May 18, 2024

Bhavana Tv

Its Your Channel

ಭಟ್ಕಳ ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಬೆಂಕಿ ಸುಟ್ಟು ಕರಕಲಾದ ವಸ್ತುಗಳು

ಶುಕ್ರವಾರ ಬೆಳಗಿನಜಾವ ೪.೩೦ರ ಸುಮಾರಿಗೆ ನ್ಯಾಯಾಲಯ ಕಟ್ಟಡದ ಎದುರು ಭಾಗದಲ್ಲಿ ಬೆಂಕಿ ಹೊತ್ತಿಕೊಂಡು ಉರಿಯಲಾರಂಭಿಸಿದ್ದು ನ್ಯಾಯಾಲಯದ ವಾಚ್‌ಮನ್ ಗಮನಕ್ಕೆ ಬಂದಿದ್ದು ತಕ್ಷಣ ಹೊರ ಬಂದ ಅವರು ಇತರರಿಗೆ ವಿಷಯ ತಿಳಿಸಿದ್ದಾರೆನ್ನಲಾಗಿದೆ. ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ವಾಹನ ಆಗಮಿಸಿ ಬೆಂಕಿಯನ್ನು ಆರಿಸಲು ಪ್ರಯತ್ನಿಸಿದ್ದು ಬೆಂಕಿಯನ್ನು ಹತೋಟಿಗೆ ತರಲು ಗಂಟೆಗಳೇ ಬೇಕಾಯಿತು. ಆದರೂ ಸಹ ಕಟ್ಟಡದ ಒಂದೊoದು ಪಾಶ್ರ‍್ವದಲ್ಲಿಯೂ ಹೊಗೆಯಾಡುತ್ತಿದ್ದು ಅಲ್ಲಲ್ಲಿ ಬೆಂಕಿಯನ್ನು ಆರಿಸುವಲ್ಲಿ ಯಶಸ್ವೀಯಾಗಿದ್ದಾರೆ.

೧೯೮೬ರಲ್ಲಿ ಮಾಜಿ ಸಚಿವ ಆರ್. ಎನ್. ನಾಯ್ಕ ಅವರು ಶಾಸಕರಿದ್ದಾಗ ಮುತುವರ್ಜಿ ವಹಿಸಿ ನ್ಯಾಯಾಲಯ ಸಂಕೀರ್ಣವನ್ನು ಮಂಜೂರಿ ಮಾಡಿಸಿಕೊಂಡು ಬಂದಿದ್ದು ಹೊಸ ಕಟ್ಟಡ ಕಟ್ಟಿ ೧೯೮೮ರಲ್ಲಿ ಉದ್ಘಾಟನೆ ಗೊಂಡಿದ್ದ ನ್ಯಾಯಾಲಯದ ಕಟ್ಟಡದ ಒಂದು ಭಾಗಕ್ಕೆ ಸಂಪೂರ್ಣ ಹಾನಿಯಾಗಿದ್ದು ಕಂಪ್ಯೂಟರ್ ಹಾಗೂ ಜಿಲ್ಲಾ ನ್ಯಾಯಾಲಯಕ್ಕೆ ವಾಪಾಸು ಕಳುಹಿಸಬೇಕಿದ್ದ ಹೊಸ ಝೆರಾಕ್ಸ ಯಂತ್ರ ಹಾಗೂ ಕಂಪ್ಯೂಟರ್ ರೂಮಿನ ಫರ್ನಿಚರ್ ಸಂಪೂರ್ಣ ಸುಟ್ಟು ಹೋಗಿವೆ. ಅಲ್ಲದೇ ನ್ಯಾಯಾಲಯ ಸಂಕೀರ್ಣದ ವಿದ್ಯುತ್ ಪರಿಕರಗಳು, ವಯರಿಂಗ್, ನ್ಯಾಯಾಲಯದ ಕೇಸುಗಳನ್ನು ನೋಡಲು ಇಟ್ಟಿದ್ದ ಟಿ.ವಿ. ಕೂಡಾ ಭಸ್ಮವಾಗಿದೆ. ಶಿರಸ್ತೇದಾರರ ಕೊಠಡಿಯ ಮೇಲ್ಚಾವಣಿ ಕೂಡಾ ಸುಟ್ಟು ಹೋಗಿದ್ದು ಕೋರ್ಟ ಹಾಲ್‌ನ ಕಟ್ಟಡ ಭಾಗಶ: ಹಾನಿಯಾಗಿದೆ.

ನ್ಯಾಯಾಲಯದಲ್ಲಿ ಇದ್ದ ಪ್ರಕರಣಗಳಿಗೆ ಸಂಬoಧ ಪಟ್ಟಂತೆ ಹಾಗೂ ಇತ್ಯರ್ಥವಾಗಿರುವ ಪ್ರಕರಣಗಳಿಗೆ ಸಂಬoಧ ಪಟ್ಟಂತೆ ಇರುವ ಸಾವಿರಾರು ಕಡತಗಳು ಸುರಕ್ಷಿತವಾಗಿವೆ. ಹಾನಿಯಾಗಿರುವ ಭಾಗಕ್ಕಿಂತ ಎರಡು ಕೋಣೆಯ ನಂತರ ದಾಖಲೆಗಳನ್ನಿಡುವ ಕೋಣೆ ಇದ್ದುದರಿಂದ ಆ ಭಾಗದ ಕಟ್ಟಡಕ್ಕೆ ಯಾವುದೇ ಹಾನಿ ಸಂಭವಿಸಿಲ್ಲ. ಅಲ್ಲದೇ ಬೆಂಕಿ ಹೊತ್ತಿ ಉರಿಯಲು ಆರಂಭಿಸಿದ ಕೆಲವೇ ಸಮಯದೊಳಗಾಗಿ ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದರಿAದ ಇನ್ನಷ್ಟು ಅನಾಹುತ ತಪ್ಪಿದಂತಾಗಿದೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ಕಟ್ಟಡದ ಹಾನಿಯಾದ ಭಾಗವನ್ನು ಪರಿಶೀಲಿಸಿದರು. ಹಿರಿಯ ವಿಭಾಗದ ನ್ಯಾಯಾಧೀಶರೊಂದಿಗೆ ಈ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ರವಿಚಂದ್ರ ಎಸ್. ಉಪಸ್ಥಿತರಿದ್ದರು. ಬೆಳಿಗ್ಗೆಯೇ ಕಾರವಾರ ಜಿಲ್ಲಾ ನ್ಯಾಯಾಲಯದಿಂದ ಬಂದಿದ ಹೆಚ್ಚುವರಿ ಸಿ.ಇ.ಓ. ನಾಗರಾಜ ನಾಯ್ಕ ಅವರು ಜಿಲ್ಲಾ ಮತ್ತು ಉಚ್ಚ ನ್ಯಾಯಲಕ್ಕೆ ವರದಿ ನೀಡಿದ್ದು ತುರ್ತು ರಿಪೇರಿಗೆ ಈಗಾಗಲೇ ಒಪ್ಪಿಗೆ ನೀಡಲಾಗಿದೆ ಎನ್ನಲಾಗಿದೆ.
ಸುದ್ದಿ ತಿಳಿದ ಶಾಸಕ ಸುನಿಲ್ ನ್ಯಾಯಾಲಕ್ಕೆ ಭೇಟಿ ನೀಡಿದ್ದಲ್ಲದೇ ತಕ್ಷಣ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ತುರ್ತು ರಿಪೇರಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಹಾನಿಯಾದ ಭಾಗದ ತುರ್ತು ರಿಪೇರಿ ಮಾಡಿಕೊಡುವಂತೆ ಸೂಚಿಸಿದ ಅವರು ಸಂಪೂರ್ಣ ರಿಪೇರಿಗೆ ಅಂದಾಜುಪಟ್ಟಿ ತಯಾರಿಸಿ ಕಳುಹಿಸುವಂತೆಯೂ ಸೂಚಿಸಿದರು.
ಕೋರ್ಟ ಕಟ್ಟಡಕ್ಕೆ ಬೆಂಕಿ ತಗುಲಿದ ವಿಷಯ ತಿಳಿದ ವಕೀಲರುಗಳು ತಕ್ಷಣ ಆಗಮಿಸಿ ಅಗ್ನಿಶಾಮಕ ದಳದ ಸಿಬ್ಬಂದಿಗಳೊAದಿಗೆ ತಾವೂ ಸಹ ಕೆಲವೊಂದು ಸಾಮಗ್ರಿಗಳನ್ನು ಹೊರ ಸಾಗಿಸಲು ಸಹಕರಿಸಿದರು. ಬೆಳಿಗ್ಗೆಯ ೪.೪೫ರ ಸುಮಾರಿಗೆ ಹಾಜರಿದ್ದ ವಕೀಲರು ಸ್ವತಹ ಒಳಹೋಗಿ ಹಲವು ಕಡತಗಳನ್ನು ಹಾಗೂ ಬೆಂಕಿಗೆ ಆಹುತಿಯಾಗಬಹುದಾದ ಸಾಮಗ್ರಿಗಳನ್ನು ಹೊರಗೆ ಸಾಗಿಸಿ ಸುರಕ್ಷಿತ ಸ್ಥಳದಲ್ಲಿಡಲು ಸಹಕರಿಸುವ ಮೂಲಕ ಉತ್ತಮ ಕಾರ್ಯ ಮಾಡಿದ್ದಾರೆ.

error: