May 3, 2024

Bhavana Tv

Its Your Channel

ರೋಗಿಗಳ ಸ್ಪಂದನೆಗೆ ಆಶಾಕಿರಣ: ಬೆಳ್ಮಣ್ ಪ್ರಾಥಮಿಕ ಆರೋಗ್ಯ ಕೇಂದ್ರ

ಬೆಳ್ಮಣ್: ದೇಶಾದ್ಯಂತ ಇಂದು ಕೊರೋನಾ ವೈರಸ್ ನಿಯಂತ್ರಣಕ್ಕೆ ಉಚಿತ ಲಸಿಕೆ ಲಭ್ಯವಿದ್ದು, ಬೆಳ್ಮಣ್ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಲಸಿಕೆ ಪಡೆಯುವ ಉತ್ಸಾಹ ಇಲ್ಲಿನ ಜನರಲ್ಲಿ ಹೆಚ್ಚುತ್ತಿದ್ದು, ಲಸಿಕೆ ಬೇಡಿಕೆಗೆ ಅನುಗುಣವಾಗಿ ಲಸಿಕೆಯ ಕೊರತೆ ಕಂಡುಬರುತ್ತಿದೆ. ಆದರೂ ಇಲ್ಲಿನ ವೈದ್ಯಾಧಿಕಾರಿ ಡಾ.ಬಿ.ಬಿ.ರಾವ್ ಬೇರೆ ಸಮುದಾಯ ಕೇಂದ್ರಗಳಿAದ ತರಿಸಿ ಬಂದಿರುವAತಹ ಜನರಿಗೆ ಲಸಿಕೆ ನೀಡುವಲ್ಲಿ ಇಲ್ಲಿನ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಶ್ರಮ ವಹಿಸುತ್ತಾರೆ.

ಗ್ರಾಮೀಣ ಭಾಗದಲ್ಲಿರುವ ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿನಕ್ಕೆ ಸರಾಸರಿ ನೂರಕ್ಕೂ ಮಿಕ್ಕಿ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿರುವುದು ವಿಶೇಷವಾಗಿದೆ. ಇಲ್ಲಿನ ವೈದ್ಯಾಧಿಕಾರಿಯ ನಯ-ವಿನಯತೆ ಹಾಗೂ ಚಿಕಿತ್ಸೆ ನೀಡುವ ಪರಿ ಜನರಿಗೆ ತುಂಬಾ ಇಷ್ಟವಾಗಿದ್ದು, ಬೇರೆ ಸ್ಥಳೀಯ ಗ್ರಾಮಗಳಿಂದಲೂ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಚಿಕಿತ್ಸೆ ಪಡೆಯಲು ಬಂದಿರುವ ರೋಗಿಗಳಿಂದ ಹಾಗೂ ಸ್ಥಳೀಯರಿಂದಲೂ ಇಲ್ಲಿಯ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ವೈದ್ಯಾಧಿಕಾರಿ ಮಾತನಾಡಿ “ಇಲ್ಲಿಯ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಿಂದಾಗಿ ಇಲ್ಲಿ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ರೋಗಿಗಳ ಸೇವೆಯೇ ನಮ್ಮ ಆಧ್ಯಾ ಕರ್ತವ್ಯವಾಗಿದ್ದು, ಜನರು ಈ ಕೊರೊನಾದ ಸಂಧಿಗ್ಧ ಕಾಲದಲ್ಲಿ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ವಹಿಸಿ ಎಚ್ಚರಿಕೆಯಿಂದ ಇರಬೇಕೆಂದರು”.
ವರದಿ ; ಅರುಣ ಭಟ್. ಕಾರ್ಕಳ

error: