ವರದಿ: ವೇಣುಗೋಪಾಲ ಮದ್ಗುಣಿ
ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಈರಾಪುರದಲ್ಲಿ ಬಸ್ ಓಡಾಟಕ್ಕೆ ಅಗತ್ಯವಾಗಿರುವ ಕಡೆಗಳಲ್ಲಿ ಗ್ರಾಮಸ್ಥರೇ ಬುಧವಾರ ಶೃಮದಾನದ ಮೂಲಕ ರಸ್ತೆ ದುರಸ್ತಿ ಮಾಡಿದ್ದಾರೆ.
ಈ ಹಿಂದೆ ಬಸ್ ಓಡಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಹೆಬ್ಬಾರಕುಂಬ್ರಿಯಿAದ ಈರಾಪುರಕ್ಕೆ ಸಿಸಿ ರಸ್ತೆ ಇದ್ದರೂ, ಕೆಲವೆಡೆ ಬಸ್ ಓಡಾಟಕ್ಕೆ ಸಮಸ್ಯೆಯಾಗುತ್ತದೆ ಎಂದು ಬಸ್ ಚಾಲಕರು ತಕರಾರು ಮಾಡುತ್ತಿದ್ದರು. ಅದರ ನಂತರ ಈರಾಪುರಕ್ಕೆ ಬಸ್ ಓಡಾಟ ಬಂದ್ ಮಾಡಲಾಗಿತ್ತು.
ಇದೀಗ ಪುನಃ ಆರಂಭಿಸುವAತೆ ಆ ಭಾಗದ ಮಹಿಳೆಯರು ಬಸ್ ಘಟಕದಲ್ಲಿ ಮನವಿ ಸಲ್ಲಿಸಿದ್ದರು. ಬಸ್ ಓಡಾಟ ಆರಂಭವಾದ ನಂತರ ಮತ್ತೆ ಬಸ್ ಚಾಲಕರು ರಸ್ತೆ ವಿಚಾರದಲ್ಲಿ ತಕರಾರು ಮಾಡಬಾರದೆಂಬ ಹಿನ್ನೆಲೆಯಲ್ಲಿ ಮಹಿಳೆಯರು, ಗ್ರಾಮಸ್ಥರು ಸೇರಿ ರಸ್ತೆ ದುರಸ್ತಿ ಮಾಡಿದ್ದಾರೆ.
ಗ್ರಾಮ ಪಂಚಾಯತ ಸದಸ್ಯರಾದ ತಿಮ್ಮಣ್ಣ ಗಾಂವ್ಕಾರ ಗ್ರಾಮಸ್ಥರ ಮನವಿಗೆ ಸ್ಪಂದಿಸಿ, ರಸ್ತೆಗೆ ಕಡಿ ವ್ಯವಸ್ಥೆ ಕಲ್ಪಿಸಿದ್ದು, ಗ್ರಾಮಸ್ಥರು ಶ್ರಮದಾನದ ಮೂಲಕ ಈರಾಪುರ ಶಾಲೆ, ತ್ರಯಂಬಕೇಶ್ವರ ದೇವಸ್ಥಾನದ ಬಳಿ ಕಡಿ, ಮಣ್ಣು ಹಾಕಿ ರಸ್ತೆ ಸರಿಪಡಿಸಿದರು.
ಇನ್ನಾದರೂ ಯಾವುದೇ ನೆಪ ಹೇಳದೇ ಈರಾಪುರಕ್ಕೆ ಬಸ್ ಓಡಾಟ ಆರಂಭಿಸಬೇಕು. ಇಲ್ಲವಾದಲ್ಲಿ ಹೆಬ್ಬಾರಕುಂಬ್ರಿ ಬಳಿ ಕಳಚೆ ಬಸ್ ತಡೆದು ಪ್ರತಿಭಟನೆ ನಡೆಸಲಾಗುವುದೆಂದು
ಸ್ತ್ರೀ ಶಕ್ತಿ ಸಂಘದ ಪ್ರಮುಖರಾದ ವೀಣಾ ಹೆಬ್ಬಾರ್, ನಾಗರತ್ನಾ ಗಾಂವ್ಕಾರ, ಸುಮಿತ್ರಾ ಗಾಂವ್ಕರ, ಅಂಜಲಿ ಅಣ್ಣಪ್ಪ ದೇವಳಿ, ಅಮೃತಾ ಭಟ್ಟ
ಮುಂತಾದವರು ಎಚ್ಚರಿಸಿದ್ದಾರೆ.
More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ