ಗದಗ : ಜಿಲ್ಲೆಯ ರೋಣ ತಾಲೂಕಿನ ಹುನಗುಂಡಿ ಗ್ರಾಮದಲ್ಲಿ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ. ಸಾಮಾಜಿಕ ಅರಣ್ಯ ವಲಯ ರೋಣ ಇವರ ವತಿಯಿಂದ ಪರಿಸರ ಸಂರಕ್ಷಣೆ ಹಾಗೂ ಉತ್ತಮ ಆಮ್ಲಜನಕ ಪಡೆಯಲು ಗ್ರಾಮೀಣ ಭಾಗದ ಜನತೆಗೆ ಅನುಕೂಲವಾಗುವಂತೆ ಅರಣ್ಯ ವಲಯ ಇಲಾಖೆ. ಇವರಿಂದ ಸಸಿ ನೆಡಲು. ಗುಂಡಿ ತೆಗೆಸುವ ಕಾರ್ಯಕ್ರಮವನ್ನು ಹುನಗುಂಡಿ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರಾದ ಬಸವಂತಪ್ಪ ಇವರಿಂದ ನೆರವೇರಿಸಲಾಯಿತು
ಈ ಕಾಮಗಾರಿಯನ್ನು ಹುನಗುಂಡಿ ಇಂದ ಬಸರಕೋಡದವರೆಗೆ. ರಸ್ತೆ ಉದ್ದಕ್ಕೂ ಮರ ನೆಡಲು ಗುಂಡಿಗಳನ್ನು ತೆಗೆಸಲು ಚಾಲನೆ ನೀಡಲಾಯಿತು ಅದೇ ರೀತಿಯಾಗಿ ಹುನಗುಂಡಿ ಕ್ರಾಸ್ ನಿಂದ ಮಾಡಲಗೇರಿ ಕ್ರಾಸ್ ವರೆಗೂ ಕೂಡ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಎಂದು ಬಸವಂತಪ್ಪ ಎಚ್ ತಳವಾರ್ ಅವರು ತಿಳಿಸಿದರು ಈ ಸಂದರ್ಭದಲ್ಲಿ ಅರಣ್ಯ ವಲಯ ಅಧಿಕಾರಿಗಳು.ಊರಿನ ಗಣ್ಯ ಮಾನ್ಯರು ಹಿರಿಯರು ಯುವಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ