May 6, 2024

Bhavana Tv

Its Your Channel

ಭಂಡಾರಿ ಸಮಾಜದ ಸಂಘಟನೆಯನ್ನು ಕೈಗೊಳ್ಳಲು ಯಲ್ಲಾಪುರದಲ್ಲಿ ಸಮಾಜದ ಪ್ರಮುಖರಿಂದ ಸಭೆ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ;ಭಂಡಾರಿ ಸಮಾಜದ ಸಂಘಟನೆಯನ್ನು ಕೈಗೊಳ್ಳುವ ದೃಷ್ಟಿಯಿಂದ ಪಟ್ಟಣದ ವೆಂಕಟ್ರಮಣ ಮಠದಲ್ಲಿ ಸಮಾಜದ ಪ್ರಮುಖರ ಸಭೆ ನಡೆಯಿತು.

ಸಮಾಜದ ಪ್ರಮುಖರಾದ ಜಿ.ಎಸ್.ಪತ್ರೇಕರ ಹಾಗೂ ಅಶೋಕ.ಬಿ. ನಾಯ್ಕ,ಅವರ ನೇತೃತ್ವದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಸಂಘಟನೆಯ ಅಗತ್ಯತೆ,ಸಮಾಜ ಬಾಂದವರು ಒಗ್ಗೂಡ ಬೇಕಾದ ಅವಶ್ಯಕತೆಗಳ ಕುರಿತು ಚರ್ಚಿಸಲಾಯಿತು.
ನಂತರ ಸರ್ವಾನುಮತದಿಂದ 14 ಸದಸ್ಯರ ಆಡಳಿತ ಸಮಿತಿಯನ್ನೂ ಮತ್ತು 25 ಸದಸ್ಯರ ಸಲಹಾ ಸಮಿತಿಯನ್ನೂ ರಚಿಸಲಾಯಿತು. ಸಮಾಜದ ಮುಖಂಡ ಪ್ರೇಮಾನಂದ ನಾಯ್ಕ ಚಿನ್ನಾಪುರ ಇವರನ್ನು ಆಡಳಿತ ಸಮಿತಿಯ ಅಧ್ಯಕ್ಷರನ್ನಾಗಿ,ಎಸ್ ಟಿ.ಭಂಡಾರಿ ಇವರನ್ನು ಗೌರವಾಧ್ಯಕ್ಷ ರನ್ನಾಗಿಯೂ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ನಾಗೇಂದ್ರ ಪತ್ರೇಕರ ಹಾಗೂ ಸಿ ಪಿ ನಾಯ್ಕ ,ಕಾರ್ಯದರ್ಶಿಯಾಗಿ ಸಂತೋಷ ಪೆಡ್ನೇಕರ ಖಜಾಂಚಿಯಾಗಿ ಪಾಂಡುರAಗ ಕಲ್ಗುಟ್ಕರವರನ್ನು ಮಾಡಲಾಯಿತು. ಸಮಿತಿಯ ಸದಸ್ಯರಾಗಿ ಶಾರದಾ ಭಂಡಾರಿ,ಸುಮAಗಲಾ ನಾಯ್ಕ, ರೋಹಿದಾಸ ಭಂಡಾರಿ, ಜಿ.ಎಸ್.ಪತ್ರೆಕರ, ಅಶೋಕ ನಾಯ್ಕ, ರೋಹಿದಾಸ ಮಾಂಜ್ರೇಕರ, ಗಣೇಶ ಬಂಡಾರಿ,ಪ್ರದೀಪ ಕಲ್ಗುಟ್ಕರ್, ಅವರನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾದ ಪ್ರೇಮಾನಂದ ನಾಯ್ಕ ಮಾತನಾಡಿ, ಸಮಾಜ ಬಾಂಧವರೆಲ್ಲರನ್ನು ಸಂಘಟಿಸಿ,ಸಮಾಜದ ಅಭಿವೃದ್ದಿಗೆ ಶ್ರಮಿಸುವುದು ಸಂಘದ ಉದ್ದೇಶವಾಗಿದೆ.ಒಗ್ಗಟ್ಟಿನಿಂದ ಮುನ್ನೆಡೆದರೆ,ಸಮಾಜದ ಬೇಡಿಕೆಗಳನ್ನ ಈಡೇರಿಸಿ ಕೊಳ್ಳಲು ಸಾಧ್ಯ.ಆ ದೃಷ್ಟಿಯಿಂದ ಸಮಿತಿ ಕಾರ್ಯ ನಿರ್ವಹಿಸಲಿದೆ ಎಂದರು.
ಸಮಾಜದ ಪ್ರಮುಖರಾದ ಜಿ.ಎಸ್.ಪತ್ರೇಕರ ಸಿ.ಪಿ.ನಾಯ್ಕ, ಅನಿಲ.ಬಿ.ನಾಯ್ಕ ಚಿನ್ನಾಪುರ, ಸತೀಶ. ಬಿ.ನಾಯ್ಕ ,ಪಟ್ಟಣ ಪಂಚಾಯತ ಸದಸ್ಯರಾದ ಗೀತಾ ಭಂಡಾರಿ ಮುಂತಾದವರು ಸಂಘಟನೆಯ ಪ್ರಾಮುಖ್ಯತೆಯ ಕುರಿತು ಅಭಿಪ್ರಾಯ ಹಂಚಿಕೊoಡರು. ಸಿ.ಎಸ್.ಪತ್ರೇಕರ ನಿರ್ವಹಿಸಿದರು. ಅನಿಲ ಬಿ.ನಾಯ್ಕ ವಂದಿಸಿದರು.

error: