ವರದಿ: ವೇಣುಗೋಪಾಲ ಮದ್ಗುಣಿ
ಯಲ್ಲಾಪುರ : ವನವಾಸಿ ಕಲ್ಯಾಣದ ಪ್ರಾಂತ ಕಾರ್ಯದರ್ಶಿ ಹಾಗೂ ವಿಧಾನ ಪರಿಷತನ ಸದಸ್ಯರಾದ ಶಾಂತಾರಾಮ ಸಿದ್ದಿಯವರು ಪಟ್ಟಣದ ಗಣಪತಿ ಗಲ್ಲಿಯಲ್ಲಿ ಗಣಪತಿ ಮನೆಪಾಠ ಕೇಂದ್ರದ ಪ್ರಾರಂಬೊತ್ಸವ ಕಾರ್ಯಕ್ರಮ ಉದ್ಘಾಟಿಸಿ ಮನೇಪಾಠ ಕೇಂದ್ರದ ಮಹತ್ವದ ಬಗ್ಗೆ ತಿಳಿಸಿದರು .
ಶಿಕ್ಷಣದ ಜೊತೆಗೆ ಶಾರೀರಿಕ ಬೆಳವಣಿಗೆ, ದೇಶಪ್ರೇಮ,ಸಂಸ್ಕ್ರತಿ ಒಟ್ಟಾರೆ ವ್ಯಕ್ತಿತ್ವ ವಿಕಸನ ವಾಗುವಂತ ಶಿಕ್ಷಣ ನೀಡುವಂತ ಈ ಕೇಂದ್ರ ಇಲ್ಲಿನ ಗೋಸಾವಿ ಸಮಾಜದ ಮಕ್ಕಳಿಗೆ ಅನುಕೂಲವಾಗಲಿ ಎಂದು ಹಾರೈಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಸಾವಿ ಸಮುದಾಯದ ಮುಖಂಡರಾದ ರಾಮದಾಸ ಬಾಬು ಗೋಸಾವಿ ವಹಿಸಿದ್ದರು, ಮುಖ್ಯ ಅಥಿತಿಗಳಾಗಿ ಗಣಪತಿಗಲ್ಲಿ ಶಾಲೆ ಮುಖ್ಯೋಪಾಧ್ಯಾಯರಾದ ರಾಮಚಂದ್ರ ನಾಯ್ಕ, ಪಟ್ಟಣ ಪಂಚಾಯತ ಉಪಾಧ್ಯಕ್ಷರಾದ ಶಾಮಿಲಿ ಪಾಠಣಕರ, ನಿಲಯ ಸಮಿತಿ ಅಧ್ಯಕ್ಷರಾದ ಟಿ ಆರ್ ಹೆಗಡೆ, ಸ್ಥಾಯಿಸಮಿತಿ ಅಧ್ಯಕ್ಷರಾದ ಆದಿತ್ಯ ಗುಡಿಗಾರ, ಪಟ್ಟಣ ಪಂಚಾಯತ ಗಣಪತಿ ಗಲ್ಲಿ ವಾರ್ಡ ಸದಸ್ಯರಾದ ಪ್ರಕಾಶ ತಳವಾರ, ವಿಶ್ವ ಹಿಂದೂ ಪರಿಷತ್ ಯಲ್ಲಾಪುರ ತಾಲೂಕ ಅಧ್ಯಕ್ಷರಾದ ಶ್ರೀ ನಾರಾಯಣ ನಾಯ್ಕ,ವನವಾಸಿ ಕಲ್ಯಾಣ ಶಿರಸಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀ ಸಿದ್ದು ಜೋರೆ,ಶಿರಸಿ ಜಿಲ್ಲಾ ಶಿಕ್ಷಣ ಪ್ರಮುಖ ಭಾಗೂ ಕಾತ್ರೋಟ್ ಹಾಗೂ ಸಂಘದ ಕಾರ್ಯಕರ್ತರು, ವನವಾಸಿ ಕಲ್ಯಾಣದ ಕಾರ್ಯಕರ್ತರು, ವಸತಿ ನಿಲಯ ಸಮಿತಿಯ ಕಾರ್ಯಕರ್ತರು, ಪಾಲಕರು, ಮಕ್ಕಳು, ಇನ್ನಿತರರು ಉಪಸ್ಥಿತರಿದ್ದರು.
More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ