April 27, 2024

Bhavana Tv

Its Your Channel

ನೆಮ್ಮದಿ ಕುಟೀರದಲ್ಲಿ ಸದಭಿರುಚಿಯ ಸಾಹಿತ್ಯಾಸಕ್ತರ ಗುಂಪಿನ ಚಿಂತಕರ ಚಾವಡಿ

ಸಿರ್ಸಿ :ಶಿರಸಿಯ ನೆಮ್ಮದಿ ಸಂಕೀರ್ಣದ ರಂಗಧಾಮದಲ್ಲಿ ಸಾಹಿತ್ಯ ಚಿಂತಕರ ಚಾವಡಿಯ ವತಿಯಿಂದ ವಾರ್ಷಿಕೋತ್ಸವದ ಅಂಗವಾಗಿ ಸಾಹಿತ್ಯ ಕೃತಿಗಳ ಲೋಕಾರ್ಪಣೆ, ಕವಿಗೋಷ್ಟಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಹಿರಿಯ ಸಾಹಿತಿ ಡಿ.ಎಸ್.ನಾಯ್ಕ ಸರ್ವಾಧ್ಯಕ್ಷತೆಯನ್ನು ವಹಿಸಿಕೊಂಡು ಮಾತನ್ನಾಡಿ  ಅರಳುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಳೆಸುವ ಕಾರ್ಯವನ್ನು ಹಿರಿಯ ಬರಹಗಾರರಾದರು ಮಾಡಬೇಕು. ತಮ್ಮಲ್ಲಿ ಉತ್ಮನ್ನವಾಗುವ  ಸೃಜನಶೀಲತೆಯನ್ನು ಅಭಿವ್ಯಕ್ತಿಪಡಿಸುವಲ್ಲಿ ಹಿಂಜರೆದರೆ ಬೆಳೆಯುವ ಅವಕಾಶವೇ ಇಲ್ಲದಂತಾಗುತ್ತದೆ. ಸರ್ವರೂ ಸೇರಿ ಸಾಹಿತ್ಯದ ತೇರನ್ನೆಳೆಯೋಣ ಎಂದರು.

ಹಿರಿಯ ಪತ್ರಕರ್ತರೂ, ಕವಿಗಳು ಆದ ಜಯರಾಮ ಹೆಗಡೆ ಸಮಾರಂಭ ಉದ್ಘಾಟಿಸಿದರು. ಚಿಂತಕರ ಚಾವಡಿಯ ಗೌರವಾಧ್ಯಕ್ಷರಾದ ಮಂಜುನಾಥ ಹೆಗಡೆ ಹೂಡ್ಲಮನೆ, ಖ್ಯಾತ ವಿಮರ್ಷಕರಾದ ಸುಬ್ರಾಯ ಮತ್ತೀಹಳ್ಳಿ, ಕವಿ ಎ.ಎನ್.ರಮೇಶ ಕೈಗಾ, ಹಿರಿಯ ಚಿಂತಕ ಕೆ.ಮಹಾಬಲ ಮರ್ವಂತೆ ಮತ್ತು ಚಿಂತಕರ ಚಾವಡಿಯ ಸಂಸ್ಥಾಪಕರಾದ ಎಸ್.ಎಸ್.ಭಟ್ ಇವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಟಿ.ಎಮ್.ಜಗದೀಶರವರ “ಜಗ ಜೀವನ” ಕೃತಿ, ಕೆ.ಮಹೇಶರವರ ಕಥಾ ಸಂಕಲನ “ಇಳೆಯೊಳಗಿನ ಮೌನ” ಹಾಗೂ ದಿವಸ್ಪತಿ ಭಟ್ ರ “ಅಂತರಾಳದಿAದ. ಮತ್ತು ಯಮುನಾ ಹೆಗಡೆಯವರ “ಶ್ರೀಶನಿಕಥಾ” ಹಳೆ ಸಾಂಪ್ರದಾಯಿಕ ಹಾಡುಗಳ ಸಂಕಲನ ಮುಂತಾದ ಕೃತಿಗಳು ಲೋಕಾರ್ಪಣೆಗೊಂಡವು. ಪ್ರಕಾಶ ಭಾಗ್ವತ. ಎಸ್.ಎಸ್.ಭಟ್, ಮಹೇಶ ಹನಕೆರೆ ಮತ್ತು ಪೂರ್ಣಿಮಾ ಹೆಗಡೆ ಇವರುಗಳು ಬಿಡುಗಡೆಗೊಂಡ ಪುಸ್ತಕಗಳ ಪರಿಚಯ ಮಾಡಿದರು.ನಂತರ ನಡೆದ ಕಾರ್ಯಕ್ರಮದಲ್ಲಿ ಶಿಶು ಗೀತೆ, ಕವನವಾಚನ, ಗಾಯನಗೋಷ್ಡಿಗೆ ಪ್ರೊ: ಜಿ.ಎ.ಹೆಗಡೆ,ಸೋಂದಾ ಅಧ್ಯಕ್ಷತೆ ವಹಿಸಿದ್ದರು. ಉತ್ತಮ ಕವನಗಳಿಗೆ ಬಹುಮಾನಗಳಿದ್ದು,
ನಿರ್ಣಾಯಕರಾಗಿ ಎಮ್ ಎಸ್ ಹೆಗಡೆ, ಡಿ ಎಸ್ ಭಟ್ಟ. ಉಪಸ್ಥಿತರಿದ್ದರು.
ಹಿರಿಯ ಕವಯತ್ರಿ ನಿರ್ಮಲಾ ಹೆಗಡೆ ಮತ್ತು ಕವಿ ಡಿ.ಎಸ್.ಭಟ್ ರಿಗೆ “ಗೌರವ ಸಮರ್ಪಣೆ” ಸಹ ಆಯೋಜಿಸಲಾಗಿತ್ತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತಿ ಅಚ್ಯುತರಾವ ವಹಿಸಿದ್ದರು. ಕವಿ ಮಹೇಶಕುಮಾರ ಹನಕೆರೆ ಉಪಸ್ಥಿತರಿದ್ದರು. ನಂತರ ನಡೆದ ಮನರಂಜನಾ ಕಾರ್ಯಕ್ರಮಗಳಲ್ಲಿ ನವೀನ ದೊಂಬೆಯವರಿAದ ಹಾಸ್ಯ ಮತ್ತು ಮಿಮಿಕ್ರಿ ಹಾಗೂ ದೀಪಾ ಹೆಗಡೆ,ಯವರಿಂದ ನೃತ್ಯ ರೂಪಕ ಮತ್ತು ವಿದ್ವಾನ್ ಮಹಾಬಲೇಶ್ವರ ಹೆಗಡೆಯವರಿಂದ ಶಾಸ್ತ್ರೀಯ ಗಾಯನ ನಡೆಯಿತು.
ಕವಿಗೋಷ್ಠಿಯಲ್ಲಿ. ಪೂರ್ಣಿಮಾ ಹೆಗಡೆ, ಸುಜಾತ ದಂಟ್ಕಲ್, ಮಂಜುನಾಥ್ ಹೆಗಡೆಹೂಡ್ಲಮನೆ, ರೇಣುಕಾ ಬ್ಯಾಗದ್ದೆ, ಜಯ ಸಿರ್ಸಿಮಕ್ಕಿ ಉಮೇಶ್ ದೈವಜ್ಞ, ನರಸಿಂಹ ಹೆಗಡೆ ಕೋವೆಸರ, ಯಶಸ್ವಿನಿ ಶ್ರೀಧರಮೂರ್ತಿ, ಜಯಪ್ರಕಾಶ ಹಬ್ಬು, ದಿನೇಶ್ ಅಮೀನಳ್ಳಿ, ನಯನಾ ಭಟ್, ಅಂಬಿಕಾ ಹೆಗ್ಗೋಡು, ತೇಜಸ್ವಿನಿ ಅಘನಾಶಿನಿ , ಸುನೀತಾ ಹೆಗಡೆ, ಸುಜಾತಾ ಹೆಗಡೆ ಚವತ್ತಿ, ಶಮಾಚಂದ್ರ, ವಿಮಲಾ ಭಾಗ್ವತ್, ಉಮಾ ಹಿರೇಮಠ,ಎಸ್.ಎಮ್ ಹೆಗಡೆ,ಭವ್ಯಾ ಹಳೆಯೂರು, ಭಾರತಿ ಹೆಗಡೆ, ಶರಾವತಿ ಭಟ್, ರಾಜಲಕ್ಷ್ಮಿ ಭಟ್ ಬೊಮ್ಮನಳ್ಳಿ, ಶ್ರೀಹರಿ ಭಟ್, ಮಹೇಶ ಹನಕೇರಿ, ಹೇಮಾ ಹೆಗಡೆ, ದಾಕ್ಷಾಯಿಣಿ ಪಿ.ಸಿ, ಯಮುನಾ ಹೆಗಡೆ, ಕೆ ಎಸ್ ಅಗ್ನಿಹೋತ್ರಿ, ಗಾಯತ್ರಿ ಹೆಗಡೆ, ಶಂಕರ ಹೊನ್ನೆ ಕೊಪ್ಪ, ಗಿರಿಜಾ ಹೆಗಡೆ, ಪುಷ್ಪಾ ಭಟ್, ಜಲಜಾಕ್ಷಿ ಶೆಟ್ಟಿ, ಸುನೀತಾ ರಾವ್, ಸತೀಶ ಹೆಗಡೆ, ರಾಜೇಶ್ವರಿ ಹೆಗಡೆ, ರೇವತಿ ಭಟ್,ಅಚ್ಯುತ್ ರಾವ್
ಶೋಭಾ ಭಟ್, ನಿರ್ಮಲಾ ಹೆಗಡೆ, ಭಾರತಿ ಹೆಗಡೆ, ಮಧುರಾ ಮತ್ತಿಘಟ್ಟಾ ಇವರುಗಳು ಭಾವಹಿಸಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಎಸ್.ಎಮ್.ಹೆಗಡೆ ಪ್ರಾರ್ಥಿಸಿದರು. ಕೆ.ಮಹೇಶ ಸ್ವಾಗತಿಸಿದರು. ಭವ್ಯಾ ಹಳೆಯೂರು, ಸುಜಾತ ದಂಟಕಲ್, ರಾಜಲಕ್ಷ್ಮಿ ಹೆಗಡೆ ನಿರೂಪಿಸಿದರು. ರೇವತಿ ಭಟ ವಂದಿಸಿದರು.

error: