May 4, 2024

Bhavana Tv

Its Your Channel

ಶಾಲಾ ಪ್ರಾರಂಭೋತ್ಸವ ಮತ್ತು ದಾಖಲಾತಿ ಅಂದೋಲನ ಕಾರ್ಯಕ್ರಮ

ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ನಾದ ಕೆ.ಡಿ ಗ್ರಾಮದಲ್ಲಿ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೨೧-೨೦೨೨ನೇ ಸಾಲಿನ ೧ನೇ ಮತ್ತು ೨ನೇ ತರಗತಿಯ ಇಂಗ್ಲೀಷ್ ಮಾಧ್ಯಮ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಅಂದೋಲನ ಕಾಯ೯ಕ್ರಮ ಜರುಗಿತು.ಕಾಯ೯ಕ್ರಮವನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಸುಭದ್ರಾ ಮಲಕಪ್ಪ ಹರಿಜನ ಇವರು ಜ್ಯೋತಿ ಬೆಳಗಿಸುವ ಮುಖಾಂತರ ಕಾರ್ಯಕ್ರಮ ಚಾಲನೆ ನೀಡಿದರು. ನಂತರ ಕಾಯ೯ಕ್ರಮವನ್ನುದ್ಧೇಶಿಸಿ ಕ್ಷೇತ್ರ ಸಮನ್ವಯಧಿಕಾರಿಗಳಾದ ಸಿ.ಎಮ್.ಬಂಡಗಾರ ಮಾತನಾಡಿ -ಶಿಕ್ಷಣದಲ್ಲಿ ಕನ್ನಡ ನಮ್ಮ ತಾಯಿ ಭಾಷೆ, ಇಂಗ್ಲೀಷ್ ನಮ್ಮ ವೃತ್ತಿ ಭಾಷೆ,ವೃತ್ತಿಗಾಗಿ ಕೆಲಸ ಮಾಡಲು ಇಂಗ್ಲೀಷ್ ಬೇಕು .ಯಾವ ಭಾಷೆ ನಮಗೆ ಅನ್ನ ಕೊಡುತ್ತದೆಯೋ ಅದು ಅವಶ್ಯಕ ಯಾವ ಭಾಷೆ ನಮಗೆ ಸಂತೋಷ ಕೊಡುತ್ತದೆಯೋ ಅದು ತಾಯಿ ಭಾಷೆಯಾಗಿ ಉಳಿಯುತ್ತದೆ ,ಅದಕ್ಕಾಗಿ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಎರಡೂ ಮಾಧ್ಯಮಗಳಲ್ಲಿ ಶಿಕ್ಷಣ ಕೊಡಲಾಗುತ್ತದೆ ಯಾರು ಅವರಿಗೆ ಇಷ್ಟವಾದ ಮಾಧ್ಯಮ ಲ್ಲಿ ಶಿಕ್ಷಣ ಪಡೆಯಬಹುದು .ಆದರೆ ಮೊದಲು ಈ ಶಾಲೆಗೆ ಎಸ್.ಡಿ.ಎಮ್.ಸಿ ರಚನೆಯಾಗಬೇಕಾಗಿದೆ ಇಂಗ್ಲೀಷ್ ಮಾಧ್ಯಮದ ೧ನೇ ತರಗತಿಗೆ ೩೦ವಿದ್ಯಾಥಿ೯ಗಳು ೨ನೇ ತರಗತಿಗೆ ೩೦ ವಿದ್ಯಾ೯ಗಳಿಗೆ ದಾಖಲಾತಿಗೆ ಅವಕಾಶವನ್ನು ಕೊಡಲಾಗಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ -ವಸಂತ ರಾಠೋಡ ಮಾತನಾಡಿ -ಮಕ್ಕಳನ್ನು ಒಳ್ಳೆಯ ವಾತಾವರಣದಲ್ಲಿ ಬೆಳೆಸಬೇಕು,ಪಾಲಕರು , ಗ್ರಾಮಸ್ಥರು,ಎಸ್.ಡಿ.ಎಮ್.ಸಿ.ಸದಸ್ಯರು ಶಾಲಾ ಶಿಕ್ಷಕರೊಂದಿಗೆ ಒಳ್ಳೆಯ ಸಂಭAದವಿಟ್ಟಕೊಳ್ಳಬೇಕು ಎಂದು ಹೇಳಿದರು.ಗ್ರಾಮ ಪಂಚಾಯತ ಸದಸ್ಯರಾದ ಪೈಗಂಬರ ದೇಸಾಯಿ ಮಾತನಾಡಿ ಶಿಕ್ಷಣಾಧಿಕಾರಿಗಳ ಮಾತಿನಂತೆ ಇನ್ನು ಕೆಲವೆ ದಿನಗಳಲ್ಲಿ ಈ ಶಾಲೆಗೆ ಎಸ್.ಡಿ.ಎಮ್.ಸಿ ರಚನೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗುವುದೆಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆರಾದ ಸುಭದ್ರಾ ಮಲಕಪ್ಪ ಹರಿಜನ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಸಂತ ರಾಠೋಡ, ಸಿ.ಎಮ್.ಬಂಡಗಾರ, ಸಿ.ಎಸ್.ಪೂಜಾರಿ. ಗ್ರಾಮ ಪಂಚಾಯತ ಸದಸ್ಯರಾದ-ದಿಲೀಪಗೌಡ್ರ ಪತ್ತಾರ, ಸಿದ್ರಾಯ ಐರೋಡಗಿ, ಪೈಗಂಬರ ದೇಸಾಯಿ,ಮಹಾದೇವಿ ಬಾಸಗಿ, ಬಸಣ್ಣ ಸಾಹುಕಾರ ಲಾಳಸಂಗಿ, ಶರಣಪ್ಪ ತಾವರಖೇಡ, ಮುತ್ತಪ್ಪ ಸಿನ್ನೂರ, ಶೈಲ ಪೂಜಾರಿ ಅಶೋಕ ನಾಗಣಿ, ಶಿಕ್ಷಕರು,ಎಸ್.ಬಿ.ಬಬಲೇಶ್ವರ ಶಿಕ್ಷಕರು,ರಿಯಾನ್ ಬೇಗಮ್ಮ, ಬಿ.ಎಸ್.ಟಕ್ಕಾ, ಆರ್.ಎಮ್.ಚವ್ಹಾಣ ,ಎಸ್.ಎಮ್.ದೇಸಾಯಿ, ಐ.ಡಿ.ಇಂಡಿಕರ್,ಎಸ್.ವಿ.ಹರಳಯ್ಯ, ಸಲೀಮ್ ವಾಲಿಕಾರ, ಚೌಧರಿ ಸರ್,ಬಸವರಾಜ ಹೆಬ್ಬಾಳ, ಭೀಮಣ್ಣ ತೇಲಿ, ಭೂತಾಳಿ ತಾವರಖೇಡ, ಪರಶುರಾಮ ಬಾಸಗಿ , ಇನಾಮದಾರ್ ಸರ್, ಡಿ.ಎಲ್.ಗೊರನಾಳ, ಟಿ.ಸಿ.ಪೊದ್ಧಾರ, ಆರ್.ಎಸ್.ಹರಗೋಲ, ಎಸ್.ಎಸ್.ಬಿರಾದಾರ. ಆರ್ ಎ ಕುರಿ, ಸರೋಜಾ ಮುಲ್ಲಾ. ಆಶಾ ಕಾರ್ಯಕರ್ತೆಯರಾದ ಶಕುಂತಲಾ ಮಾದರ ,ಪಾವ೯ತಿ ಬಿರಾದಾರ,ಹಬ೯ನ್ ಶಿಕ್ಷಕರು ಹಾಗೂ ಇತರರು ಉಪಸ್ಥಿತರಿದ್ದರು.

ವರದಿ ಬಿ ಎಸ್ ಹೊಸೂರ

error: