December 19, 2024

Bhavana Tv

Its Your Channel

ಬಸವಣ್ಣನ ಐಕ್ಯ ಭೂಮಿಯಲ್ಲಿ ಟಿವಿ ೧೨ಕನ್ನಡ ಸುದ್ದಿ ವಾಹಿನಿ ಉದ್ಘಾಟಿಸಿದ ಶ್ರೀ ಬಸವ ಜಯ ಮೃತ್ಯುಂಜಯ ಶ್ರೀ ಗಳು.

ಬಾಗಲಕೋಟೆ :ನೂತನ ಟಿವಿ ೧೨ ವಾಹಿನಿಯ ಗೌರವ ಸಂಪಾದಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಮಾನ್ಯ ಹೆಚ್.ಶಿವರಾಮೇಗೌಡರ ನೇತೃತ್ವದಲ್ಲಿ, ಟಿವಿ ೧೨ ವಾಹಿನಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ಮಾನ್ಯ ಚೆನ್ನಕೇಶವರವರ ಮುಖಂಡತ್ವದಲ್ಲಿ ಈದಿನ ರಾಜ್ಯದ ಮೂವತ್ತೊಂದು ಜಿಲ್ಲೆಗಳಲ್ಲಿ ಎಕಕಾಲಕ್ಕೆ ಆಯಾ ಜಿಲ್ಲೆಗಳಲ್ಲಿ ಚಾಲನೆ ನೀಡಲಾಯಿತು.

ಅದೇ ರೀತಿ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಕ್ಷೇತ್ರದಲ್ಲಿ ನೂತನ ಟಿವಿ ೧೨ ವಾಹಿನಿಯನ್ನು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಯಿಸಿದ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಪರಮಪೂಜ್ಯ ಬಸವಜಯ ಮೃತ್ಯುಂಜಯ ಮಹಾ ಸ್ವಾಮಿಗಳ ಅಮೃತ ಹಸ್ತದಿಂದ ಉದ್ಘಾಟನೆ ನೆರವೇರಿತು.ನೂತನ ಚಾನಲ್ ಉದ್ಘಾಟಿಸಿ ಮಾತನಾಡಿದ ಪರಮಪೂಜ್ಯರು ಅಗಸ್ಟ್ ೧೫ ಭಾರತಕ್ಕೆ ಸ್ವಾತಂತ್ರ‍್ಯ ಸಿಕ್ಕ ಪುಣ್ಯಕಾಲ ಹಾಗೂ ದೇಶಭಕ್ತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನು ಜನಿಸಿದ ಇಂತಹ ಶುಭ ದಿನದಂದು ನಾಡಿನಾದ್ಯಂತ ಉದ್ಘಾಟನೆಗೊಳ್ಳುತ್ತಿರುವ ನೂತನ ಸುದ್ದಿವಾಹಿನಿಯು ನಾಡಿನ ಜನತೆಯ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸಲಿ,ಬಡವರ ಆಶಾಕಿರಣವಾಗಲಿ,ನೊಂದ ಮನಸ್ಸುಗಳಿಗೆ ಸಹಾಯ ಹಸ್ತ ದೊರಕಿಸಲು ಪ್ರಯತ್ನಿಸಲಿ ಹಾಗೂ ನೂತನ ಸುದ್ದಿವಾಹಿನಿಯು ಉತ್ತರೊತ್ತರವಾಗಿ ಬೆಳೆಯಲಿ ಎಂದು ಹೇಳುವುದರೊಂದಿಗೆ ಸಿಹಿಹಂಚಿ ಸುದ್ದಿವಾಹಿನಿಗೆ ಶುಭಾಶಯ ಕೋರಿದರು..

ಇದೇ ಸಂದರ್ಭದಲ್ಲಿ ನೂತನ ಟಿವಿ ೧೨ ಸುದ್ದಿವಾಹಿನಿಯ ಜಿಲ್ಲಾ ಕೊರ್ಡಿನೇಟರ್ ರಾದ ಬಿ ಎಮ್.ಪಾಟೀಲ ಮಾತನಾಡಿ ಜಿಲ್ಲೆಯ ನೊಂದ ಬಡಜನರ ಆಶಾಕಿರಣವಾಗಿ ನೇರ ದಿಟ್ಟ ನಿರಂತರ ನೈಜ ವರದಿಯನ್ನು ಬಿತ್ತರಿಸಲಾಗುವುದು ಅನ್ಯಾಯ ಅಕ್ರಮಗಳನ್ನು ಸಹಿಸಲಾಗುವದಿಲ್ಲ ಹಾಗೂ ಇಂದಿನ ದಿನಗಳಲ್ಲಿ ಕೆಲವು ಪತ್ರಕರ್ತರು ತಮ್ಮ ಸ್ವಾರ್ಥಕ್ಕಾಗಿ ಮಾಧ್ಯಮವನ್ನು ಬಲಿ ಕೊಡುತ್ತಿದ್ದಾರೆ ಕಟುಸತ್ಯವನ್ನು ಸಾರ್ವಜನಿಕ ವಲಯದಲ್ಲಿ ಪ್ರಸಾರ ಮಾಡಲು ಹಿಂದೆ ಸರಿಯುತ್ತಿದ್ದಾರೆ ದೈರ್ಯ ಇದ್ದರೆ ಮಾತ್ರ ಮಾಧ್ಯಮ ರಂಗಕ್ಕೆ ಕಾಲಿಡಬೇಕು ಎಂದು ನೂತನವಾಗಿ ತಾಲೂಕಾವಾರು ಅಧಿಕಾರ ವಹಿಸಿಕೊಂಡ ಟಿವಿ ೧೨ ಪ್ರತಿನಿಧಿಗಳಿಗೆ ಮಾರ್ಗದರ್ಶನ ನೀಡಿ ಹಿರಿಯರ,ಗುರುಗಳ ಮಾರ್ಗದರ್ಶನದಲ್ಲಿ ಮುನ್ನುಗ್ಗಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಮುಖ್ಯ ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ ಇಳಕಲ್ ತಾಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ವಿನೋದ ಬಾರಿಗಿಡದ ಅವರು ಮಾತನಾಡಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದAತೆ ಪತ್ರಿಕಾರಂಗವು ಕೂಡ ಕಾರ್ಯ ನಿರ್ವಹಿಸುತ್ತದೆ ತಪ್ಪು ಮಾಡಿದವರ ಉಪ್ಪು ತಿಂದ ನಂತರ ನೀರು ಕುಡಿಯಲೆಬೇಕು ಸಾರ್ವಜನಿಕರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ ಎಂದರು.

ನೂತನ ವಾಹಿನಿಯ ನೂತನ ತಾಲೂಕಾ ವರದಿಗಾರರಾಗಿ ಬಾಗಲಕೋಟೆ ತಾಲೂಕು ಪ್ರತಿನಿಧಿಯಾಗಿ ಅವಿನಾಶ ಪವಾರ, ಕಲಾದಗಿ ವಲಯದ ಪ್ರತಿನಿಧಿಯಾಗಿ ಯಶವಂತ ನರಗುಂದ, ಹುನಗುಂದ ಇಲಕಳ ಪ್ರತಿನಿಧಿಯಾಗಿ ಶರಣಗೌಡ ಕಂದಕೂರ ಹಾಗೂ ಇನ್ನಿತರು ವಿವಿಧ ತಾಲೂಕುಗಳ ಪ್ರತಿನಿಧಿಗಳಾಗಿ ಅಧಿಕಾರ ವಹಿಸಿಕೊಂಡರು.

ಕಾರ್ಯಕ್ರಮದಲ್ಲಿ ಮುಖ್ಯ ಗೌರವಾನ್ವಿತ ಮಾಧ್ಯಮ ಅತಿಥಿಗಳಾದ ವಿನೋದ ಬಾರಿಗಿಡದ ಹಾಗೂ ಪಂಚಮಸಾಲಿ ಸಮಾಜದ ಬಾಗಲಕೋಟೆಯ ತಾಲೂಕಿನ ಕಾರ್ಯದರ್ಶಿಯಾದ ಮಂಜುನಾಥ ಪುರತಗೇರಿಯವರನ್ನು ಗೌರವಪೂರ್ವಕ ಅಭಿಮಾನದಿಂದ ಸನ್ಮಾನಿಸಲಾಯಿತು.ಕಾರ್ಯಕ್ರಮದ ಸ್ವಾಗತವನ್ನು ಕರವೇ ನಗರ ಘಟಕ ಅಧ್ಯಕ್ಷರಾದ ಶಂಕರ ಮುತ್ತಲಗೇರಿ ಕೋರಿದರು,
ಕಾರ್ಯಕ್ರಮದ ನಿರೂಪಣೆಯನ್ನು ನವೀನ ಕಪಾಲಿ ಮಾಡಿದರು, ಕಾರ್ಯಕ್ರಮದ ವಂದನಾರ್ಪನೆಯನ್ನು ಜಿಲ್ಲಾ ಉಪಾಧ್ಯಕ್ಷರಾದ ಪವನ ಕಾಂಬಳೆ ನಡೆಸಿ ಕೊಟ್ಟರು.ಪರಮಪೂಜ್ಯರು ಟಿವಿ ೧೨ ತಂಡಕ್ಕೆ ಹಾಗೂ ಕರವೇ ತಂಡಕ್ಕೆ ಉಪಹಾರದ ವ್ಯವಸ್ಥೆ ಮಾಡಿದ್ದರು.

ಕಾರ್ಯಕ್ರಮದಲ್ಲಿ ಕರವೇ ಗೌರವ ಅಧ್ಯಕ್ಷರಾದ ಪ್ರಶಾಂತ ಬಾವಿಕಟ್ಟಿ, ಪ್ರಧಾನ ಕಾರ್ಯದರ್ಶಿಯಾದ ಚೇತನ ದೊಡಮನಿ, ಕಾರ್ಮಿಕ ಕಾರ್ಯಾಧ್ಯಕ್ಷ ಸಿದ್ರಾಮೇಶ್ವರ ಹಾಸನ, ನಗರ ಉಪಾಧ್ಯಕ್ಷ ಸಂತೋಷ ಚಿನಿವಾಲ, ಶಿವು ಪಾದಗಟ್ಟಿ, ಶರೀಪ್ ಕೋಲಾರ, ಸೇರಿದಂತೆ ಇನ್ನಿತರ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ: ವಿನೋದ ಬಾರಿಗಿಡದ

error: