December 19, 2024

Bhavana Tv

Its Your Channel

ಕೃಷ್ಣಾ ನದಿ ಪ್ರವಾಹದಿಂದ ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಸೇತುವೆ ಸಂಪೂರ್ಣ ಮುಳಗಡೆ

ಬಾಗಲಕೋಟ: ಜಮಖಂಡಿ ತಾಲ್ಲೂಕಿನ ಕೃಷ್ಣಾ ನದಿ ಪ್ರವಾಹದಿಂದ ಜನರ ಮತ್ತು ದನಕರುಗಳ ಗೂಳು ಹೇಳತಿರದಾಗಿದೆ.
ಹಿರೇಪಡಸಲಗಿ ಕಾಳಜಿ ಕೇಂದ್ರದಲ್ಲಿ ದನಕರುಗಳಿಗೆ ಮೇವು ವಿತರಣೆ ಮಾಡುತ್ತಿದ್ದು ಆ ಮೇವು ನಮ್ಮ ದನಕರುಗಳಿಗೆ ಸಾಲುತಿಲ್ಲ ಬೇರೆ ಕಡೆ ಹೋಗಿ ಮೇವು ತಂದು ಹಾಕುತ್ತೆವೆ ಹಾಗೂ ಎರಡು ಹೊತ್ತು ಊಟ ಮುಂಜಾನೆ ಒಂದು ಹೂತ್ತು ನಾಷ್ಟಾ ಕೊಡುತ್ತಾರೆ ಎಂದು ಸಂತ್ರಸ್ತರು ಮಾಧ್ಯಮದ ಮುಂದೆ ಹೇಳಿದರು.

ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡು ಸಂತ್ರಸ್ತರು ಒಂದು ಕಡೆಯಾದರೆ ಪ್ರವಾಹ ವೀಕ್ಷಣೆಗೆ ಬಂದ ಗಾಮೀಣ ಮತ್ತು ನಗರ ಜನಗಳು ಸೇಲ್ಪಿಗಳಿಗೆ ಬಿದ್ದಿದ್ದಾರೆ.
ಜಂಬಗಿ ಕೆ.ಡಿ ಹಾಗೂ ಟಕ್ಕೂಡ ಕ್ರಾಸ ಮಾರ್ಗಗಳಲ್ಲಿ ರಸ್ತೆ ಬದಿಯಲ್ಲಿ ತಮ್ಮ. ಜಾನುವಾರುಗಳನ್ನು ಕಟ್ಟಿದ್ದಾರೆ.ಜಾನುವಾರುಗಳಿಗೆ ಮೇವು ಇಲ್ಲದೆ, ಇರಲು ಸ್ಥಳವು ಇಲ್ಲದೆ ಕುಟುಂಬ ಸಮೇತ ಬಯಲಿನಲ್ಲೆ ಜೀವನ ಸಾಗಿಸುತ್ತಿದ್ದಾರೆ.
ಒಟ್ಟಿನಲ್ಲಿ ಕರೋನದಿಂದ ಜನಜೀವನ ಸುಧಾರಿಸುವಷ್ಟರಲ್ಲಿ ಕೃಷ್ಣಾ ನದಿಯ ಪ್ರವಾಹದಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.ಇನ್ನಾದರು ಸರ್ಕಾರ ಎಚ್ಚೆತುಕೂಂಡು ಕೃಷ್ಣಾ ನದಿ ತೀರದ ಜನರಿಗೆ ಸಿಗುವ ಸೌಲಭ್ಯಗಳನ್ನು ಕೂಟ್ಟು ಸುರಕ್ಷಿತ ಸ್ಥಳಗಳಿಗೆ ಗ್ರಾಮಗಳನ್ನು ಸ್ಥಳಾಂತರಿಸಬೇಕೇAದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವರದಿ ಕಿರಣ ಸೂರಗೂಂಡ ಜಮಖಂಡಿ

error: