May 4, 2024

Bhavana Tv

Its Your Channel

ಲಕ್ಷವೃಕ್ಷ ಗಿಡ ನೆಡುವ ಅಭಿಯಾನಕ್ಕೆ ಜಿಲ್ಲಾದ್ಯಂತ ವ್ಯಾಪಕ ಸ್ಪಂದನೆರವೀAದ್ರನಾಯ್ಕ.

ಯಲ್ಲಾಪುರ: ಪರಿಸರ ಮತ್ತು ಅರಣ್ಯ ರಕ್ಷಣೆ, ಸಂರಕ್ಷಣೆ ಜಾಗೃತೆ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡ ಲಕ್ಷ ವೃಕ್ಷ ಗಿಡ ನೆಡುವ ಕಾರ್ಯಕ್ರಮಕ್ಕೆ ಜಿಲ್ಲಾದ್ಯಂತ ವ್ಯಾಪಕ ಸ್ಪಂದನೆ ದೊರಕುತ್ತಿದ್ದು, ಅರಣ್ಯವಾಸಿಗಳು
ಹೆಚ್ಚಿನ ಆಸಕ್ತಿಯಿಂದ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರನಾಯ್ಕ ತಿಳಿಸಿದ್ದಾರೆ.
ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನದ ಅಂಗವಾಗಿ ಯಲ್ಲಾಪುರ ತಾಲೂಕಿನ ಕಿರವತ್ತಿಯಲ್ಲಿ ಇಂದು ಗಿಡ ನೆಡುವ ಕಾರ್ಯದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಅರಣ್ಯವಾಸಿಗಳು ಅರಣ್ಯ ಭೂಮಿ ಹಕ್ಕಿಗಾಗಿ ಹೋರಾಟ ಮಾಡುವುದೊಂದಿಗೆ, ಅರಣ್ಯ ಸಾಂದ್ರತೆಯನ್ನ ಹೆಚ್ಚಿಸುವಲ್ಲಿ ಸಕ್ರೀಯರಾಗಿರಬೇಕು. ಅರಣ್ಯ ರಕ್ಷಣೆ ಮತ್ತು ಪಾಲನೆ ಮಾಡುವ ಜೊತೆಯಲ್ಲಿ, ಅರಣ್ಯ ಭೂಮಿಯ ಮೇಲೆ ಕೃಷಿ ಜೀವನದ ಮೇಲೆ ಅವಲಂಭಿತವಾಗಿರಬೇಕೆAದು ಅವರು ಹೇಳಿದರು.
ಭೌಗೋಳಿಕವಾಗಿ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶ ಶೇ. 80 ರಷ್ಟು ಇದ್ದರೂ, ಅರಣ್ಯ ಸಾಂದ್ರತೆಯ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದು ವಿಷಾದಕರ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಭೀಮ್ಸಿ ವಾಲ್ಮೀಕಿ, ಸೈಯದ್ ಸಾಬ ನೂಜವರ, ಲಲಿತಾ ನಾಯ್ಕ, ಈರಪ್ಪ ಅಲಕೇರಿ, ಸಾವಕ್ಕ ಹರಿಜನ, ಮೋಹನ ಸಿದ್ಧಿ, ನೀಲವ್ವ ಕಿರವತ್ತಿ, ಬಾಬು ಸಿದ್ಧಿ, ಜೈನಾಬಿ ಕಿರವತ್ತಿ, ನುಂಜೊಳ್ಳಿ ಸಿದ್ಧಿ, ದ್ಯಾಮಣ್ಣಜಗದಳ್ಳಿ ಮುಂತಾದವರು ಉಪಸ್ಥಿತರಿದ್ದರು.
ಅಭಿಯಾನ ಅಗಸ್ಟ 14ರವರೆಗೆ:
ಜುಲೈ 31 ರಂದು ಪ್ರಾರಂಭವಾದ ಲಕ್ಷ ವೃಕ್ಷ ಗಿಡ ನೆಡುವ ಕಾರ್ಯಕ್ರಮವು ಅಗಸ್ಟ 14 ರವರೆಗೂ ಜಿಲ್ಲಾದ್ಯಂತ ಮನೆ, ಮನೆಗಳಲ್ಲಿ ನಡೆಯುತ್ತಿರುವುದರಿಂದ, ಅಂದಿನವರೆಗೆ ಅರಣ್ಯ ಅತಿಕ್ರಮಣದಾರರು ಪ್ರತಿ ಮನೆ, ಮನೆಯಲ್ಲಿಯೂ ಗಿಡ ನೆಡುವ ಕಾರ್ಯ ಹಮ್ಮಿಕೊಳ್ಳಬೇಕೆಂದು ಅಧ್ಯಕ್ಷರವೀಂದ್ರನಾಯ್ಕ ತಿಳಿಸಿದ್ದಾರೆ.

error: