
ವರದಿ: ವೇಣುಗೋಪಾಲ ಮದ್ಗುಣಿ
ಯಲ್ಲಾಪುರ: ಬೇಡ್ತಿಯೋಜನೆ ಜಾರಿಯಾದಲ್ಲಿ ನದಿ ಪಾತ್ರದ ಜನರಿಗೂ ನೀರಿಲ್ಲ ಬಯಲು ಸೀಮೆಯವರಿಗೂ ನೀರಿಲ್ಲದಂತಾಗುತ್ತದೆ ಎoದು ಸ್ವರ್ಣವಲ್ಲಿ ಶ್ರೀಗಂಗಾಧರೇoದ್ರ ಸರಸ್ವತಿ ಶ್ರೀ ಹೇಳಿದರು.
ಅವರು ಮಂಚಿಕೇರಿಯಲ್ಲಿ ನಡೆದ ಬೇಡ್ತಿ ವರದಾ ನದಿ ಜೋಡಣೆ ಜನಜಾಗೃತಿ ಸಮಾವೇಶದ ಸಾನಿಧ್ಯವಹಿಸಿ ಮಾತನಾಡುತ್ತಿದ್ದರು.ಎತ್ತಿನ ಹೊಳೆ ಯೋಜನೆ ವಿಫಲವಾದ ನಿದರ್ಶನ ಇದೆ.ನೀರಿನ ಕೊರತೆ ನೀಗಿಸಲು,ಮಳೆ ನೀರಿನ ಸಂಗ್ರಹ ಯೋಜನೆ ಕಡ್ಡಾಯವಾಗಿ ಬರಲಿ.ಜನರಿಗೆ ಬೇಡವಾದ ಯೋಜನೆ ಖಂಡಿತ ಬೇಡ.ಒಂದು ಜಿಲ್ಲೆಗೆ ಸಾಕಾಗದ ನೀರು ಐದು ಜಿಲ್ಲೆಗೆ ಹೇಗೆ ಸಾಕಾದಿತು ಎಂದು ಪ್ರಶ್ನಿಸಿದರು.ನೀರು ಕೊಂಡೊಯ್ಯುವುದು ಅನ್ಯಾಯ.ಯೋಜನೆ ಹಿಮ್ಮೆಟ್ಟಿಸಲು ಜನಾಂದೋಲನ ಆಗಬೇಕು. ಎಂದರು.
ಜೈನಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಭಟ್ಟಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ”ಹಸಿರು ಕ್ಷೇತ್ರ ಕಾಯ್ದು ಕೊಳ್ಳಬೇಕು.ನೀರಿಲ್ಲದ ಬೇಡ್ತಿ,ವರದಾ ನದಿ ಜೋಡಣೆ ಸಾಧುವಲ್ಲ.ಜನ ವಿರೋಧಿ ಯೋಜನೆಯ ಬಗ್ಗೆ ಸರಕಾರದ ಕಣ್ಣುತೆರಸಿ ಯೋಜನೆ ನಿಲ್ಲಿಸುವ ಕೆಲಸ,ಹೋರಾಟ ಆಗಬೇಕು.ಎಂದರು.
ಬೇಡ್ತಿ,ಅಘನಾಶಿನಿ ಕೊಳ್ಳ ಸಮೀತಿ ಪ್ತಧಾನಕಾರ್ಯದರ್ಶಿ ಅನಂತ ಹೆಗಡೆ ಅಶೀಸರ ಪ್ರಸ್ತಾಪಿಸಿದರು.ವಿಧಾನ ಪರಿಷತ್ತಿನ ಸದಸ್ಯರಾದ ಶಾಂತಾರಾಮ ಸಿದ್ದಿ ಮಾತನಾಡಿ,”ಸರಕಾರದ ಭಾಗ ನಾವಾದರೂ,ಜನರಿಗೆ ತೊಂದರೆಯಾಗುವ ಯೋಜನೆವಾಗಿರುವುದರಿಂದ ಖಂಡಿತವಾಗಿ ವಿರೋಧಿಸುತ್ತೇನೆ.ಎಂದರು.
ಸಾಮಾಜಿಕ ಕಾರ್ಯಕರ್ತ ಶಶಿಭೂಷಣ ಹೆಗಡೆ ಮಾತನಾಡಿ,” ಪ್ರಕೃತಿ ಮುನಿದರೆ,ಎನಾಗುತ್ತದೆ ಎಂಬುದಕ್ಕೆ ಕಳೆದವರ್ಷ ಕಳಚೆಯ ಭೂಕುಸಿತ ನಿದರ್ಶನ ಇದೆ.ನಮ್ಮ ಕೂಗು ಸರಕಾರವನ್ನು ಮುಟ್ಟಬೇಕು.ಸರಕಾರದ ನಿಲುವು ಖಂಡಿಸುವ ನಿರ್ಣಯ ಜನಪ್ರತಿನಿಧಿಗಳು ಮಾಡಬೇಕು”ಎಂದರು.
ಪಂಚಾಯತ್ ರಾಜ್ ಸಮೀತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ”ಜಿಲ್ಲೆಗೆ ವರವಾದ ಪ್ರಕೃತಿಯೇ ವಿವಿಧ ಯೋಜನೆಯ ಹೆಸರಲ್ಲಿ ಶಾಪವಾಗಿರುವುದು ವಿಪರ್ಯಾಸ.ಎಂದರು”.
ವಾ.ಕ.ರಾ.ರ.ಸAಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ್ ಮಾತನಾಡಿ,”ಜನ ವಿರೋಧಿ ಯೋಜನೆ ತಕ್ಷಣ ಕೈಬಿಡಬೇಕೆಂದರು.”
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ,”ಜನರ ಭಾವನೆಗೇ ನನ್ನ ಭಾವನೆ ಜೋಡಿಸಿ,ಯೋಜನೆಯ ಸಾಧಕ ಭಾದಕಗಳ ಬಗ್ಗೆ ಸಿ.ಎಂ ನೇತೃತ್ವದಲ್ಲಿ ಸಭೆ ನಡೆಸಿ,ಜನರ ಅಹವಾಲುಗಳನ್ನು ಸರಕಾರದ ಮುಂದೆ ಜಿಲ್ಲೆಯ ಜನಪ್ರತಿನಿಧಿಗಳು ಮಂಡಿಸಲು ಭದ್ದರಾಗಿದ್ದೇವೆ. ಎಂದರು.
ಭೂಗರ್ಭಶಾಸ್ತ್ರಜ್ಞ ಜಿ.ವಿ.ಹೆಗಡೆ,ಡಾ.ಬಾಲಚಂದ್ರ ಹೆಗಡೆ,ಲೇಖಕ ಶಿವಾನಂದ ಕಳವೆ,ಉಮಚಗಿ ಸೊಸೈಟಿ ಅಧ್ಯಕ್ಷ ಎಂ.ಜಿ.ಭಟ್ಟ,ಹಾಸಣಗಿ ಸಂಘದ ಅಧ್ಯಕ್ಷ ಆರ್.ಎನ್.ಹೆಗಡೆ ಗೊರ್ಸಗದ್ದೆ,ರಂಗ ಸಮೂಹದ ಅಧ್ಯಕ್ಷ ರಾಮಕೃಷ್ಣ ದುಂಢಿ,ಕೆ.ಎAಎಫ್ ನಿರ್ಧೇಶಕ ಸುರೇಶ್ಚಂದ್ರ ಹೆಗಡೆ,ಡಾ.ಕೇಶವ ಕೂರ್ಸೆ,ಹಾಸಣಗಿ ಹಾಗೂ ಕಂಪ್ಲಿ ಗ್ರಾ.ಪಂ ಅಧ್ಯಕ್ಷರಾದ ವಿನಾಯಕ ನಾಯ್ಕ,ಹಾಗೂ ಪುರಂದರ ನಾಯ್ಕ,ಇದ್ದರು.
ಭರತನಹಳ್ಳಿ ಸೀಮಾಧ್ಯಕ್ಷ ಶ್ರೀಪಾದ ಹೆಗಡೆ ಶಿರನಾಲಾ ಶ್ರೀಗಳಿಗೆ ಫಲಸಮರ್ಪಣೆ ಮಾಡಿದರು.ಬೇಡ್ತಿ ಅಘನಾಶಿನಿ ಕೊಳ್ಳ ಸಮೀತಿ ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಬೊಮ್ಮನಳ್ಳಿ ಸ್ವಾಗತಿಸಿದರು.
ಸಮೀತಿಯ ಪ್ರಮುಖರಾದ ಎಂ.ಕೆ.ಭಟ್ಟ ಯಡಳ್ಳಿ,ನಾರಾಯಣ ಗಡಿಕೈ,ಗಣಪತಿ ಬಿಸ್ಲಕೊಪ್ಪ ನಿರೂಪಿಸಿದರು. ಸ್ವರ್ಣವಲ್ಲಿ ಮಾತೃಮಂಡಳಿ ಅಧ್ಯಕ್ಷೆ ಗೀತಾ ಹೆಗಡೆ ಶೀಗೆಮನೆ ನಿರ್ಣಯ ಮಂಡಿಸಿದರು.ಸಮೀತಿ ಸಂಚಾಲಕ ನಾರಾಯಣ ಹೆಗಡೆ ಭಟ್ರಕೇರಿ ವಂದಿಸಿದರು.

More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ