ಕೂಡಲಸಂಗಮ: ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಸಂತ್ರಸ್ತರ ಸಮಸ್ಯೆ ಪರಿಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಆರೋಪಿಸಿದರು
ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳನ್ನು ವೀಕ್ಷಿಸಿದ ನಂತರ ಕೂಡಲಸಂಗಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ನದಿ ದಡದ ಗ್ರಾಮಸ್ಥರು ಕಳೆದ ಒಂದು ವಾರದಿಂದ ಪ್ರವಾಹದ ಸಮಸ್ಯೆ ಅನುಭವಿಸುತ್ತಿದ್ದಾರೆ. ಪರಿಹರಿಸಬೇಕಾದ ಶಾಸಕರು ಬೆಂಗಳೂರಿನಲ್ಲಿ ಮಂತ್ರಿ ಸ್ಥಾನಕ್ಕಾಗಿ ಕುಳಿತಿದ್ದಾರೆ. ಶಾಸಕರಾಗಿಯೇ ಕಾರ್ಯ ಮಾಡಲು ಬರದ ನೀವು ಮಂತ್ರಿಯಾಗಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ. ಮೂರು ಬಾರಿ ಶಾಸಕರಾಗಿದ್ದೀರಿ. ನದಿ ದಡದ ಸಂತ್ರಸ್ತರ ಸಮಸ್ಯೆಗೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದರು.
ನಾಲ್ಕು ಬಾರಿ ಪ್ರವಾಹಕ್ಕೆ ತುತ್ತಾದ ನದಿ ದಡ ಜನರು ರೊಸಿ ಹೋಗಿದ್ದಾರೆ. ೨೦ ವರ್ಷದಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ನಾನು ಶಾಸಕನಾಗಿದ್ದಾಗ ೧೦ ಗ್ರಾಮಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡಿಸಿ ಪುನರ್ವಸತಿ ಕೇಂದ್ರದ ಅಭಿವೃದ್ದಿಗೆ ೨೦೦ ಕೋಟಿ ಹಣ ಬಿಡುಗಡೆ ಮಾಡಿಸಿದ್ದೆ.
ತಾಲೂಕಿನ ನದಿಯ ದಡದ ೨೬ ಗ್ರಾಮಗಳು ಪ್ರತಿ ವರ್ಷ ನದಿಯಿಂದ ಸಮಸ್ಯೆ ಅನುಭವಿಸುತ್ತಿವೆ. ಈ ಗ್ರಾಮಗಳಿಗೆ ಶಾಶ್ವತ ಪುನರ್ವಸತಿ ಸೌಲಭ್ಯ ನೀಡುವ ಕಾರ್ಯವನ್ನು ಸರ್ಕಾರ ಮಾಡಬೇಕು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ತಾಲೂಕಿನ ಸಂತ್ರಸ್ತರ ಸಮಸ್ಯೆ ಪರಿಹರಿಸುವಂತೆ ಮನವಿ ಸಲ್ಲಿಸುತ್ತೇನೆ. ಈ ಭಾಗದ ಸಮಸ್ಯೆಯನ್ನು ಆಲಿಸಲು ಬರುವಂತೆ ವಿನಂತಿಯನ್ನು ಮಾಡಿಕೊಳ್ಳುತ್ತೇನೆ ಎಂದರು.
ಕೂಡಲಸಂಗಮ ಅಡವಿಹಾಳ ಸೇತುವೆಗೆ ನಾನು ಶಾಸಕನಾಗಿದ್ದ ಅನುದಾನವನ್ನು ಕೊಡಿಸಿದ್ದೆ. ಸಿದ್ದರಾಮಯ್ಯನವರು ಕಾಮಗಾರಿಗೆ ಚಾಲನೆ ಕೊಟ್ಟಿದ್ದರು. ಸದ್ಯ ಕಾಮಗಾರಿ ಮುಗಿಯಲು ಬಂದಿವೆ. ಸೇತುವೆಯಿಂದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸಲು ೩ ಎಕರೆ ಭೂಸ್ವಾಧಿನ ಕಾರ್ಯ ನಡೆಯಬೇಕು. ಶಾಸಕರ ನಿರಾಸಕ್ತಿಯ ಫಲವಾಗಿ ೩ ವರ್ಷ ಕಳೆಯುತ್ತಾ ಬಂದರೂ ಇನ್ನೂ ಭೂಸ್ವಾಧಿನ ಪ್ರಕ್ರಿಯೇ ಮುಗಿದಿಲ್ಲ ಎಂದರು.
ಮುಖಂಡರಾದ ಗಂಗಾಧರ ದೊಡ್ಡಮನಿ ಶೇಖರಗೌಡ ಗೌಡರ, ಗಂಗಣ್ಣ ಬಾಗೇವಾಡಿ, ಭೀಮಪ್ಪ ಯರಝರಿ, ಮುತ್ತಣ್ಣ ಕುರಿ, ಲಕ್ಷ್ಮೀಪುತ್ರ ಮೇಲಿಮನಿ, ಪ್ರಭು ಕೋಟೂರ ಮುಂತಾದವರು ಇದ್ದರು.
ಮಾಜಿಶಾಸಕ ವಿಜಯಾನಂದ ಕಾಶಪ್ಪನವರ ಬಸವಣ್ಣನ ಐಕ್ಯ ಮಂಟಪದ ಬಳಿ ತುಂಬಿ ಹರಿಯುತ್ತಿರುವ ನದಿಯನ್ನು ವೀಕ್ಷಿಸಿದರು
ವರದಿ:ವಿನೋದ ಬಾರಿಗಿಡದ
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ