May 4, 2024

Bhavana Tv

Its Your Channel

ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾವ೯ಜನಿಕರ ಪ್ರಾಣ ತೆಗೆಯುತ್ತಿರುವ ನಾದ ಗ್ರಾಮದ ಮೇನ್_ರೋಡ ಸೇತುವೆ.

ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ನಾದ ಬಿ.ಕೆ.ಗ್ರಾಮದ ಮೇನ್ ರೋಡ್ ಸೇತುವೆಯ ಡಾಂಬರೀಕರಣ ರಸ್ತೆಯು ಸಂಪೂರ್ಣವಾಗಿ ಶಿಥಿಲವಾಗಿದ್ದು, ಈ ರಸ್ತೆಯು ಇಂಡಿ ಟು ಕಲಬುಗಿ೯ಗೆ ಸಾಗುವ ಪ್ರಮುಖ ರಸ್ತೆಯಾಗಿದ್ದು ಈ ನಾದ ಸೇತುವೆ ಒಂದು ತಿಂಗಳ ಹಿಂದೆ ಸಂಬAಧಿಸಿದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗುತ್ತಿಗೆದಾರರಿಂದ ಬೇಕಾ-ಬಿಟ್ಟಿಯಾಗಿ ರಸ್ತೆ ದುರಸ್ತಿ ಮಾಡಿಸಿದರು.ಆದರೆ ದಿ.೦೬.೦೭.೨೦೨೧ರಂದು ಮಳೆ ಬಂದ ಕಾರಣ ಸೇತುವೆ ಮೇಲೆ ೨ ಅಡಿಯವರೆಗೆ ನೀರು ೧ರಿಂದ ೨ ಅಡಿಯಷ್ಟು ಕಂದಕ, ಸಾವ೯ಜನಿಕರ ಜೀವ ತೆಗೆಯುವ ಕಬ್ಬಿಣದ ಸಲಾಕೆಗಳು, ವಾಹನ ಸವಾರರು ಸೇತುವೆ ದಾಟಬೇಕಾದರೆ ಸಮುದ್ರವೇ ದಾಟಿದಂತಾಗುತ್ತಿದೆ.ಅನೇಕ ವಾಹನ ಸವಾರರು ಆಯಾ ತಪ್ಪಿ ಬಿದ್ದು-ಎದ್ದು ಹೋಗುತ್ತಿದ್ದಾರೆ.ಆದರೆ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ, ಇದರಿಂದ ರೊಚ್ಚಿಗೆದ್ದ ಸಾವ೯ಜನಿಕರು ಈ ಹಿಂದೆ ಕಳಪೆ ಕಾಮಗಾರಿ ಮಾಡಿದ ಅಧಿಕಾರಿಗಳ,ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಒಂದು ವಾರದೊಳಗಾಗಿ ಈ ಕಾಮಗಾರಿ ಮಾಡದಿದ್ದರೆ ರಸ್ತೆ ತಡೆದು ಕಾನೂನು ನಿಯಮದಡಿ ಪ್ರತಿಭಟನೆ ಮಾಡುವುದು ಅನಿವಾರ್ಯಗುತ್ತದೆ ಎಂದು ಮಾಧ್ಯಮದವರ ಮುಂದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಆನಂದ ಪವಾರ, ಪುನೀತ್ ಗೌಡ್ರು ಅವಜಿ, ಮಾಜಿ ಸಹಕಾರಿ ಸಂಘದ ಅಧ್ಯಕ್ಷರಾದ ದೇವದಾಸ ಅಂಬಾರೆ,ವಿಠ್ಠಲ ಅವಜಿ.ರಾವು ಗೌಡ ದ್ಯಾಮಗೊಂಡ,ಅಶೋಕ ಅಂಬಾರೆ,ಸುನೀಲ ಪವಾರ,ಹರೀಶ ಅಂಬಾರೆ, ಶ್ರೀನಾಥ ಚವ್ಹಾಣ, ಎಸ್.ಬಿ.ಹರಿಜನ, ಇತರರು ಆಗ್ರಹಿಸಿದ್ದಾರೆ.
ವರದಿ ಬಿ ಎಸ್ ಹೊಸೂರ.

error: