
ವರದಿ:ವೇಣುಗೋಪಾಲ ಮದ್ಗುಣಿ
ಯಲ್ಲಾಪುರ; ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿ ಸಿದ್ದಾಂತದಲ್ಲಿ ನಂಬಿಕೆ ಇಟ್ಟು ಏಳುಬೀಳುಗಳನ್ನು ಕಂಡ ನನಗೆ ಈ ಭಾರಿ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಮತದಾರರು ಬೆಂಬಲಿಸುತ್ತಾರೆAಬ ವಿಶ್ವಾಸವಿದೆ ಎಂದು ವಿಧಾನ ಪರಿಷತ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಹೇಳಿದರು.
ಅವರು ಪಟ್ಟಣದ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಪಂಚಾಯತ ವ್ಯವಸ್ಥೆ ಹದಗೆಟ್ಟಿದೆ.ಬಿಜೆಪಿಯಿಂದ ಪಂಚಾಯತಗಳಿಗೂ ಸರಿಯಾದ ಅನುದಾನ ನೀಡಲಾಗುತ್ತಿಲ್ಲ. ಬಿಜೆಪಿ ಕೇವಲ ಮಸೂದೆ ಪಾಸು ಮಾಡಲು ಅಧಿಕಾರ ಪಡೆಯುತ್ತದೆ.ಆದರೆ ಕಾಂಗ್ರೆಸ್ ಜನಪರ ನಿರ್ಧಾರ ತೆಗೆದುಕೊಳ್ಳುತ್ತದೆ. ಜಿಲ್ಲೆಯಲ್ಲಿ ಅಭಿವೃಧ್ದಿ ನಿಂತ ನೀರಾಗಿದೆ.ಅವ್ಯವಸ್ಥೆಯ ಆಗರವಾಗಿದೆ.ಶಾಸಕರು ಸಂಸದರು ಮಂತ್ರಿಗಳು ಅಧಿಕಾರ ಇದ್ದವರೇ ಇದ್ದರೂ ಈ ಸ್ಥಿತಿಯಾಗಿದೆ. ಈ ಚುನಾವಣೆಯಲ್ಲಿ ಪರಿಷತ್ತಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಪಣ ತೊಡಬೇಕೆಂದರು. ತಾಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ.ಎನ್.ಗಾಂವ್ಕಾರ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ವೀಕ್ಷಕಿ ಗಾಯತ್ರಿ ನೇತ್ರೇಕರ್, ಕೆಪಿಸಿಸಿ ಸದಸ್ಯ ಉಲ್ಲಾಸ ಶಾನಭಾಗ, ಹಿರಿಯ ಮುಖಂಡ ಟಿ.ಸಿ.ಗಾಂವ್ಕಾರ,ಸೂರ್ಯನಾರಾಯಣ ಮಾಳಕೊಪ್ಪ,ರವಿಚಂದ್ರ ನಾಯ್ಕ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ದೀಪಕ ದೊಡ್ಡೂರು, ಶ್ರೀಪಾದ ಹೆಗಡೆ ಕಡವೆ, ಆರ್.ಪಿ.ನಾಯ್ಕ, ದಿಲಿಪ್ ರೋಖಡೆ,ಲಾರೇನ್ಸ ಸಿದ್ದಿ, ಪೂಜಾ ನೇತ್ರೇಕರ,ನರ್ಮದಾ ನಾಯಕ ಸಭಾಹಿತ.ಅಣ್ಣಪ್ಪ ನಾಯ್ಕ ಉಪಸ್ಥಿತರಿದ್ದರು

More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ