
ವರದಿ :-ವೇಣುಗೋಪಾಲ ಮದ್ಗುಣಿ
ಯಲ್ಲಾಪುರ:- ಜಿಲ್ಲೆಯ ಜನ ಪ್ರತಿನಿಧಿಗಳು, ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ ವರು, ವಿಧಾನ ಪರಿಷತ್ತಿನ ಸದಸ್ಯರಾದ ಶಾಂತಾರಾಮ ಸಿದ್ದಿ, ಬಿಜೆಪಿಯ ಎಲ್ಲಾ ಶಾಸಕರು ಕಳೆದ ಇಪ್ಪತ್ತು ದಿನಗಳಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಗಣಪತಿ ಉಳ್ವೇಕರ ಪರವಾಗಿ ಪ್ರಚಾರದಲ್ಲಿ ತೊಡಗಿದ್ದು, ಸದಸ್ಯರು ಹುಮ್ಮಸ್ಸಿನಿಂದ ಭಾಗವಹಿಸುತ್ತಿದ್ದಾರೆ.ಬಿಜೆಪಿಯಿಂದ ಅಚ್ಚುಕಟ್ಟಾಗಿ, ಬರದಿಂದ ಪ್ರಚಾರಕಾರ್ಯ ಸಾಗಿದ್ದು ಅಭ್ಯರ್ಥಿ ಐದು ನೂರಕ್ಕೂ ಹೆಚ್ಚಿನ ಮತದಿಂದ ಆರಿಸಿ ಬರುವುದು ಖಚಿತ.ಈಗಾಗಲೇ ರಾಜ್ಯ ಉಪಾಧ್ಯಕ್ಷರಾದ ನಿರ್ಮಲ ಕುಮಾರ್ ಸ್ವರಾನ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿಯವರಾದ ಅರುಣಕುಮಾರ ಯಲ್ಲಾಪುರಕ್ಕೆ ಆಗಮಿಸಿ ಚುನಾವಣೆ ಪೂರ್ವ ಸಿದ್ಧತೆ ಬಗ್ಗೆ ಕಾರ್ಯಗಾರ ನಡೆಸಿದ್ದಾರೆ.ನಾನಾಜಿ ದೇಶಮುಖರವರ ಚಿಂತನೆಯಿoದ ಅಂತ್ಯೋದಯ ವಿಕೇಂದ್ರೀಕರಣ ವ್ಯವಸ್ಥೆ ಯಿಂದ ಪ್ರತಿ ಗ್ರಾಮ ಪಂಚಾಯತದ ಅಭೀವೃದ್ದಿಗೆ ಆಧ್ಯತೆ,ಪ್ರತಿ ಹೊಲಕ್ಕೆ ನೀರುಣಿಸುವದು ಮುಂತಾದ ಕಾಮಗಾರಿಯಿಂದ ಗ್ರಾಮದ ಅಭಿವೃದ್ಧಿ ಮಾಡುವದು.ವಿಧಾನ ಪರಿಷತ್ತಿನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಬಹುಮತವಿರದ ಕಾರಣ ಬಿಲ್ ಗಳು ವಾಪಸ್ಸಾಗುತ್ತಿದ್ದವು.ಆದರೆ ಈ ಸಲ ಹೆಚ್ಚಿನ ಸದಸ್ಯರು ಆರಿಸಿ ಬಂದು ವಿಧಾನ ಪರಿಷತ್ತಿನಲ್ಲಿ ನಮ್ಮದೇ ಬಹುಮತವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯರಾದ ಶಾಂತಾರಾಮ ಸಿದ್ದಿಯವರು ಯಲ್ಲಾಪುರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಯಲ್ಲಾಪುರ ಘಟಕದ ಅಧ್ಯಕ್ಷರಾದ ಗೋಪಾಲಕೃಷ್ಣ ಗಾಂವಕರ ಮಾತನಾಡಿ ಯಲ್ಲಾಪುರದಲ್ಲಿ ಒಟ್ಟು ೧೭೭ ಸದಸ್ಯರಿದ್ದು,ಅದರಲ್ಲಿ ೧೬೦ಜನ ಭಾರತೀಯ ಜನತಾ ಪಕ್ಷದವರು ಮತ್ತು ಬೆಂಬಲಿಗರಾಗಿದ್ದಾರೆ. ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ನೀಡುವುದು, ಭ್ರಷ್ಟಾಚಾರ ಕಡಿಮೆ ಮಾಡುವುದು ನಮ್ಮ ಉದ್ದೇಶ ವಾಗಿದೆ.ಚುನಾವಣೆ ನಿಮಿತ್ತ ಪ್ರತಿ ಪಂಚಾಯತಕ್ಕೆ ಒಬ್ಬನನ್ನು ಉಸ್ತುವಾರಿಯಾಗಿ ನೇಮಿಸಿದ್ದು ಅವರು, ಕಾರ್ಯಕರ್ತರು ಎರಡರಿಂದ ಮೂರೂ ಭಾರಿ ಸದಸ್ಯರನ್ನು ಭೇಟಿಯಾಗಿ ಮತ ಯಾಚಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಸಾದ ಹೆಗಡೆ,ಕೆ.ಟಿ.ಹೆಗಡೆ,ರವಿಭಟ್ಟ, ರಾಮನಾಥ ಸಿದ್ದಿಯವರು ಉಪಸ್ಥಿತರಿದ್ದರು.

More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ