
ವರದಿ: ವೇಣುಗೋಪಾಲ ಮದ್ಗುಣಿ
ಯಲ್ಲಾಪುರ : ಗ್ರಾಮ ಪಂಚಾಯತಗಳು ಉದ್ದೇಶಿತ ಕರ ಅಥವಾ ತೆರಿಗೆ ವಸೂಲಿ ಪ್ರಕ್ರಿಯೆಯನ್ನು ವೈಜ್ಞಾನಿಕವಾಗಿ, ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ನಿರ್ವಹಿಸಬೇಕಾದುದು ಅತ್ಯಂತ ಅಗತ್ಯ ಎಂದು ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ ಆಯುಕ್ತಾಲಯದ ಉಪನಿರ್ದೇಶಕ ಜಗದೀಶ ಕೆ.ಜಿ. ಹೇಳಿದರು.
ಯಲ್ಲಾಪುರದ ತಾಲೂಕು ಪಂಚಾಯತ ಸಭಾಭವನದಲ್ಲಿ ಜಿಲ್ಲಾ ಪಂಚಾಯತ, ಉತ್ತರಕನ್ನಡ, ತಾಲೂಕು ಪಂಚಾಯತ ಯಲ್ಲಾಪುರಗಳ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಪಂಚಾಯತ ಅಭಿವೃದ್ಧಿ ಇಲಾಖೆಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಶಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಜಿಲ್ಲೆಯ ಘಟ್ಟದ ಮೇಲಿನ ೬ ತಾಲೂಕುಗಳ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗಾಗಿ ಆಯೋಜಿಸಲಾಗಿದ್ದ ಇ-ಸ್ವತ್ತು ಹಾಗೂ ಗ್ರಾಮ ಪಂಚಾಯತ ತೆರಿಗೆ ಪರಿಷ್ಕರಣೆ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.
ಗ್ರಾಮ ಪಂಚಾಯತಗಳು ಸಾಧ್ಯವಿದ್ದಷ್ಟು ಅಧಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಿ, ಗ್ರಾಮೀಣ ಪ್ರದೇಶದ ಅಭಿವೃದ್ಧಿ ಕಾರ್ಯಗಳಿಗಾಗಿ ನಿಯತ್ತಾಗಿ ಬಳಸುವಂತಾಗಬೇಕು. ಇದು ನಮ್ಮ ಇಲಾಖೆಯ ಮಹತ್ವಾಕಾಂಕ್ಷೆ ಮತ್ತು ಆಶಯ ಆಗಿದೆ ಎಂದರು.
ಸAಪನ್ಮೂಲ ವ್ಯಕ್ತಿಗಳಾಗಿ ತುಮಕೂರಿನ ತಾ.ಪಂ ಅಭಿವೃದ್ಧಿ ಅಧಿಕಾರಿ ಲತಾ ಎಚ್.ವಿ., ಜಿ.ಪಂ (ಆಡಳಿತ) ಉಪಕಾರ್ಯದರ್ಶಿ ನಾಗೇಶ ರಾಯ್ಕರ ಹಾಗೂ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ ವೇದಿಕೆಯಲ್ಲಿದ್ದರು.ಯಲ್ಲಾಪುರ ತಾಲೂಕಿನ ೧೫ ಗ್ರಾಮ ಪಂಚಾಯತಗಳ ಅಭಿವೃದ್ಧಿ ಅಧಿಕಾರಿಗಳ ಸೇರಿದಂತೆ ಸಿದ್ದಾಪುರ, ಮುಂಡಗೋಡ, ಹಳಿಯಾಳ, ಜೋಯಿಡಾ ಹಾಗೂ ದಾಂಡೇಲಿ ತಾಲೂಕುಗಳ ಸುಮಾರು ೧೦೮ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು

.
More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ