May 5, 2024

Bhavana Tv

Its Your Channel

ಚಿನ್ನಾಪುರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಣ್ಣ ವೆಂ.ನಾಯಕ ಪುಣ್ಯಸ್ಮರಣೆಯ ಅಂಗವಾಗಿ “ಜ್ಞಾನ ಸೌರಭ” ಪುಸ್ತಕ ವಿತರಣೆ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಪಠ್ಯದ ಹೊರತಾಗಿನ ಪುಸ್ತಕ ಓದುವ ಹವ್ಯಾಸ ಬಾಲ್ಯದಲ್ಲಯೇ ಒತ್ತಾಸೆಯಿಂದ ಮಕ್ಕಳಲ್ಲಿ ಬೆಳಸಬೇಕು ಎಂದು ನಿವೃತ್ತ ವನಪಾಲಕ ಬಿ. ನಾಗೇಶ ನಾಯ್ಕ ಹೇಳಿದರು.
ಅವರು ತಾಲೂಕಿನ ಚಿನ್ನಾಪುರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಣ್ಣ ವೆಂ.ನಾಯಕ ಪುಣ್ಯಸ್ಮರಣೆಯ ಅಂಗವಾಗಿ ತಾವು ಸಂಗ್ರಹಿಸಿ ಪ್ರಕಟಿಸಿದ “ಜ್ಞಾನ ಸೌರಭ” ಪುಸ್ತಕ ವನ್ನು ಮಕ್ಕಳಿಗೆ ವಿತರಿಸಿ ಮಾತನಾಡುತ್ತಿದ್ದರು. ಶಾಲಾಮಕ್ಕಳಲ್ಲಿ ಸಾಮಾನ್ಯಜ್ಞಾನ ವಹೆಚ್ಚಿಸಲು ಪುಸ್ತಕ ಸಹಾಯಕ ಆಗಲಿದೆ ಎಂದರು.
ಕವಿ ಸುಬ್ರಾಯ ಬಿದ್ರೆಮನೆ ಮಾತನಾಡಿ, ” ಹಿರಿಯರ ಆದರ್ಶದ ದಾರಿಯಲ್ಲಿ ಸಾಗುವ ಮೂಲಕ ಪರಿಪೂರ್ಣ ವ್ಯಕ್ತಿತ್ವ ರೂಪಿಸಿ ಕೊಳ್ಳ ಬೇಕು.ನಾಗೇಶ ನಾಯ್ಕ ಅವರ ಪರಿಸರ ಪ್ರೀತಿ,ಸಾಮಾಜಿಕ ಕಳಕಳಿ,ಜೀವನೋತ್ಸಾಹ ಗಮನಾರ್ಹ ಎಂದರು.
ಮುಖ್ಯಾಧ್ಯಾಪಕಿ ವಿಧ್ಯಾ ನಾಯ್ಕ ಮಾತನಾಡಿ,ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕೃತಿ ಸಹಾಯಕ ವಾಗಿದೆ ಎಂದರು.
ಶಿಕ್ಷಕರಾದ ಈಶ್ವರ ಪಟಗಾರ,ದಿನೇಶ ಭಟ್ಟ ಮಾತನಾಡಿದರು.
ಇಡಗುಂದಿ ಸೇವಾ ಸಹಕಾರಿ ಸಂಘದ ನಿರ್ಧೇಶಕ ಪ್ರೇಮಾನಂದ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ,”ಮಕ್ಕಳು ಹಣದ ಹಿಂದೆ ಹೋಗದೇ,ಜ್ಞಾನದ ಬೆನ್ನುಹತ್ತಿ ಸ್ಪರ್ಧಾತ್ಮಕ ಸನ್ನಿವೇಶ ಎದುರಿಸುವಂತೆ ” ಎಂದರು.
ವಿದ್ಯಾರ್ಥಿ ಪ್ರತಿನಿಧಿಗಳಾದ ನಾಗಶ್ರೀ ಭಟ್ಟ ಸ್ವಾಗತಿಸಿದರು.ಸಿಂಧೂ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

error: