May 5, 2024

Bhavana Tv

Its Your Channel

ಶಿಕ್ಷಕರಾದ ಗಂಗಾಧರ ಲಮಾಣಿಯವರಿಂದ” ಕಲಿಕಾ ಪ್ರಕ್ರಿಯೆಯಲ್ಲಿ ” “ರದ್ಮಾಲ್ ಮತ್ತು ಕಲಾ ಅಂತರ್ಗತ ಕಲಿಕೆ” ವಿನೂತನ ಪ್ರಯೋಗ

ಯಲ್ಲಾಪುರ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಕೇರಿ ಗೌಳಿ ವಾಡದಲ್ಲಿ “ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್”(ಐಎಫ್‌ಎ) ಬೆಂಗಳೂರು ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಕೇರಿ ಗೌಳಿವಾಡದ ಸಂಯುಕ್ತ ಆಶ್ರಯದಲ್ಲಿ 5, 6, 7ನೇ ತರಗತಿಯ ಮಕ್ಕಳಿಗೆ “ರದ್ಮಾಲ್ ಮತ್ತು ಕಲಾ ಅಂತರ್ಗತ ಕಲಿಕೆಯ”ಎಂಬ ವಿನೂತನ ಕಲಿಕಾ ಪ್ರಯೋಗದ ಕಾರ್ಯಗಾರವನ್ನು ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು. ಶಾಲೆಯ ಶಿಕ್ಷಕರಾದ ಗಂಗಾಧರ ಲಮಾಣಿ ಯವರು ಮಕ್ಕಳ ಸಂತಸದಾಯಕ ಕಲಿಕೆಗೆ ವಿನೂತನ ಕಲಿಕಾ ಪ್ರಯೋಗಕ್ಕೆ ತೊಡಗಿದ್ದಾರೆ.
ಗೌಳಿಗರ ಪ್ರಸಿದ್ಧ ಜಾನಪದ ನೃತ್ಯ ಕಲೆಯಾದ “ರದ್ಮಾಲ” ನೃತ್ಯ ಕಲೆಯನ್ನು ತರಗತಿ ಕೋಣೆಯೋಳಗೆ ತಂದು 5,6,7 ತರಗತಿಯ ಆಯ್ದ ಕನ್ನಡದ ಪದ್ಯಗಳನ್ನು ಈ ನೃತ್ಯ ಶೈಲಿಗೆ ಒಳಪಡಿಸಿ ಮಕ್ಕಳಿಗೆ ಕಲಾ ಅಂತರ್ಗತ ಕಲಿಕೆಯ ಕಾರ್ಯಗಾರ ನಡೆಸಿದ್ದಾರೆ.
ಇದರಿಂದಾಗಿ ಸ್ಥಳೀಯ ಜಾನಪದ ಕಲೆಯನ್ನು ಉಳಿಸಿ ಮಕ್ಕಳಲ್ಲಿ ಬೆಳೆಸಿದಂತಾಗಿ “ಕಲೆಯ ಮೂಲಕ ಕಲಿಕೆ”ಯು ಸುಲಭ ಹಾಗೂ ಮನದಟ್ಟಾಗುತ್ತದೆ ಅಲ್ಲದೆ ಮಕ್ಕಳು ಮುಂದಿನ ತರಗತಿಯ ಕಲಿಕಾಂಶವನ್ನು ಮುಂಚಿತವಾಗಿಯೇ ಕಲಿಯುತ್ತಾರೆ ಎಂಬುದನ್ನು ಶಿಕ್ಷಕರು ತಿಳಿಸುತ್ತಾರೆ. ಶಾಲಾ ಅವಧಿಯಲ್ಲಿ ಬೇರೆ ತರಗತಿಗಳಿಗೆ ತೊಂದರೆ ಯಾಗದಂತೆ ಹೆಚ್ಚಿನ ಸಮಯವನ್ನು ಶಾಲಾ ಅವಧಿಯ ನಂತರದಲ್ಲಿ ಪಾಲಕರ,ಸಮುದಾಯದರಮತ್ತು ಮಕ್ಕಳ ಸಹಕಾರ ಪಡೆದು ಕಾರ್ಯಗಾರ ನಡೆಯುತ್ತದೆ. ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಶುಭಾ ಗುನಿಗಿ ಮತ್ತು ವಾಣಿ ನಾಯ್ಕ ರವರು ಉಪಸ್ಥಿತರಿದ್ದರು ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಿಠ್ಠು ಬಿಚುಕ್ಲೆ ,ದಾಖ್ಲು ಜಾನ್ಕರ, ಲಕ್ಷ್ಮಣ್ ಯಮ್ಕರ್,ಚಿಮಣು ಜಾನ್ಕರ,ಯಮ್ಮು ಬಿಚುಕ್ಲೆ ಸೋನು,ಜಾನ್ಕರ,ರಾಮು ಜೋರೆ ಧೋಂಡು ಮಲಗೊಂಡೆ ಜಿಮ್ಮು ಜೋರೆ ಹೀಗೆ ಸಮುದಾಯದ ಇನ್ನೂ ಅನೆಕ ಹಿರಿಯರು ಭಾಗಿಯಾಗಿ ಸಹಕರಿಸಿದ್ದಾರೆ.
ವರದಿ ; ವೇಣುಗೋಪಾಲ ಮದ್ಗುಣಿ, ಯಲ್ಲಾಪುರ

error: