May 4, 2024

Bhavana Tv

Its Your Channel

ಜನ ಜಾಗೃತಿ ಮಹಿಳಾ ಕಾಯಕೋತ್ಸವ ಕಾರ್ಯಕ್ರಮ

ವಿಜಯಪೂರ: ನರೇಗಾ ಯೋಜನೆಯಡಿ ಮಹಿಳೆಯರನ್ನು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳವುದರಿಂದ ಆ ಕುಟುಂಬವನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಸಬಲೀಕರಣವನ್ನಾಗಲು ಈ ಯೋಜನೆ ಸಹಕಾರಿಯಾಗಿದೆ ಎಂದು ಐ.ಇ.ಸಿ ತಾಲ್ಲೂಕು ಸಂಯೋಜಕರಾದ ಜ್ಞಾನಜ್ಯೋತಿ ಚಾಂದಕವಠೆ ಯವರು ಕರೆ ನೀಡಿದರು.ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ಗ್ರಾಮದ ಶ್ರೀ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಮಹಿಳಾ ಬಡ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು.ಈ ಸಮಾಜದ ಕಟ್ಟ ಕಡೆಯ ಹಾಗೂ ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಗುರುತಿಸಿ ಅವರಿಗೆ ನರೇಗಾ ಯೋಜನೆಯಡಿ ಕೆಲಸ ಕೊಡುವ ಉದ್ದೇಶದಿಂದ ಈ ಜನ ಜಾಗೃತಿ ಮಹಿಳಾ ಕಾಯಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ . .
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆಸ್ಮಭಾನು ಕಸ್ಸಾಬ, ಗ್ರಾಮ ಪಂಚಾಯತ್ ಸದಸ್ಯರಾದ ಚೆನ್ನಮ್ಮ ಗುಡ್ಲಮನಿ,ರೇಣುಕಾ ತೇಲಿ, ಗ್ರಾಮದ ಅನೇಕ ಮಹಿಳೆಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ವರದಿ ಬಿ ಎಸ್ ಹೊಸೂರ.

error: