May 17, 2024

Bhavana Tv

Its Your Channel

ನವಲಿಹಿರೇಮಠ ಅವರ ಎಸ್.ಆರ್.ಎನ್.ಇ ಫೌಂಡೇಶನ್ ಉದ್ದೇಶವೇನು? -ವಿ.ಎಸ್.ಕಾಶಪ್ಪನವರ

ಇಳಕಲ್: ರಾಜಕೀಯಕ್ಕೆ ಬರುವುದಿಲ್ಲವೆಂದು ಸಂಗಮನಾಥನ ಮೇಲೆ ಆಣೆ ಮಾಡುತ್ತೇನೆ ಎಂದು ಹೇಳುವ ಮೂಲಕ ಜನರನ್ನು ಹಾದಿ ತಪ್ಪಿಸುತ್ತಿರುವ ಎಸ್.ಆರ್. ನವಲಿಹಿರೇಮಠ ಅವರು ಎಸ್.ಆರ್.ಎನ್.ಇ ಫೌಂಡೇಶನ್‌ನ್ನು ಯಾವ ಉದ್ದೇಶಕ್ಕಾಗಿ ಕಟ್ಟಿದ್ದಾರೆ ಎಂದು ಮಾಜಿ ಶಾಸಕ ವಿಜಯಾನಂದ ಎಸ್. ಕಾಶಪ್ಪನವರು ಪ್ರಶ್ನಿಸಿದ್ದಾರೆ.
ಸೋಮವಾರ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗೊಷ್ಠಿ ಕರೆದು ಮಾತನಾಡುತ್ತಾ ಫೌಂಡೆಶನ್‌ದಿAದ ಗುಡಿ, ಗುಂಡಾರಗಳಿಗೆ, ಸಮಾಜಗಳಿಗೆ ಲಕ್ಷಾಂತರ ರೂ. ದೇಣಿಗೆ ನೀಡುವ ಉದ್ದೇಶವೇನು? ಎನ್ನುತ್ತ ಯಾವ ಪಕ್ಷದಲ್ಲಿ ಅಧಿಕೃತವಾಗಿ ಇದ್ದಾರೆ ಎನ್ನುವದೇ ಗೊತ್ತಿಲ್ಲ ಚುನಾವಣೆ ಇನ್ನು ಎರಡು ವರ್ಷಗಳು ಇರುವ ಪೂರ್ವದಲ್ಲಿಯೇ ಹೀಗೆ ಹಣ ಹಂಚುತ್ತಿರುವದು ಹಿಂದಿನ ಉದ್ದೇಶವಾದರು ಏನು? ಎಂಬುದರ ಬಗ್ಗೆ ತನಿಖೆಯಾಗಲಿ ಎಂದರು.
ತಾಲೂಕಿನಲ್ಲಿ ತಾವು ತಮ್ಮ ತಂದೆ-ತಾಯಿ ಶಾಸಕರಾಗಿದ್ದಾಗ ಮಾಡಿದ ಅಭಿವೃದ್ದಿ ಕಾರ್ಯಗಳನ್ನು ಕುರಿತು ಮಾತನಾಡುತ್ತಾ ತಾವು ಶಾಸಕರಾಗಿದ್ದಾಗ ೨೪*೭ ಕುಡಿಯುವ ನೀರು, ಹನಿ ನೀರಾವರಿ, ಡಾ.ಅಂಬೇಡ್ಕರ, ಡಾ. ಜಗಜೀವನರಾಮ್, ಆರ್‌ಸಿಸಿ ರಸ್ತೆ, ಡಾಂಬರ್ ರಸ್ತೆ, ಆಶ್ರಯ ಮನೆಗಳು, ಸೂಪರ ಮಾರುಕಟೆ, ನಿವೇಶನ, ಕೂಡಲ ಸಂಗಮದಲ್ಲಿ ಅಕ್ಷರಧಾಮ ಸುವರ್ಣ ರಂಗಮAದಿರ, ಶಹದಿ ಮಹಲ್ ಇನ್ನಿತರ ಅಭಿವೃದ್ದಿ ಕಾರ್ಯಗಳಿಗೆ ಸಾವಿರಾರು ಕೋಟಿ ರೂ. ಅನುಧಾನ ತಂದಿದ್ದೇನೆ ಎಂದು ವ್ಹಿ. ಎಸ್. ಕಾಶಪ್ಪನವರ ಹೇಳಿದರು.
ಈ ಹಿಂದೆ ಕೊಪ್ಪಳದಲ್ಲಿ ಇದ್ದಾಗ ನವಲಿಹಿರೇಮಠರು, ಸಂಗಣ್ಣ ಕರಡಿ ಮತ್ತು ರಾಯರೆಡ್ಡಿ ಅವರನ್ನು ರಾಜಕೀಯವಾಗಿ ಮುಗಿಸಿ ಬಂದು ಇಲ್ಲಿಗೆ (ಕರಡಿಗೆ) ಬಂದು ಗುತ್ತಿಗೆದಾರ ಕೆಲಸ ಮಾಡುತ್ತೇನೆ ಎಂದು ಬಂದವರು ಎಲ್ಲ ರಸ್ತೆ ಕಾಮಗಾರಿ ಕೆಲಸವನ್ನು ನವಲಿಹಿರೇಮಠರು ನನಗೆ ಕೊಡಿಸಿ ಎಂದು ತಾವು ಶಾಸಕರಾಗಿದ್ದಾಗ ಕೇಳಿಕೊಂಡಿದ್ದರು. ಈಗಿನ ಶಾಸಕ ದೊಡ್ಡನಗೌಡ ಪಾಟೀಲ್‌ರು ಇದೇ ಗುತ್ತಿಗೆದಾರ ವಿಷಯವಾಗಿ ವೈಮನಸ್ಸು ಮಾಡಿಕೊಂಡಿದ್ದಾರೆ ಎಂದರು.
ಕೃಷ್ಣ-ಮಲಪ್ರಭಾ ನದಿಯ ಪ್ರವಾಹದಿಂದ ಹುನಗುಂದ ಮತಕ್ಷೇತ್ರದ ೨೬ ಗ್ರಾಮಗಳು ಮುಳುಗಡೆ ಯಾಗಬೇಕಾಗಿತ್ತು, ತಾವು ಶಾಸಕರಾಗಿದ್ದ ಅವಧಿಯಲ್ಲಿ ೧೦ ಗ್ರಾಮಗಳ ಮುಳುಗಡೆಯಾಗಿದ್ದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ೨೦೦ ಕೋಟಿ ಅನುದಾನ ಕೊಡಿಸಿದ್ದು. ಅಲ್ಲಿಯ ಜನತೆಗೆ ಶಾಸಕ ದೊಡ್ಡನಗೌಡರು ಇದುವರೆಗೂ ಹಕ್ಕು ಪತ್ರ ನೀಡಿರುವುದಿಲ್ಲ.
ನನ್ನ ಆಸ್ತಿ ಬಗ್ಗೆ ತನಿಖೆ ನಡೆಸಲಿ ಅದಕ್ಕೆ ನಾನು ಸಿದ್ದ ಎನ್ನುತ್ತ ತಾವು ಮಾಡಿದ ಅಭಿವೃದ್ದಿ ಕಾರ್ಯಗಳ ದಾಖಲೆ ಸಮೇತ ಬಹಿರಂಗ ಚರ್ಚೆಗೆ ಬರುತ್ತೇನೆ ನೀವು ಬನ್ನಿರಿ ಎಂದು ಶಾಸಕ ಪಾಟೀಲರಿಗೆ ಮತ್ತು ಎಸ್.ಆರ್.ಎನ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ನವಲಿಹಿರೇಮಠವರಿಗೆ ಬಹಿರಂಗ ಸವಾಲು ಹಾಕಿದರು, ಶರಣಪ್ಪ ಆಮದಿಹಾಳ, ನಗರಸಭೆ ಸದಸ್ಯ ಸುರೇಶ ಜಂಗ್ಲಿ, ಆಕಾಶ ದೊಡ್ಡಮನಿ ಸುದ್ದಿಗೊಷ್ಠಿಯಲ್ಲಿದ್ದರು.

ವರದಿ. ವಿನೋದ ಬಾರಿಗಿಡದ ಭಾವನಾ ಟಿವಿ ಇಳಕಲ್

error: