ಹೊನ್ನಾವರ: ಕಂದಾಯ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಯ ಜಂಟಿ ಆಶ್ರಯದಲ್ಲಿ ಮೀನುಗಾರಿಕೆಯ ಯಾಂತ್ರೀಕೃತ ನಾಡದೋಣಿಗಳ ತಪಾಸಣೆ ತಾಲ್ಲೂಕಿನ ಮಂಕಿ ಹಾಗೂ ಸುತ್ತಮುತ್ತಲಿನ ಸಮುದ್ರ ತೀರದಲ್ಲಿ ನಡೆಯಿತು.
ಮೀನುಗಾರಿಕೆ ಸಹಾಯಕ ನಿರ್ದೇಶಕ ತಿಮ್ಮಪ್ಪ ಎಮ್ ಎಚ್ ಹಾಗೂ ಕಂದಾಯ ಇಲಾಖೆಯ ವೆಂಕಟರಮಣ ದೇವಾಡಿಗರವರ ನೇತ್ರತ್ವದಲ್ಲಿ ಮಂಕಿ ಮಡಿ, ದೇವರಗದ್ದೆ, ಹಳೇಮಠ, ನಾಖೂದಾ ಮೋಹಲ್ಲಾ, ಆಳ್ವೆಹಿತ್ತಲ್ಲ ನೂರಮೋಹಲ್ಲಾ, ಹೊಸಹಿತ್ಲ ಹಾಗೂ ಕೊಪ್ಪದಮಕ್ಕಿಯಲ್ಲಿ ದೋಣಿಗಳ ತಪಾಸಣೆ ನಡೆಯಿತು. ಮೀನುಗಾರರ ಸಹಕಾರಿ ಸಂಘ, ನಾಡದೋಣಿ ಸಂಘಗಳು ಸಹಕಾರ ನೀಡಿದವು.
ಈ ಸಂದರ್ಭದಲ್ಲಿ ಮಾತನಾಡಿದ ಹೊನ್ನಾವರ ಮೀನುಗಾರಿಕೆ ಸಹಾಯಕ ನಿರ್ದೇಶಕ ತಿಮ್ಮಪ್ಪ ಎಂ ಎಚ್ ರವರು, ಜಿಲ್ಲೆಯಾದ್ಯಂತ ಮೀನುಗಾರಿಕಾ ಜಂಟಿ ನಿರ್ದೇಶಕರ ಹಾಗೂ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತಪಾಸಣೆ ನಡೆಸಲಾಗಿದೆ. ಎಲ್ಲಾ ಮೀನುಗಾರರು ಉತ್ತಮವಾಗಿ ಸಹಕಾರ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಭಾವನಾ ಟಿವಿಗಾಗಿ ವೆಂಕಟೇಶ ಮೇಸ್ತ ಹೊನ್ನಾವರ
More Stories
ಹೊನ್ನಾವರ ತಾಲೂಕಿನ ಮಂಕಿಯ ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಪ್ರಾರಂಭೊತ್ಸವ
“ಗಂಧರ್ವ ಲೋಕವನ್ನೇ ಧರೆಗಿಳಿಸಿದ ಗೋಲ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ”
ಮೀನುಗಾರಿಕೆ ಸಂದರ್ಭದಲ್ಲಿ ದೋಣಿಯಲ್ಲಿ ಕುಸಿದು ಸಾವು,