May 18, 2024

Bhavana Tv

Its Your Channel

ಭಟ್ಕಳ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸರಳವಾಗಿ ಪತ್ರಿಕಾ ದಿನಾಚರಣೆ ಆಚರಣೆ

ಭಟ್ಕಳ: ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಹಿರಿಯ ಸಹಕಾರಿ ಧುರೀಣ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಡಿ.ಬಿ. ನಾಯ್ಕ ಜಾಲಿ ಹಾಗೂ ಸಮಾಜ ಸೇವಕ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ರುಕ್ನುದ್ಧೀನ್ ನಿಸಾರ್ ಅಹಮ್ಮದ್ ಅವರನ್ನು ಗೌರವಿಸಿಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್‌ರವರು ಮಾತನಾಡಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗ ಸಮಾಜದಲ್ಲಿ ತನ್ನದೇ ಆದ ಜವಾಬ್ದಾರಿ ನಿರ್ವಹಿಸುತ್ತಾ, ಸಮಾಜದಲ್ಲಿ ಆಗಬೇಕಾದ ಅಭಿವೃದ್ಧಿ, ಕುಂದುಕೊರತೆಗಳ ಕುರಿತು ವರದಿ ಮಾಡಿ ಸರಕಾರ ಮತ್ತು ಅಧಿಕಾರಿಗಳ ಗಮನ ಸೆಳೆಯುತ್ತಿದೆ ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಹಮ್ಮಿಕೊಂಡು ಸಮಾಜದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದವರನ್ನು ಗುರುತಿಸುವ ಕಾರ್ಯ ಮಾಡಿರುವುದನ್ನು ಶ್ಲಾಘಿಸಿದರು.
ಉಪಸ್ಥಿತರಿದ್ದ ಇನ್ನೋರ್ವ ಮುಖ್ಯಅತಿಥಿ ಡಿವೈಎಸ್ಪಿ ಕೆ. ಯು. ಬೆಳ್ಳಿಯಪ್ಪ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಪತ್ರಿಕೆ ಓದುವವರ ಸಂಖ್ಯೆ ಕಡಿಮೆ ಆಗಿದೆ. ಯುವ ಜನಾಂಗ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕಿದೆ ಎಂದ ಅವರು ಪತ್ರಕರ್ತರು ಸಮಾಜದ ಸಿಸಿ ಕ್ಯಾಮರಾ ಇದ್ದಂತೆ. ಸಮಾಜದ ಅಂಕುಡೊAಕು, ಆಗು ಹೋಗು, ಕುಂದುಕೊರತೆಗಳನ್ನು ವರದಿ ಮೂಲಕ ತಿಳಿಸುವ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭಾಸ್ಕರ ನಾಯ್ಕ ವಹಿಸಿದ್ದರು.
ಸನ್ಮಾನಿತರಾದ ಡಿ.ಬಿ.ನಾಯ್ಕ, ರುಕ್ನುದ್ದೀನ ನಿಸ್ಸಾರ್ ಅಹಮ್ಮದ್ ಮಾತನಾಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಪತ್ರಿಕಾ ದಿನಾಚರಣೆ ಮಹತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯದರ್ಶಿ ಮೋಹನ ನಾಯ್ಕ ಸ್ವಾಗತಿಸಿ, ನಿರ್ವಹಿಸಿದರು. ಜಿಲ್ಲಾ ಸಮಿತಿ ಸದಸ್ಯ ಎಂ.ಆರ್. ಮಾನ್ವಿ ವಂದಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಸತೀಶಕುಮಾರ, ರಾಘವೇಂದ್ರ ಹೆಬ್ಬಾರ, ಇನಾಯತುಲ್ಲಾ ಗವಾಯಿ, ಅತೀಕುರ್ರೆಹಮಾನ ಶಾಬಂದ್ರಿ, ರಿಜ್ವಾನ್ ಗಂಗಾವಳಿ, ಫಯ್ಯಾಜ್ ಮುಲ್ಲಾ, ಭವಾನಿಶಂಕರ ನಾಯ್ಕ, ಪ್ರಸನ್ನ ಭಟ್ಟ, ಉದಯ ನಾಯ್ಕ, ಶೈಲೇಶ ವೈದ್ಯ ಉಪಸ್ಥಿತರಿದ್ದರು.

error: