

ವರದಿ: ವೇಣುಗೋಪಾಲ ಮದ್ಗುಣಿ
ಯಲ್ಲಾಪುರ; ಸಂಘದ ಚಟುವಟಿಕೆಯ ಮೂಲಕ ಮಹಿಳೆಯರು ಸ್ವಾವಲಂಬನೆಯನ್ನು ಸಾಧಿಸಬೇಕು. ಜೊತೆಗೆ ದೈನಂದಿನ ಅಗತ್ಯಗಳಿಗೆ ತಕ್ಕಷ್ಟು ಕಾನೂನಿನ ಅರಿವನ್ನು ಹೊಂದಬೇಕು ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ ಹೇಳಿದರು.
ಅವರು ತಾಲೂಕಿನ ತೇಲಂಗಾರದ ಆದರ್ಶಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಭಾಗ್ಯಶ್ರೀ ಸಂಜೀವಿನಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟದ ತೇಲಂಗಾರ ವಾರ್ಡ್ ಮಟ್ಟದ ಒಕ್ಕೂಟದ ಆಶ್ರಯದಲ್ಲಿ ಏರ್ಪಡಿಸಿದ್ದ,ಕಾನೂನು ಅರಿವು ಮತ್ತು ಅರಣ್ಯ ಉಳಿಸಿ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಹಿಳಾ ಸಬಲೀಕರಣದ ಸಲುವಾಗಿ ಶೋಷಿತರ,ನೊಂದಿರುವ ಮಹಿಳೆಯರಿಗೆ ಇರುವ ಕಾನೂನುಗಳ ತಿಳಿದುಕೊಳ್ಳಬೇಕಿದೆ.ಸ್ವಸಹಾಯ ಸಂಘಗಳ ಮೂಲಕವೇ ಸಾಮಾಜಿಕ ಅರಣ್ಯದ ಸಸಿ ಬೆಳೆಸುವ,ಸಂಘಗಳ ಕಿರು ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ತನ್ಮೂಲಕ ಮಹಿಳಾ ಸಬಲೀಕರಣದ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಎಸಿಎಫ್ ಹಿಮವತಿ ಭಟ್ಟ ಮಾತನಾಡಿ”ಕಾಡನ್ನು ಉಳಿಸುವುದು ಕೇವಲ ಕಾನೂನಿನಿಂದ ಸಾಧ್ಯವಿಲ್ಲ.ಪರಿಸರದ ಅವಲಂಬನೆ,ಬಳಕೆ ಹಿತ ಮಿತ ಆಗುವ ಬಗ್ಗೆ ಎಲ್ಲರಲ್ಲಿ ಜಾಗ್ರತಿ ಮೂಡಬೇಕು” ಎಂದರು.
ಮಹಿಳೆಯರಿಗೆ ಇರುವ ಉಚಿತ ಕಾನೂನು ನೆರವು ಅರಿವಿನ ಕುರಿತು ನ್ಯಾಯವಾದಿ ಅಮೀನಾ ಶೇಖ ಉಪನ್ಯಾಸ ನೀಡಿದರು. ವಾರ್ಡ ಒಕ್ಕೂಟದ ಅಧ್ಯಕ್ಷರಾದ ಅನ್ನಪೂರ್ಣ ಆರ್ ಭಟ್ಟ ತೇಲಂಗಾರ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಜೀವಿನಿ ಒಕ್ಕೂಟಗಳ ಮೇಲ್ವಿಚಾರಕ ರಾಜಾರಾಮ ವೈದ್ಯ.ಪತ್ರಕರ್ತ ಸುಬ್ರಾಯ ಬಿದ್ರೆಮನೆ, ಮುಖ್ಯ ಪುಸ್ತಕ ಬರಹಗಾರ್ತಿ ಶರೀಫಾಬಿ ಮುಲ್ಲಾ. ಸಂಪನ್ಮೂಲ ವ್ಯಕ್ತಿ ಸಂಗೀತಾ ಗಾಂವ್ಕಾರ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿಕಲ ಚೇತನರ ಸ್ವಸಹಾಯ ಸಂಘವನ್ನು ಸಾಂಕೇತಿಕವಾಗಿ ಉದ್ಘಾಟಿಸಲಾಯಿತು.
ಭಾಗೀರಥಿ ಭಟ್ಟ ಸ್ವಾಗತಿಸಿದರು.ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ರತ್ನಾ ಬಾಂದೇಕರ ನಿರೂಪಿಸಿದರು.ಹೇಮಾವತಿ ಆಚಾರಿ ವಂದಿಸಿದರು.
More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ