May 5, 2024

Bhavana Tv

Its Your Channel

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಹೋಲಿ ರೋಜರಿ ಪ್ರೌಢಶಾಲೆಯ ವಿಜ್ಞಾನ ಘಟಕ ಹಾಗೂ ಇಕೋ ಕ್ಲಬ್ಬಿನ ಅಡಿಯಲ್ಲಿ ವಿಶ್ವ ಪರಿಸರ ದಿನಾಚರಣೆ.

ಯಲ್ಲಾಪುರ ; ಪ್ರಕೃತಿಯಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಇಂದು ಅನವಶ್ಯಕವಾದ ತೊಂದರೆಗಳನ್ನು ಮಾನವನು ಎದುರಿಸುವಂತಾಗಿದೆ. ಸರಿಯಾಗಿ ವಿವೇಚನೆ ಇಲ್ಲದೆ ಬಳಸುವ ಈ ಪ್ಲಾಸ್ಟಿಕ್ ನಿಂದ ಮನುಷ್ಯನ ಬದುಕು ಕೊನೆಗೊಳ್ಳುವ ಹಂತಕ್ಕೆ ಬರುತ್ತದೆ. ಈಗಲಾದರೂ ಎಚ್ಚೆತ್ತುಕೊಂಡು ಸಮಸ್ಯೆಯನ್ನ ಪರಿಹರಿಸಿಕೊಳ್ಳದಿದ್ದರೆ ಹಾಗೂ ಪ್ಲಾಸ್ಟಿಕ್ ಅನ್ನು ಸರಿಯಾಗಿ ಬಳಸದೆ ಇದ್ದರೆ ಅದು ಮುಂದಿನ ದಿನಗಳಲ್ಲಿ ಮನುಷ್ಯನ ನಾಶಕ್ಕೆ ಕಾರಣವಾಗುವುದು ಎಂದರು.
ವಿಶ್ವ ಪರಿಸರ ದಿನಾಚರಣೆಯ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಹೋಲಿ ರೋಜರಿ ಪ್ರೌಢಶಾಲೆಯ ಮುಖ್ಯ ಅಧ್ಯಕ್ಷರಾದ ರೇಮಂಡ್ ಫರ್ನಾಂಡಿಸ್ ಮಾತನಾಡಿದರು. ವಿವೇಚನೆ ಇಲ್ಲದೆ ಮಾಡುವ ಕೆಲಸಗಳು ವಿನಾಶಕ್ಕೆ ಕಾರಣವಾಗುತ್ತದೆ, ಸರಿಯಾದ ಬಳಕೆ ಮಾಡದೆ ಇದ್ದಲ್ಲಿ ಪ್ಲಾಸ್ಟಿಕ್ ಭೂ ಮಾಲಿನ್ಯ ಜಲ ಮಾಲಿನ್ಯವನ್ನು ಉಂಟುಮಾಡುತ್ತದೆ. ಒಮ್ಮೆ ಬಳಸುವ ಪ್ಲಾಸ್ಟಿಕ್ ಅನ್ನು ಬಳಸದೆ ಇರುವುದು ಮರುಬಳಕೆ ಮಾಡುವುದು ಹಾಗೂ ಪ್ಲಾಸ್ಟಿಕ್ ಸರಿಯಾದ ನಿರ್ವಹಣೆ ಮಾಡುವುದರ ಮೂಲಕ ಇಂದಿನ ಆಚರಣೆಯನ್ನು ಅರ್ಥಪೂರ್ಣವಾಗಿಸಬೇಕೆಂದು ಅವರು ಕರೆ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಮಾಲಿನ್ಯದ ಕುರಿತು ಭಾಷಣ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು.

ವೇದಿಕೆಯಲ್ಲಿ ಚಂದ್ರಶೇಖರ್, ಜಗದೀಶ್ ಭಟ್, ಹಾಗೂ ನೆಲ್ಸನ್ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಂಚಾಲಕರಾದ ಎಂ ರಾಜಶೇಖರ್ ಕಾರ್ಯಕ್ರಮ ಸ್ವಾಗತಿಸಿ ನಿರ್ವಹಿಸಿದರು.ಇಕೋ ಕ್ಲಬನ ಸಂಚಾಲಕರಾದ ವೆಂಕಟರಮಣ ಭಟ್ ವಂದನಾರ್ಪಣೆ ಮಾಡಿದರು. ವಿದ್ಯಾರ್ಥಿಗಳು ಈ ದಿನದ ನಿಜವಾದ ಆಚರಣೆಯ ಮಹತ್ವವನ್ನು ತಿಳಿದರು.
ವರದಿ ; ವೇಣುಗೋಪಾಲ ಮದ್ಗುಣಿ, ಯಲ್ಲಾಪುರ

error: