
ವರದಿ: ವೇಣುಗೋಪಾಲ ಮದ್ಗುಣಿ
ಯಲ್ಲಾಪುರ: ಪಟ್ಟಣದ ವಿಶ್ವದರ್ಶನ ಪಿ ಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಬ್ಯಾಂಕಿAಗ್ ಸೇವೆಗಳ ವಿಧಗಳು, ಬ್ಯಾಂಕುಗಳ ಕಾರ್ಯ ವ್ಯಾಪ್ತಿ, ಮತ್ತು ಬ್ಯಾಂಕಿAಗ್ ಪರೀಕ್ಷೆ ತಯಾರಿ ಕುರಿತಂತೆ ವಿವಿಧ ಮಾಹಿತಿಗಳನ್ನು ನೀಡುವ ಸಲುವಾಗಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು .ಸಂಪನ್ಮೂಲ ವ್ಯಕ್ತಿಗಳಾಗಿ ತರೀಕೆರೆ ಯ ಕಾವೇರಿ ವಿಕಾಸ ಗ್ರಾಮೀಣ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕರಾದ ಅಶ್ವತ ಹೆಗಡೆ ಮತ್ತಿಹಳ್ಳಿಯವರು ಮಾಹಿತಿ ಕಾರ್ಯಾಗಾರಕ್ಕೆ ಆಗಮಿಸಿ ವಿದ್ಯಾರ್ಥಿಗಳಿಗೆ ಬ್ಯಾಂಕಿAಗ್ ಮಾಹಿತಿಗಳನ್ನು ನೀಡಿದರು. ಕಾಲೇಜಿನ ಪ್ರಾಚಾರ್ಯರಾದ ಡಾ. ಡಿ. ಕೆ ಗಾಂವ್ಕರ ಅವರು ಪ್ರಾಸ್ತಾವಿಕ ನುಡಿಗಳನ್ನಾಡದರು. ವಿದ್ಯಾರ್ಥಿಗಳು ಬ್ಯಾಂಕಿAಗ್ ವ್ಯವಹಾರಗಳ ಕುರಿತು ತಮ್ಮಲ್ಲಿರುವ ಸಂದೇಹಗಳನ್ನು ಸಂವಾದ ನಡೆಸುವ ಮೂಲಕ ಬಗೆಹರಿಸಿಕೊಂಡರು. ಉಪನ್ಯಾಸಕರಾದ ನಾಗರಾಜ ಹೆಗಡೆ,ಕವಿತಾ ಹೆಬ್ಬಾರ,ಸಚಿನ್ ಭಟ್ಟ, ವಿದ್ಯಾ ಹೆಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ