
ಭಟ್ಕಳ: ವೈದ್ಯರ ದಿನಾಚರಣೆಯ ಅಂಗವಾಗಿ ಭಟ್ಕಳ ಸ್ಥಳೀಯ ರೋಟರಿ ಕ್ಲಬ್ ವತಿಯಿಂದ ತಾಲೂಕಾ ಆಸ್ಸತ್ರೆಗೆ ಭೇಟಿ ನೀಡಿ ಅಲ್ಲಿನ ವೈದ್ಯರನ್ನು ಹೂಗುಚ್ಚ ನೀಡಿ ಪ್ರಶಸ್ತಿ ಪತ್ರವನ್ನು ಕೊಟ್ಟು ಗೌರವಿಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಅವರು ಮಾತನಾಡಿ ವೈದ್ಯಕೀಯ ಕ್ಷೇತ್ರ ಅತ್ಯಂತ ಕಠಿಣವಾದ ಕ್ಷೇತ್ರವಾಗಿದ್ದು ಪ್ರತಿ ಹೆಜ್ಜೆಗೂ ನಾವು ಸವಾಲನ್ನು ಎದುರಿಸುತ್ತೇವೆ. ಹಲವಾರು ಬಾರಿ ವೃತ್ತಿಯ ಕುರಿತು ಬೇಸರ ವ್ಯಕ್ತವಾಗುವಾದಾಗ ಇನ್ನೊಂದು ಏನೋ ಹೊತನವನ್ನು ವೃತ್ತಿಯಲ್ಲಿ ಕಾಣುತ್ತೇವೆ.ಬೆಳಿಗ್ಗೆಯಿಂದ ಕೆಲಸದಲ್ಲಿಯೇ ತೊಡಗಿಸಿಕೊಂಡಿದ್ದ ನಮಗೆ ವೈದ್ಯರ ದಿನವನ್ನು ರೋಟರಿ ಕ್ಲಬ್ ಅವರು ನೆನಪಿಸಿಕೊಟ್ಟರು ಎಂದು ಎಲ್ಲರನ್ನು ಗೌರಿಸಿದ್ದಕ್ಕೆ ಅಭಿನಂದಿಸಿದರು.
ರೋಟರಿ ಕ್ಲಬ್‌ನ ನೂತನ ಅಧ್ಯಕ್ಷ ರಾಘವೇಂದ್ರ ಎಂ. ನಾಯ್ಕ ಅವರು ವೈದ್ಯರ ಸೇವೆಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಶ್ರೀನಿವಾಸ ಪಡಿಯಾರ್, ಸದಸ್ಯರಾದ ರಾಜೇಶ ನಾಯಕ, ಶಾಕೀರ್ ಹುಸೇನ್, ಡಾ. ಕೀರ್ತಿ ಶೆಟ್ಟಿ, ಜಲಾಲುದ್ದೀನ್ ಮುಂತಾದವರು ಉಪಸ್ಥಿತರಿದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ