December 19, 2024

Bhavana Tv

Its Your Channel

ಯಾಂತ್ರೀಕೃತ ಬೋಟಗಳು ಕಾಸರಕೋಡ ಬಂದರಿನಲ್ಲಿ ಲಂಗರು

ಹೊನ್ನಾವರ ; ಸರ್ಕಾರದ ಆದೇಶದಂತೆ ಜೂನ೧ರಿಂದ ಜುಲೈ೩೧ರವರೆಗೆ ೬೧ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆಗೆ ರಜಾ ಘೋಷಿಸಲಾಗಿದ್ದು ಯಾಂತ್ರೀಕೃತ ಬೋಟಗಳು ಕಾಸರಕೋಡ ಬಂದರಿನಲ್ಲಿ ಲಂಗರು ಹಾಕಿವೆ.

ಸಾಮಾನ್ಯವಾಗಿ ಸರ್ಕಾರ ಜೂನ ೧ರಂದು  ಯಾಂತ್ರೀಕೃತ ಬೋಟಗಳಿಗೆ ರಜಾ ಘೋಷನೆ ಮಾಡಿದ್ದರು  ಈ ಬಾರಿ ಲಾಕಡೌನ,ಚಂಡಮಾರುತ ಹಾಗೂ  ಹವಾಮಾನ ವೈಪರೀತ್ಯದಿಂದ ಎಪ್ರೀಲ್ ತಿಂಗಳಲ್ಲೀಯೇ ಮೀನುಗಾರಿಕೆಗೆ  ಅಘೋಷಿತ ರಜೆ ಘೋಷಣೆಯಾಗಿದೆ.  ಹೊನ್ನಾವರ  ತಾಲ್ಲೂಕಿನಾದ್ಯಂತ ಸಾವಿರಾರು ಮೀನುಗಾರರ ಜೀವನ ಬೀದಿಗೆ ಬಂದಿದ್ದು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಕಳೆದ  ೫ವರ್ಷಗಳಿಂದ ಮೀನುಗಾರಿಕೆ ಉದ್ಯಮಕ್ಕೆ ಗೃಹಣ ಹಿಡಿದಂತಾಗಿದ್ದು ವರ್ಷವರ್ಷವೂ ಬೇರೆ ಬೇರೆ ಸಮಸ್ಯೆಗಳು ಮೀನುಗಾರರ ಜೀವನ ಮೂರಾ ಬಟ್ಟೆ ಮಾಡಿದೆ. ಹೊನ್ನಾವರದಲ್ಲಿ ಸುಮಾರು ನಾಲ್ಕುನೂರು ಯಾಂತ್ರೀಕೃತ ಬೋಟಗಳಿದ್ದು ವರ್ಷದ ಆರಂಭದಿAದಲೇ ಮೀನುಗಾರಿಕೆ ಮಂದ ಗತಿಯಲ್ಲಿ ಸಾಗಿತ್ತು. ನೂರಾರು ಬೋಟ ಮಾಲೀಕರು  ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಿ  ಆಶಾಭಾವನೆಯಿಂದಲೇ ಸಮುದ್ರಕ್ಕೆ ಇಳಿದ್ದಿದ್ದರು. ಆದರೆ ಈ ವರ್ಷವು ಮೀನುಗಾರರ ಬದುಕಿಗೆ ಉದ್ಯಮ ಸಹಕಾರಿಯಾಗಿ ಪರಣಿಮಿಸಿಲ್ಲ. ಆರಂಭದಲ್ಲಿ ಸ್ವಲ್ಪ ಮಟ್ಟಿಗೆ  ಮೀನಗಾರಿಕೆ ಚೇತರಿಸಿಕೊಂಡರು ಅನಂತರ ಎದುರಾದ ಮತ್ಸö್ಯಕ್ಷಾಮ, ಖಾಸಗಿ ವಾಣಿಜ್ಯ ಬಂದರು ಹೋರಾಟ, ಚಂಡಮಾರುತ, ಹಾಗೂ ಕರೋನಾ ಮಹಾಮಾರಿಯಿಂದ ಮತ್ತೆ ಮೀನುಗಾರರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.  ಬ್ಯಾಂಕಗಳ ಸಾಲದ ಹೊರೆ ಬೆಳೆಯುತ್ತಲೇ ಇದ್ದು ಈ ವರ್ಷವು ಸರ್ಕಾರ ಯಾವುದೇ ಪ್ಯಾಕೇಜ ಘೋಷಣೆ ಮಾಡದಿರುವುದು  ಮೀನುಗಾರರ ತೀವ್ರ ಆಕ್ರೋಷಕ್ಕೆ ಕಾರಣವಾದೆ.
  ಈ ಕುರಿತು ಭಾವನಾ ಟಿವಿಯೊಂದಿಗೆ ಮಾತನಾಡಿದ ಪರ್ಸಿನ್ ಬೋಟ ಮಾಲೀಕರ ಸಂಘದ ಅಧ್ಯಕ್ಷ  ಹಮ್ಜಾ ಪಟೇಲರವರು ಮೀನುಗಾರರ  ಸಮಸ್ಯೆಗಳ ಕುರಿತು ತಮ್ಮ ಅಳಲನ್ನು ತೋಡಿಕೊಂಡರು.

    ಹೊನ್ನಾವರ ಮೀನುಗಾರರ ಸಂಘಟನೆಗಳ ಜಂಟಿ ಹೋರಾಟ ಸಮಿತಿಯ ಅಧ್ಯಕ್ಷ ರಾಜೇಶ ತಾಂಡೇಲರವರು ಮಾತನಾಡಿ ಸರ್ಕಾರ ಮೀನುಗಾರರ ಸಮಸ್ಯೆಗಳ ಕುರಿತು ನಿರ್ಲಕ್ಷವಹಿಸುತ್ತಿದೆ. ಕರೋನಾ ಮಹಾಮಾರಿಯ  ಸಂಕಷ್ಟದ ಸಂದರ್ಭದಲ್ಲೂ  ಮೀನುಗಾರರಿಗೆ ಯಾವುದೇ ಫ್ಯಾಕೇಜ ಘೊಷಣೆ ಮಾಡಿಲ್ಲ ಎಂದರು.

    ಮೀನುಗಾರಿಕಾ ಉದ್ಯಮೀ ಸಂದೀಪ ಶೇಷಗಿರಿ ತಾಂಡೇಲರವರು ಮಾತನಾಡಿ ಸನ್ಮಾನ್ಯ ಮುಖ್ಯಮಂತ್ರಿಗಳು ಎರಡನೆ ಫ್ಯಾಕೇಜನಲ್ಲಾದರೂ ಮೀನುಗಾರರ ಸಂಕಷ್ಟದಲ್ಲಿ ನೇರವಾಗಲಿ ಎಂದು ಆಶಾ ಬಾವನೆ ವ್ಯಕ್ತ ಪಡಿಸುತ್ತಾ ಬೋಟ ಉದ್ಯಮಿಗಳ ಸಮಸ್ಯೆಬಗ್ಗೆ ವಿವರಿಸಿದರು.

      ಹೊನ್ನಾವರ ತಾಲ್ಲೂಕಿನಾದ್ಯಂತ ಸುಮಾರು ೫ ಸಾವಿರಕ್ಕೂ ಹೆಚ್ಚಿನ ಮೀನುಗಾರರಿದ್ದು ಸರ್ಕಾರ ತಮ್ಮ ಸಮಸ್ಯೆಗಳಿಗೆ ಸ್ಪಂದಿಸಲಿದೇಯೇ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಜಿಲ್ಲೆಯ ಶಾಸಕರು, ಉಸ್ತುವಾರಿ ಸಚಿವರು ಹಾಗೂ ಸಂಸದರು ಈ ಬಗ್ಗೆ ಸರ್ಕಾರಕ್ಕೆ ಒತ್ತಾಯ ಹೇರಬೇಕಾಗಿದೆ. ಆಗ ಮಾತ್ರ ಮೀನುಗಾರರ ಸಮಸ್ಯೆಗಳಿಗೆ ಸ್ವಲ್ಪ ಮಟ್ಟಿಗಾದರೂ ಸರ್ಕಾರ ಸ್ಪಂದಿಲಿದೆ.

ವರದಿ ; ವೆಂಕಟೇಶ ಮೇಸ್ತ ಹೊನ್ನಾವರ

error: