
ವರದಿ: ವೇಣುಗೋಪಾಲ ಮದ್ಗುಣಿ
ಯಲ್ಲಾಪುರ:- ಯಲ್ಲಾಪುರ ತಾಲೂಕು ಕಾಂಗ್ರೆಸ ಕಛೇರಿಯಲ್ಲಿ ಎಂಐ ೧೭ ವಿ೫ ಯುದ್ಧ ಹೆಲಿಕ್ಯಾಪ್ಟರ್ ದುರ್ಘಟನೆಯಲ್ಲಿ ಮೃತರಾದ ಸೇನಾ ಅಧಿಕಾರಿಗೆ ಸಂತಾಪ ಸೂಚಿಸಲಾಯಿತು
ಸಿಡಿಎಸ್ ಬಿಪಿನ್ ರಾವತ ಹಾಗೂ ಇತರ ೧೨ಮಂದಿ ಸೇನಾ ಮುಖಂಡರುಗಳು ಮೃತಪಟ್ಟಿರುವುದು ದುರದೃಷ್ಟಕರ. ದೇಶಾದ್ಯಂತ ಶೋಕ ವಾತಾವರಣ ಸೃಷ್ಟಿಯಾಗಿದ್ದು ದೇಶವೇ ಕಂಬನಿ ಮಿಡಿಯುತ್ತಿದೆ. ಅವರು ಆತ್ಮಕ್ಕೆ ಶಾಂತಿ ಸಿಗಲಿ ಎಂದು ಒಂದು ನಿಮಿಷ ಮೌನದೊಂದಿಗೆ ಶೋಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಕಾಂಗ್ರೆಸ ಅಧ್ಯಕ್ಷರಾದ ಡಿ.ಎನ್ ಗಾವ್ಕರ್, ಬಿಸಿಸಿ ಸದಸ್ಯರಾದ ದೇವಿದಾಸ ಶಾನಭಾಗ, ಹಾಗು ಲಾರೆನ್ಸ್ ಸಿದ್ಧಿ, ಮಾಜಿ ಅಧ್ಯಕ್ಷರಾದ ಎನ್. ಕೆ. ಭಟ್ ಅವರುಗಳು ಸಂತಾಪ ಸೂಚಿಸಿದರು. ಮಹಿಳಾ ಸೆಲ್ ನ ಪೂಜಾ ನೇತ್ರಕರ, ಸರಸ್ವತಿ ಗುನಗಾ, ಮುಸರತ್ ಶೇಕ್, ಪಟ್ಟಣ ಪಂಚಾಯತ ಸದಸ್ಯರಾದ ನರ್ಮದಾ ನಾಯ್ಕ ಹಾಗೂ ಕೈಸರ್ ಅಲಿ, ಪ್ರಧಾನ ಕಾರ್ಯದರ್ಶಿ ಅನಿಲ ಮರಾಠೆ, ಮೈನಾರಿಟಿ ಸೆಲ್ ನ ಅಧ್ಯಕ್ಷರಾದ ಫೈರೋಜ್ ಸೈಯದ್, ಎನ್.ಎನ್. ಹೆಬ್ಬಾರ, ಶಿವಾನಂದ ನಾಯ್ಕ ಹಿರಿಯರಾದ ಭೀಮಶಿ, ಜಿ. ವಿ ಭಟ್ ತಾಲೂಕಿನ ಕಾಂಗ್ರೆಸ ಪಕ್ಷದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು

More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ