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಭೂಮಿ ಪೂಜೆ ಮಾಡುತ್ತಿರುವ ಕಾಮಗಾರಿಗಳು ಆಯವ್ಯಯರಹಿತ ಕಾಮಗಾರಿಯಾಗಿದ್ದು, ಟೆಂಡರ್ ಪ್ರಕ್ರೀಯೆ ಜರುಗದೇ, ಹಣ ಬಿಡುಗಡೆಗೊಳ್ಳದೇ, ಕಾಮಗಾರಿ ಆದೇಶ ಪ್ರಕ್ರೀಯೆ ಪೂರ್ವದಲ್ಲಿಯೇ ಕೇವಲ ಮತಗಳಿಸುವ ಪ್ರಚಾರ ತಂತ್ರದ ಕಾರ್ಯವಾಗಿದೆ ಎಂದು ಅವರು ಶಿರಸಿ ತಾಲೂಕಿನ, ಹುತ್ಗಾರ್ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕಾಂಗ್ರೇಸ್ ಗ್ಯಾರಂಟಿ ಕಾರ್ಡ ವಿತರಿಸುವ ಸಂದರ್ಭದಲ್ಲಿಮೇಲಿನAತೆ ಹೇಳಿದರು.
ಈಗಾಗಲೇ ಭೂಮಿ ಪೂಜೆ ಮಾಡಿರುವ ಐಗಿನಮನೆ, ಮುಂಡಗಾರ್ ಸೇತುವೆ, ಮುಂತಾದ ಶಿರಸಿ-ಸಿದ್ಧಾಪುರ ತಾಲೂಕಿನ ಸುಮಾರು ೧೫-೧೬ ಕಾಮಗಾರಿಗಳ ಭೂಮಿ ಪೂಜೆ ಜರುಗಿದರೂ, ಚುನಾವಣೆ ನೀತಿ ಸಂಹಿತೆ ಪ್ರಾರಂಭವಾಗಿರುವುದರಿAದ ಈಗಾಗಲೇ ಕರೆದಿದ್ದ ಟೆಂಡರ್ ಪ್ರಕ್ರಿಯೇ ಪೂರ್ಣಗೊಳಿಸಲು ನಿರ್ಭಂದ ಹೇರುವುದರಿಂದ ತರಾತುರಿಯಲ್ಲಿ ಭೂಮಿ ಪೂಜೆ ಮಾಡಿರುವುದು ಚುನಾವಣೆ ಗಿಮಿಕ್ ಆಗಿದೆ ಎಂದು ಅವರು ವ್ಯಾಖ್ಯಾಯಿಸಿದ್ದಾರೆ.
ನೂರು ಕೋಟಿಗೂ ಮಿಕ್ಕಿ ಬಾಕಿ:
ಶಿರಸಿ ಉಪ ವಿಭಾಗದ ವಿವಿಧ ಇಲಾಖೆಯ ಪೂರ್ತಿಯಾಗಿರುವ ಟೆಂಡರ್ ಕಾಮಗಾರಿ ಸುಮಾರು ನೂರು ಕೋಟಿ ಮಿಕ್ಕಿ ಗುತ್ತಿಗೆದಾರರಿಗೆ ನೀಡಬೇಕಾದದ್ದು ಬಾಕಿ ಇದ್ದಾಗಲೂ, ಹೆಡ್ ಆಫ್ ಏಕೌಂಟ್‌ನಲ್ಲಿ ಹಣ ಇಲ್ಲದಿದ್ದಾಗಲೂ ಸಹಿತ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡುತ್ತಿರುವುದು ಚುನಾವಣೆಯ ಮತಗಳಿಸುವ ತಂತ್ರವಾಗಿದೆ ಎಂದು ರವೀಂದ್ರನಾಯ್ಕ ಅವರು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿಯುವ ಧುರೀಣರಾದ ಪ್ರದೀಪ್ ಸಂಜೀವ್ ಶೆಟ್ಟಿ, ನಾಗರಾಜ ಕೃಷ್ಣ ಮುಕ್ರಿ, ಶ್ರೀಧರ ನಾರಾಯಣ ಪೂಜಾರಿ, ಸುರೇಶ್ ಮುನಿಯ ಭೋವಿವಡ್ಡರ್, ಗೋಪಾಲ ಹಾಲಪ್ಪ ಪೂಜಾರಿ, ಮಾಭ್ಲೇಶ್ವರ ಸುಬ್ರಾಯ ನಾಯ್ಕ ಅವರು ಉಪಸ್ಥಿತರಿದ್ದರು.

error: