May 18, 2024

Bhavana Tv

Its Your Channel

ಅರಣ್ಯ ಸಿಬ್ಬಂದಿಗಳ ದೌರ್ಜನ್ಯ: ಉಪ ವಿಭಾಗ ಅಧಿಕಾರಿಗಳ ಮುಂದೆ ಅರಣ್ಯವಾಸಿಗಳ ತೀವ್ರ ಆಕ್ರೋಶ

ಭಟ್ಕಳ: ಅರಣ್ಯ ಸಿಬ್ಬಂದಿಗಳಿAದ ಕಾನೂನು ಬಾಹಿರ, ದೌರ್ಜನ್ಯ, ಕಿರುಕುಳ ನಿಯಂತ್ರಿಸಿ. ಇಲ್ಲದಿದ್ದಲ್ಲಿ ಅರಣ್ಯ ಅತಿಕ್ರಮಣದಾರರ ಸಹನೆಯನ್ನು ಪರೀಕ್ಷಿಸುವುದು ಸೂಕ್ತವಲ್ಲ. ಕಾನೂನು ಉಚ್ಛ ನ್ಯಾಯಾಲಯಗಳ ಮತ್ತು ಮುಖ್ಯಮಂತ್ರಿಗಳ ನಿರ್ದೇಶನವನ್ನು ನಿರ್ಲಕ್ಷಿಸುವ ಅರಣ್ಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಲಿ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಸರಕಾರಕ್ಕೆ ಅಗ್ರಹಿಸಿದ್ದಾರೆ.
ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದ ನೀಯೋಗವು ಇಂದು ಸ್ಥಳೀಯ ಉಪವಿಭಾಗ ಅಧಿಕಾರಿ ಮಮತಾದೇವಿ ಅವರನ್ನು ಭೇಟಿಯಾಗಿ ಅರಣ್ಯ ಸಿಬ್ಬಂದಿಗಳಿAದ ಉಂಟಾಗುತ್ತಿರುವ ಕಿರುಕುಳದ ಕುರಿತು ಚರ್ಚಿಸಿದ ಸಂದರ್ಭದಲ್ಲಿ ಒತ್ತಾಯಿಸಲಾಯಿತು.
ಅರಣ್ಯ ಹಕ್ಕು ಕಾಯಿದೆ ಉರ್ಜಿತವಿರುವಾಗ ಅರಣ್ಯ ಅತಿಕ್ರಮಣದಾರರ ಮೂಲಭೂತ ಮತ್ತು ಜೀವನಾವಶ್ಯಕ ಕಾರ್ಯಚಟುವಟಿಕೆಗೂ ಅರಣ್ಯ ಸಿಬ್ಬಂದಿಗಳು ಆತಂಕ ಮಾಡುತ್ತಿರುವುದು ಖಂಡನಾರ್ಹ. ಉಚ್ಛ ನ್ಯಾಯಾಲಯವು ಸಹಿತ ಅರಣ್ಯವಾಸಿಗಳಿಗೆ ಮಂಜೂರಿ ಪ್ರಕ್ರೀಯೆ ಸಂದರ್ಭದಲ್ಲಿ ಆತಂಕ, ಒಕ್ಕಲೆಬ್ಬಿಸುವ ಕ್ರೀಯೆ ಜರುಗಿಸಬಾರದೆಂಬ ನಿರ್ದೇಶನವೂ ಸಹಿತ ಉಲ್ಲಂಘಿಸಿರುವುದು ಖೇದಕರ ಎಂಬ ವಿಷಯ ಚರ್ಚೆ ಸಂದರ್ಭದಲ್ಲಿ ಪ್ರಸ್ತಾಪಿಸಲಾಯಿತು. ಜೀವನಾಶ್ಯಕ ಮತ್ತು ಮೂಲಭೂತ ವ್ಯವಸ್ಥೆಗೆ ಆತಂಕ ಪಡಿಸದಂತೆ ನಿರ್ಧೇಶನ ನೀಡಬೇಕೆಂದು ಸಭೆಯಲ್ಲಿ ಅಗ್ರಹಿಸಲಾಯಿತು.
ಚರ್ಚೆಯ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ದೇವರಾಜ ಗೊಂಡ, ಪಾಂಡುರAಗ ನಾಯ್ಕ, ರಿಜ್ವಾನ್, ಕಯುಂ ಸಾಬ, ತಂಜೀಮ್ ಅಧ್ಯಕ್ಷ ಫರವೆಜ್ ಯಸಿಯಂ, ತೋಪಿಕ್ ಬ್ಯಾರಿ, ಇನಾಯತವುಲ್ಲಾ ಸಾಬಂದರಿ, ಸೈಯದ್ ಅಲಿ, ಫರಿದಾ ಬಾನು, ಕಂಬಳಿ ಆಚಾರಿ, ಮಹಮ್ಮದ ಶಬ್ಬೀರ್ ಸಾಬ, ಸೈಯದ್ ಅಲಿ, ಸಲೀಂ ಶಬ್ಬೀರ್ ನತಾರ್, ಪ್ರಮುಖರು ಭಾಗವಹಿಸಿದ್ದರು.
ಇತ್ತೀಚಿಗೆ ಅರಣ್ಯ ಅಧಿಕಾರಿಗಳಿಂದ ಕಿರುಕುಳಕ್ಕೆ ಒಳಪಟ್ಟ ಸ್ಥಳಗಳಿಗೆ ಹೋರಾಟಗಾರರ ವೇದಿಕೆ ನಿಯೋಗವು ಭೇಟಿಕೊಟ್ಟು ಪರಿಶೀಲಿಸಿತು.
ಅರಣ್ಯವಾಸಿಗಳ ತೀವ್ರ ಆಕ್ರೋಶ:
ಅರಣ್ಯವಾಸಿಗಳಿಗೆ ಅರಣ್ಯ ಸಿಬ್ಬಂದಿಗಳಿAದ ಉಂಟಾಗುತ್ತಿರುವ ದೌರ್ಜನ್ಯ, ಕಿರುಕುಳದ ಕುರಿತು ಸಾಕ್ಷ್ಯ ಚಿತ್ರ, ವಿಡಿಯೋ, ಪೋಟೋಗಳನ್ನ ಪ್ರದರ್ಶಿಸಿ ಅರಣ್ಯ ಸಿಬ್ಬಂದಿಗಳ ಕಾನೂನು ಬಾಹಿರ ಕೃತ್ಯದ ಕುರಿತು ನೊಂದ ಅರಣ್ಯವಾಸಿಗಳು ಅರಣ್ಯಸಿಬ್ಬಂದಿಗಳ ದುರ್ನಡವಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಅತೀ ಶೀಘ್ರದಲ್ಲಿ ಚರ್ಚೆಗೆ ಅವಕಾಶ:
ಅರಣ್ಯ ಹಕ್ಕು ಕಾಯಿದೆ ಅನುಷ್ಟಾನದ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿಗಳಿAದ ಪದೇ ಪದೇ ಕಿರುಕುಳ, ದೌರ್ಜನ್ಯ , ಮಾನಸಿಕ ಮತ್ತು ದೈಹಿಕ ಹಿಂಸೆ ಜರಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳಿಂದ ಹೋರಾಟಗಾರರೊಂದಿಗೆ ಅರಣ್ಯ ಅಧಿಕಾರಿಗಳು ಮುಕ್ತ ಚರ್ಚೆಗೆ ಅವಕಾಶ ನೀಡಬೇಕೆಂದು ನಿಯೋಗದ ಬೇಡಿಕೆಗೆ ಅತೀ ಶೀಘ್ರದಲ್ಲಿ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಮುಕ್ತ ಚರ್ಚೆಗೆ ಅವಕಾಶಮಾಡಿಕೊಡಲಾಗುವುದೆಂದು ಉಪವಿಭಾಗ ಅಧಿಕಾರಿ ಮಮತಾದೇವಿ ಅವರು ನೀಯೋಗಕ್ಕೆ ಆಶ್ವಾಸನೆ ನೀಡಿದರು.

error: