May 4, 2024

Bhavana Tv

Its Your Channel

ಯಲ್ಲಾಪುರ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದವತಿಯಿoದ ಪತ್ರಿಕಾ ದಿನಾಚರಣೆ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಸಾಮಾಜಿಕ ಲೋಪದೋಷಗಳನ್ನು ತಿದ್ದಿ ತೀಡುವ ಮೂಲಕ ಸಾನಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರು ಪಾತ್ರ
ಪ್ರಮುಖವಾಗಿದೆ ಎಂದು ಕಾರ್ಮಿಕ ಇಲಾಖೆಯ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಅವರು ಪಟ್ಟಣದ ಅರಣ್ಯ ಭವನದಲ್ಲಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದವತಿಯಿAದ ಶುಕ್ರವಾರ ಸಂಜೆ ಆಯೋಜಿಸಿದ್ದ ” ಪತ್ರಿಕಾ ದಿನಾಚರಣೆ ಸನ್ಮಾನ – ಪ್ರತಿಭಾ ಪುರಸ್ಕಾರ ” ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕವಾಗಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಎಲ್ಲಾ ಕ್ಷೇತ್ರಗಳ ಮೌಲ್ಯವೂ ಕುಸಿಯುತ್ತಿದ್ದು,ಇಂತಹ ಸಂದರ್ಭದಲ್ಲಿ ಮುದ್ರಣ ಮಾಧ್ಯಮವು ಉಳಿಸಿಕೊಂಡು ಬಂದ ಬದ್ದತೆಯಿಂದ ಉಳಿದ ಕ್ಷೇತ್ರಗಳ ಘನತೆ ಎತ್ತರಿಸುವ,ಎಚ್ಚರಿಸುವ ಕೆಲಸ ಮಾಡಬೇಕು ಎಂದರು.
ಹಿರಿಯ ಪತ್ರಕರ್ತರಾದ ಉಮಾಮಹೇಶ್ವರ ಭಟ್ಟ ಮೊಳೆಮನೆ,ಭಾಸ್ಕರ ಹೆಗಡೆ ಗೇರಾಳ,ಸತೀಶ ಯಲ್ಲಾಪುರ ಅವರನ್ನು ಪತ್ರಿಕಾ ವಿತರಕ ರಾಜು ಉಡುಪಿಕರ ಅವರನ್ನು ಸನ್ಮಾನಿಸಿದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ್ ಮಾತನಾಡಿ,”ಪತ್ರಿಕೆಗಳ ಅರೆಬರೆ ಸುದ್ದಿಯನ್ನು ಜಾಲತಾಣಗಳಲ್ಲಿ ಹಂಚುವ ಬದಲು ಪತ್ರಿಕೆ ಕೊಂಡು ಓದುವ ಪ್ರವೃತ್ತಿ ಬೆಳಸಿಕೊಳ್ಳ ಬೇಕೆಂದರು.”
ವಿಧಾನ ಪರಿಷತ ಸದಸ್ಯರಾದ ಶಾಂತಾರಾಮ ಸಿದ್ದಿ ಮಾತನಾಡಿ,” ಎಷ್ಟೇ ಸಾಮಾಜಿಕ ಜಾಲತಾಣಗಳ ಹಾವಳಿ ಹಬ್ಬಿದರೂ,ವಸ್ತುನಿಷ್ಠತೆ,ನಿಖರತೆಗೆ ಉಳಿಸಿಕೊಂಡು ಬಂದ ಮುದ್ರಣ ಮಾಧ್ಯಮ ವಿಶೇಷ ಸ್ಥಾನ ಮಾನ ಹೊಂದಿದೆ” ಎಂದರು.
ಕಲಾವಿದ ಸತೀಶ ಯಲ್ಲಾಪುರ ಪರಿಸರ ಮತ್ತು ಮಾಧ್ಯಮ ಕುರಿತು ಉಪನ್ಯಾಸ ನೀಡಿದರು.
ಪಂಚಾಯತ ರಾಜ್ಯ ವಿಕೇಂದ್ರೀಕರಣ ಸಮಿತಿಯ ಅಧ್ಯಕ್ಷ ಪ್ರಮೋದ ಹೆಗಡೆ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ,ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ,ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿ.ಎಸ್.ಭಟ್ ಉಪಸ್ಥಿತರಿದ್ದರು.ಸರ್ವೋತ್ತಮ ಸೇವಾ ಪ್ರಶಸ್ತಿಗೆ ಬಾಜನರಾದ ತಹಶಿಲ್ದಾರ ಶ್ರೀಕೃಷ್ಣ ಕಾಮ್ಕರ ಅವರನ್ನು ಗೌರವಿಸಲಾಯಿತು.
ತಾಲೂಕಾ ಕಾರ್ಯನಿರತ ಪತ್ರಕರ್ತ ಸಂಘದ ತಾಲೂಕಾ ಅಧ್ಯಕ್ಷ ಕೆ.ಎಸ್.ಭಟ್ಟ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿನಿ ಆಶಾ ಬೆಳ್ಳನ್ನವರ್ ಪ್ರಾರ್ಥಿಸಿದರು.ಸಂಘದ ಕಾರ್ಯದರ್ಶಿ ಶ್ರೀಧರ ಅಣಲಗಾರ ಸ್ವಾಗತಿಸಿದರು.ಉಪಾಧ್ಯಕ್ಷ ಜಿ.ಎನ್.ಭಟ್ಟ ತಟ್ಟಿಗದ್ದೆ ಪ್ರಸ್ತಾಪಿಸಿದರು.ಪತ್ರಕರ್ತ ಸುಬ್ರಾಯ ಬಿದ್ರೆಮನೆ ನಿರೂಪಿಸಿದರು.ಪತ್ರಕರ್ತರಾದ ಪ್ರಭಾವತಿ ಗೊವಿ,ಜೈರಾಜ ಗೋವಿ,ದತ್ತಾತ್ರಯ ಕಣ್ಣಿಪಾಲ್ ಸನ್ಮಾನಪತ್ರ ವಾಚಿಸಿದರು.ಜಿಲ್ಲಾ ಕಾರ್ಯದರ್ಶಿ ನರಸಿಂಹ ಸಾತೋಡ್ಡಿ ವಂದಿಸಿದರು.

error: