
ತಾಳಿಕೋಟೆಯ ನಗರದ ದಿವಂಗತ ಶ್ರೀ ತಿಮ್ಮಣಚಾರಿ ಹಾಗೂ ರಂಗುಬಾಯಿ ದಂಪತಿಗಳ ನಿವಾಸದಲ್ಲಿ ವೆಂಕಟೇಶ್ವರ ಸಮರಾಧನೆ ಅದ್ದೂರಿಯಾಗಿ ಜರುಗಿತು
ಬೆಳಗ್ಗೆಯಿಂದಲೇ ಪೂಜೆ ಪುನಸ್ಕಾರ ಭಜನೆ ಹಾಗೂ ಕಡೆಯದಾಗಿ ಮಹಾಮಂಗಳಾರತಿ ನೆರವೇರಿತು ಹಾಗೂ ವೆಂಕಟೇಶ್ವರ ಪಾಠಶಾಲೆ ಶಿಷ್ಯರಿಂದ ನಾಮವಳಿ ಜರುಗಿತು ನಂತರ ಬಂದAತ ಭಕ್ತರಿಗೆ ಮಹಾಪ್ರಸಾದ ವಿನಿಯೋಗವಾಯಿತು
ಪ್ರತಿ ವರ್ಷ ಈ ಒಂದು ಸಮಾರಾಧನೆ ಅದ್ದೂರಿಯಾಗಿ ಜರುಗಲಿದ್ದು ತಾಳಿಕೋಟೆಯ ಸಮಸ್ತ ನಾಗರಿಕರು ಸುತ್ತಮುತ್ತಲು ಗ್ರಾಮಸ್ಥರು ಸಹ ಭಾಗವಹಿಸುತ್ತಾರೆ ಈ ಸಮಾರಾಧನೆ ಬಗ್ಗೆ ಮಾತನಾಡಿದ ಶ್ರೀಧರ ಗ್ರಾಮ ಪುರೋಹಿತ್ ಸಮಾರಾಧನೆಯ ಇತಿಹಾಸವನ್ನು ತಿಳಿಸಿಕೊಟ್ಟಿದ್ದಾರೆ
ಸಮಾರಂಭದಲ್ಲಿ ವೇದಮೂರ್ತಿ ವೆಂಕಟೇಶ , ಗ್ರಾಮ ಪುರೋಹಿತ್ ತಿಮ್ಮಣ್ಣ, ಗ್ರಾಮ ಪುರೋಹಿತ್ ಸಂಜೀವ್, ಗ್ರಾಮ ಪುರೋಹಿತ ಗುಂಡುಭಟ್ ಆಚಾರ, ಶ್ರೀ ಸಂತೋಷ್ ಗುರೂಜಿ, ಶ್ರೀ ರಾಘವೇಂದ್ರ ಉಡುಪಿ, ಶೇಷಾದ್ರಿ ಗ್ರಾಮಪುರೋಹಿತ, ಭಾರತಿ ಗ್ರಾಮ ಪುರೋಹಿತ , ಪರಿಮಳ ಗ್ರಾಮ ಪುರೋಹಿತ
ಗ್ರಾಮ ಪುರೋಹಿತ ಮಾಳಸ, ಶ್ರೀದೇವಿ ಕುಲಕರ್ಣಿ, ಹಾಗೂ ಸಮಾಜದ ಹಿರಿಯರಾದ ಭೀಮರಾವ್ ಕುಲಕರ್ಣಿ, ಗುರುದತ್ ಕುಲಕರ್ಣಿ, ಜಗದೀಶ್ ದೇಶಪಾಂಡೆ, ಆನಂದ್ ಕುಲಕರ್ಣಿ ಹಾಗೂ ಸಮಾಜದ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು

More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ