May 6, 2024

Bhavana Tv

Its Your Channel

ವಿಶ್ವದರ್ಶನ ಪದವಿ ಪೂರ್ವ ಕಾಲೇಜನಲ್ಲಿಇಂಜನಿಯರ್ ದಿನಾಚರಣೆ

ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಪದವಿ ಪೂರ್ವ ಕಾಲೇಜಿನ ಶ್ರೀ ಶ್ರೀಮದ್ ಗಂಗಾಧರೇAದ್ರ ಸರಸ್ವತೀ ಸಭಾಭವನದಲ್ಲಿ ರಾಷ್ಟ್ರೀಯ ಅಭಿಯಂತರರ ದಿನಾಚರಣೆ ಯನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಹಾಗೂ ಉದ್ಘಾಟಕರಾಗಿ ಯಲ್ಲಾಪುರದ ಪಟ್ಟಣ ಹೆಸ್ಕಾಂ ಶಾಖೆಯ ಸಹಾಯಕ ಇಂಜಿನಿಯರ್ ಆದ ರಮಾಕಾಂತ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ, ದೇಶದ ಆರ್ಥಿಕತೆ ನಿರ್ಧಾರವಾಗುವುದು ಇಂಜಿನಿಯರಗಳ ಭೌದ್ಧಿಕ ಸಾಮರ್ಥ್ಯದ ಮೇಲೆ. ಇವರು ಪ್ರಪಂಚ ಕಟ್ಟುತ್ತಾರೆ. ಪ್ರಪಂಚಕ್ಕೆ ಶಕ್ತಿ ತುಂಬುತ್ತಾರೆ.ಆರ್ಥಿಕತೆಯ ಎಲ್ಲ ಕ್ಷೇತ್ರಗಳ ಕ್ರಿಯಾಶಕ್ತಿ ಯಾಗಿ ಜಗತ್ತು ಚಲಿಸುವಂತೆ ಮಾಡಿದ್ದಾರೆ .ಇಂತಹ ಶ್ರೇಷ್ಠ ಅಭಿಯಂತರರು ಇಂದಿನ ಆಧುನಿಕ ಕ್ರಿಯಾಶೀಲ ಜಗತ್ತಿಗೆ ನಿರಂತರ ಕೊಡುಗೆ ನೀಡುತ್ತಿದ್ದಾರೆ. ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರು ನೀಡಿದ ಕೊಡುಗೆ ಅಪಾರವಾದಾಗಿದೆ. ಭಾರತದ ಇಂಜಿನಿಯರಿAಗ್ ಕ್ಷೇತ್ರಕ್ಕೆ ಹಾಗೂ ಬೆಳವಣಿಗೆಗೆ ಅವರ ಶಿಸ್ತುಬದ್ಧವಾದ ಹಾಗೂ ದೂರ ದೃಷ್ಟಿಯಿಂದ ಕೂಡಿದ ಯೋಜನೆಗಳು,ನಿಲುವುಗಳು ಶಾಶ್ವತವಾಗಿ ಜನರ ಮನಸ್ಸಿನಲ್ಲಿ ನೆನಪಿನಲ್ಲಿರುತ್ತದೆ.
ನಮ್ಮ ದೇಶದ ಪ್ರಗತಿಯನ್ನು ಸಾಧಿಸುವಲ್ಲಿ ಇಂತಹ ಮಹಾನ ವ್ಯಕ್ತಿಗಳು ಕಾರಣಿಭೂತವಾಗಿರುವುದು ನಮ್ಮ ಹೆಮ್ಮೆಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವದರ್ಶನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ
ಡಾ. ದತ್ತಾತ್ರೇಯ ಗಾಂವ್ಕರ ಮಾತನಾಡಿ, ದೇಶವನ್ನು ಕಟ್ಟುವ, ಬೆಳಗುವ ಮತ್ತು ಚಲಿಸುವ ಕಾಯಕವನ್ನು ಮಾಡಿದ ಅಭಿಯಂತರರಿಗೆ ಗೌರವ ಸಂದಾಯವಾಗಬೇಕು ಮತ್ತು ವಿದ್ಯಾರ್ಥಿಗಳು ಈ ಆದರ್ಶವನ್ನು ಅರ್ಥ ಮಾಡಿಕೊಂಡು ಸಾಧನೆಯ ಹಾದಿಯಲ್ಲಿ ಹೆಜ್ಜೆ ಹಾಕಬೇಕಾಗಿದೆ ಎಂದರು.
ಕಾರ್ಯಕ್ರಮ ಕುಮಾರಿ ಪ್ರಥ್ವಿ ಗಾಂವ್ಕರ್ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಕುಮಾರಿ ಅಶ್ವಿನಿ ಗೌಡ ಸ್ವಾಗತಿಸಿದರು.
ಕುಮಾರಿ ಶ್ರೀಗೌರಿ ಭಟ್ಟ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕುಮಾರಿ ಪಲ್ಲವಿ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ಪ್ರಗತಿ ಆಚಾರಿ ಸರ್ವರಿಗೂ ವಂದಿಸಿದರು. ಉಪನ್ಯಾಸಕರಾದ ವನಿತಾ ಗುಮ್ಮಾನಿ ಸಂಯೋಜನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: