May 4, 2024

Bhavana Tv

Its Your Channel

ಬೆಂಗಳೂರಿನ ಎಸ್ ಆರ್ ಪ್ರಸನ್ನಕುಮಾರವರಿಂದ ಅಂಕೋಲಾ ಶಾಲೆಗಳಿಗೆ ಪುಸ್ತಕ ವಿತರಣೆ

ವರದಿ:ವೇಣುಗೋಪಾಲ ಮದ್ಗುಣಿ.

ಅಂಕೋಲಾ:- ನಮ್ಮ ಜೀವನದಲ್ಲಿ ಪುಸ್ತಕಗಳು ನಮ್ಮನ್ನು ಪರಿಪೂರ್ಣತೆಯತ್ತ ಕರೆದೊಯ್ಯುತ್ತವೆ. ಪುಸ್ತಕಗಳು ಜ್ಞಾನ ಭಂಡಾರದ ಕೀಲಿ ಕೈ ಇದ್ದ ಹಾಗೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಓದು ವ್ಯಕ್ತಿತ್ವದ ವಿಕಸನಕ್ಕೆ ರಹದಾರಿಯೆಂದು ಬೆಂಗಳೂರಿನ ಲಾಲ್‌ಭಾಗ ತೋಟದ ಹಿರಿಯ ಅಧಿಕಾರಿ ಎಸ್.ಆರ್. ಪ್ರಸನ್ನಕುಮಾರ ಹೇಳಿದರು. ಅವರು ಅಂಕೋಲೆಯ ಮಿತ್ರ ಸಂಗಮದ ಸಹಯೋಗದಲ್ಲಿ ಸರಕಾರಿ ಪ್ರೌಢಶಾಲೆ ಹಾಗೂ ತೆಂಕಣಕೇರಿಯ ಪ್ರಾಥಮಿಕ ಶಾಲೆಗೆ ಉಚಿತ ಪುಸ್ತಕಗಳನ್ನು ವಿತರಿಸಿ ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ನಿವೃತ್ತ ಮುಖ್ಯಾಧ್ಯಾಪಕ, ಲೇಖಕ ಗೋಪಾಲಕೃಷ್ಣ ನಾಯಕ ಮಾತನಾಡಿ, ಕನ್ನಡ ಮೇಲಿನ ಅಭಿಮಾನದಿಂದ ಪ್ರಸನ್ನಕುಮಾರ ದೂರದ ಬೆಂಗಳೂರಿನಿAದ ಬಂದು ಅಂಕೋಲೆಯ ಶಾಲೆಗಳಿಗೆ ಉಪಯುಕ್ತ ಕನ್ನಡ ಪುಸ್ತಕಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ ಸಂಗತಿಯೆAದರು. ಪುಸ್ತಕಗಳನ್ನು ವಿದ್ಯಾರ್ಥಿಗಳು ಪ್ರೀತಿಯಿಂದ ಓದುವ ಮೂಲಕ ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ವೇರ್ಣೇಕರ ಮಾತನಾಡಿ, ಮಿತ್ರ ಸಂಗಮ ಕನ್ನಡ ನಾಡು-ನುಡಿ ಪ್ರೀತಿ ಹೆಚ್ಚಿಸುವ ಕಾರ್ಯಕ್ರಮಗಳ ಜೊತೆಗೆ ರಸಪ್ರಶ್ನೆ ಕಾರ್ಯಕ್ರಮ ಕೂಡಾ ಹಮ್ಮಿಕೊಳ್ಳಲಿದೆ ಎಂದರು. ಪುಸ್ತಕಗಳು ಉತ್ತಮ ಸ್ನೇಹಿತರಾಗಿದ್ದು ಬದುಕಿನ ಒಳ್ಳೆಯ ಸಕಾರಾತ್ಮಕ ಬದಲಾವಣೆಗೆ ಕಾರಣವಾಗುತ್ತದೆಯೆಂದು ಲೇಖಕ ಜೆ. ಪ್ರೇಮಾನಂದ ಅಭಿಪ್ರಾಯಪಟ್ಟರು. ಶಾಲೆಯ ಪರವಾಗಿ ಪುಸ್ತಕಗಳನ್ನು ಸ್ವೀಕರಿಸಿದ ಶಿಕ್ಷಕ ದೇವರಾಯ ಗೋಳಿಕಟ್ಟೆ ಉಪಯುಕ್ತ ಪುಸ್ತಕ ನೀಡಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ಮೋಹನ ಹಬ್ಬು,ರಾಮಕೃಷ್ಣ ಗುಂದಿ, ಶಿಕ್ಷಕ ಉದಯ ನಾಯಕ ಉಪಸ್ಥಿತರಿದ್ದರು. ಮಿತ್ರ ಸಂಗಮದ ಮಹಾಂತೇಶ ರೇವಡಿ ಕಾರ್ಯಕ್ರಮ ನಿರೂಪಿಸಿದರು.
ಮಿತ್ರ ಸಂಗಮ : ಕೊರೊನಾ ಕಾಲದಲ್ಲಿ ಸಾಹಿತ್ಯಿಕ ಸಂಸ್ಥೆಗಳೆಲ್ಲ ನಿಷ್ಕಿೃಯವಾದಾಗ ಸಮಾನ ಮನಸ್ಕ ಸ್ನೇಹಿತರಿಂದ ಹುಟ್ಟಿಕೊಂಡ ಸಂಸ್ಥೆಯೆ ಅಂಕೋಲೆಯ ಮಿತ್ರ ಸಂಗಮ. ಕನ್ನಡ ನಾಡು ನುಡಿ, ಸಂಸ್ಕೃತಿ ವಿದ್ಯಾರ್ಥಿಗಳಲ್ಲಿ ಓದು ಹವ್ಯಾಸ ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ಓದು, ಚರ್ಚೆ, ಚಿಂತನೆಗಳ ಮಧುರ ತಾಣವಾಗಿರುವ ಮಿತ್ರ ಸಂಗಮದಲ್ಲಿ ಸಾಹಿತಿಗಳಾದ ಮೋಹನ ಹಬ್ಬು, ರಾಮಕೃಷ್ಣ ಗುಂದಿ, ಪ್ರಾಚಾರ್ಯ ವೇರ್ಣೆಕರ, ಲೇಖಕರಾದ ಗೋಪಾಲಕೃಷ್ಣ ನಾಯಕ, ಜೆ. ಪ್ರೇಮಾನಂದ, ಮಹಾಂತೇಶ ರೇವಡಿ ಇದ್ದಾರೆ.

error: