April 4, 2025

Bhavana Tv

Its Your Channel

ತುಡುಗುಣಿ ರಸ್ತೆ ಕುಸಿತ; ಸೂರಿಮನೆ ಸಂಪರ್ಕಕ್ಕೆ ಅಡ್ಡಿ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಕಳೆದ ಸಂಜೆ ಸುರಿದ ಭಾರೀ ಮಳೆಗೆ ಸೂರಿಮನೆ ಸಂಪರ್ಕ ರಸ್ತೆಯು ಮತ್ತೆ ತುಡುಗುಣಿ ಹತ್ತಿರ ಕುಸಿತಕ್ಕೊಳಗಾಗಿದ್ದು , ಸೂರಿಮನೆ ಊರಿಗೆ ಹೋಗುವ ಸಂಪರ್ಕಕ್ಕೆ ಅಡ್ಡಿಯಾದ ಘಟನೆ ಸಂಭವಿಸಿರುತ್ತದೆ.
ಸುದ್ದಿ ತಿಳಿದ ತಕ್ಷಣ ಉಮ್ಮಚಗಿ ಗ್ರಾಮ ಪಂಚಾಯತ ಅಧ್ಯಕ್ಷರಾದ ರೂಪ ಪೂಜಾರಿ,
ಜಿಲ್ಲಾ ಪಂಚಾಯತ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ ಅಶೋಕ ಬಂಟ, ಗ್ರಾಮ ಪಂಚಾಯತ ಮಾಜಿ ಸದಸ್ಯ ರಾಮಚಂದ್ರ ಭಟ್ಟ ಸೂರಿಮನೆ, ಗ್ರಾಮ ಪಂಚಾಯತ ಸದಸ್ಯರುಗಳಾದ ಖೈತಾನ್ ಡಿಸೋಜ, ಅಶೋಕ ಪೂಜಾರಿ, ಕುಪ್ಪಯ್ಯ ಪೂಜಾರಿ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ

error: