May 6, 2024

Bhavana Tv

Its Your Channel

ಭ್ಯಂಗ ಸ್ನಾನ,ನಡಿಗೆ, ಪ್ರಾಣಾಯಾಮ ನಿತ್ಯ ಜೀವನದಲ್ಲಿ ಅಳವಡಿಸಿ -ಡಾ.ಸುಚೇತಾ ಮದ್ಗುಣಿ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಮನುಷ್ಯನಿಗೆ ಎಲ್ಲಭಾಗ್ಯಗಳಿಗಿಂತ ಆರೋಗ್ಯ ಭಾಗ್ಯ ದೊಡ್ಡದು. ಜೀವನದ ಸಂಧ್ಯಾಲಕಾಲದಲ್ಲಿರುವ ಹಿರಿಯ ನಾಗರಿಕರು “ಹಿತಭುಕ್ ಮತ್ತು ಮಿತಭುಕ್” ಎಂಬ ತತ್ವವನ್ನು ಅಳವಡಿಸಿಕೊಂಡು ಆರೋಗ್ಯಕ್ಕೆ ಪೂರಕವಾದ ಆಹಾರವನ್ನು ಮಿತವಾಗಿ ಸೇವಿಸುವದರ ಮೂಲಕ ಆರೋಗ್ಯ ಕಾಪಾಡಿಕೊಳ್ಳ ಬೇಕೆಂದು ಧನ್ವಂತರಿ ಆಯುರ್ವೇದ ಸಂಸ್ಥೆಯ ಮುಖ್ಯಸ್ಥೆ ಡಾ. ಸುಚೇತಾ ಮದ್ಗುಣಿ ಕರೆ ನೀಡಿದರು.
ಅವರು ಇತ್ತೀಚೆಗೆ ನಿವೃತ್ತ ಸರಕಾರಿ ನೌಕರರ ಸಂಘದ ತ್ರೈಮಾಸಿಕ ಸಭೆಯಲ್ಲಿ “ಹಿರಿಯ ನಾಗರಿಕರ ಆರೋಗ್ಯ” ವಿಷಯದ ಕುರಿತು ಮಾತನಾಡುತ್ತಿದ್ದರು.
ಅಭ್ಯಂಗ ಸ್ನಾನ, ನಡಿಗೆ, ಪ್ರಾಣಾಯಾಮ ಮುಂತಾದ ಚಟುವಟಿಕೆಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿ-
ಕೊಳ್ಳುವದರ ಮೂಲಕ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿ ನಮಗೆ ಮಾರ್ಗದರ್ಶಿಯಾಗಿ ನಿಲ್ಲುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಶ್ರೀರಂಗ ಕಟ್ಟಿ ದೈಹಿಕ ಅರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಇಂದಿನ ಅಗತ್ಯವಾಗಿದ್ದು ಹಿರಿಯ ನಾಗರಿಕರಾದ ನಾವೆಲ್ಲ ಸಕಾರಾತ್ಮಕ ವಿಚಾರ ಗಳಿಂದ ಜೀವನವನ್ನು ಸುಂದರಗೊಳಿಸಿಕೊಳ್ಳೋಣ ಎಂದರು. ಸಂಘದ ಮಾಜಿ ಅಧ್ಯಕ್ಷರಾದ ಕೆ.ಕೆ.ನಾಯ್ಕ, ಉಪಾಧ್ಯಕ್ಷರಾದ ಆರ್. ಎನ್. ನಾಯ್ಕ ಮತ್ತು ಶೋಭಾ ಶೆಟ್ಟಿ ಮಾತನಾಡಿದರು.
ಉಪಾಧ್ಯಕ್ಷ ಎಸ್.ಎಲ್.ಜಾಲಿಸತ್ಗಿ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ ಬೋರಕರ ವಂದಿಸಿದರು.

error: