March 21, 2023

Bhavana Tv

Its Your Channel

“ಗಂಧರ್ವ ಲೋಕವನ್ನೇ ಧರೆಗಿಳಿಸಿದ ಗೋಲ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ”

ಹೊನ್ನಾವರ:  ಫೆಬ್ರುವರಿ 2 ಮಂಕಿಯ ಗೋಲ್ ಇಂಟರ್  ನ್ಯಾಷನಲ್ ಪಬ್ಲಿಕ್ ಶಾಲೆಯ  ವಾರ್ಷಿಕೋತ್ಸವವು ನೃತ್ಯ- ಸಂಗೀತದ ರಸದೌತಣವನ್ನೇ ನೀಡಿತು. ಸುಮಾರು 615 ಕ್ಕೂ ಹೆಚ್ಚು ಮಕ್ಕಳು ಸಮಾಜಕ್ಕೆ ಅತಿ ಮುಖ್ಯವಾಗಿ ಬೇಕಾದ ನೆಲ, ಜಲ, ಭೂತಾಯಿ ಸಂರಕ್ಷಣೆಯ ಕುರಿತಾದ ನೃತ್ಯಗಳನ್ನು ಬಹು ಸುಂದರವಾಗಿ ಪ್ರಸ್ತುತಪಡಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಚುಣಾವಣಾ ಆಯೋಗದ ನೊಡಲ್ ಅಧಿಕಾರಿ ಪಿ.ಎಸ್. ವಸ್ತ್ರದ್ ಅವರು ಆಗಮಿಸಿ ಶಾಲೆಯ ಕಾರ್ಯವೈಖರಿ ಹಾಗೂ ಅನುಸರಿಸುತ್ತಿರುವ ಶಿಕ್ಷಣದ ವಿನೂತನ ಪರಿಕಲ್ಪನೆಗಳಿಗೆ ಪ್ರಶಂಸೆ ವ್ಯಕ್ತಪಡಿಸಿದರು.
ಡಿಡಿಪಿಐ ಈಶ್ವರ್ ನಾಯ್ಕ್, ಬಿಇಒ ಜಿ ಎಸ್ ನಾಯ್ಕ್, ಶಾಲಾ ನಿರ್ದೇಶಕರಾದ ಬಸವರಾಜ್ ಗೌಡ ಇಒ ಸುರೇಶ್ ಜಿ ನಾಯ್ಕ್ ಇವರು ಶಾಲೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಶಾಲಾ ನಿರ್ದೇಶಕರಾದ ಶ್ರೀಮತಿ ದೀಪಾ ರಾವ್ ರವರು ಅಂತರಾಷ್ಟ್ರೀಯ ಮಟ್ಟದ ಶಿಕ್ಷಣವನ್ನು ಗ್ರಾಮೀಣ ಭಾಗದ ಮಕ್ಕಳಿಗೆ ಯಾವುದೇ ರಾಜಿ ಇಲ್ಲದೆ ಗೋಲ್ ಶಾಲೆ ನೀಡುತ್ತಿದೆ ಎಂದರು
ಪ್ರಾಂಶುಪಾಲರಾದ ರಮೇಶ್ ಯರಗಟ್ಟಿಯವರು ವಾರ್ಷಿಕ ವರದಿಯನ್ನು ಓದಿದರು.
ಶಾಲೆಯ ಸಂಸ್ಥಾಪಕರಾದ ಎ. ಆರ್. ನಾಯಕ್ ರವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಮಂಕಿ ಗ್ರಾಮವು ಶಿಕ್ಷಣ ಕ್ಷೇತ್ರದಲ್ಲಿ ಭಾರತದಲ್ಲಿ ಹೆಸರುವಾಸಿಯಾಗುವ ಮಟ್ಟಕ್ಕೆ ಸಂಸ್ಥೆಯನ್ನು ತೆಗೆದುಕೊಂಡು ಹೋಗುವ ತಮ್ಮ ಕನಸನ್ನು ಹಂಚಿಕೊAಡರು.
ಸಭಾ ಕಾರ್ಯಕ್ರಮದ ನಂತರ ಮಕ್ಕಳು ಯಾವುದೇ ಸಿನಿಮಾ ಹಾಡುಗಳ ಅಬ್ಬರವಿಲ್ಲದೆ ಜಾನಪದ, ಭರತನಾಟ್ಯ, ಲಘು ಶಾಸ್ತ್ರೀಯ, ಕಾಂಟೆAಪರರಿ ನೃತ್ಯ ಪ್ರಕಾರಗಳಲ್ಲಿ ‘ಭೂತಾಯಿಯನ್ನು ಉಳಿಸೋಣ’ ಎಂಬ ಸಂದೇಶವನ್ನು ನೀಡುವ 15 ಬಗೆ ಬಗೆಯ ನೃತ್ಯವನ್ನು ಪ್ರಸ್ತುತಪಡಿಸಿದ್ದು ನೋಡುಗರ ಕಣ್ಮನ ಸೆಳೆದಿತ್ತು. ದುಂಬಿಗಳು ಕೂಡ ಪ್ರಾಕೃತಿಕ ವ್ಯವಸ್ಥೆಯಲ್ಲಿ ಮುಖ್ಯವಾದ ಪಾತ್ರ ವಹಿಸುತ್ತವೆ ಎಂಬುದರಿAದ ಪ್ರಾರಂಭವಾಗಿ ಪ್ರಕೃತಿ ಮಾತೆಯ ಮಡಿಲಲ್ಲಿ ಅರಳುವ ಹೂಗಳು, ಸೂರ್ಯ- ಚಂದ್ರ, ನಕ್ಷತ್ರಗಳು, ಪ್ರಾಣಿ- ಪಕ್ಷಿಗಳು, ಚಿಟ್ಟೆಗಳಾಗಿ ನೂರಾರು ಪುಟಾಣಿಗಳು ವೇದಿಕೆಗೆ ಬಂದದ್ದು ಬಹಳ ಮುದ್ದಾಗಿತ್ತು. ಮಳೆಯ ಮಹತ್ವವನ್ನು ಸಾರುವ ನೃತ್ಯದ ನಂತರ ಸುಮಾರು 25 ಪುಟಾಣಿಗಳು ನವಿಲುಗಳಾಗಿ ಗರಿಗೆದರಿ ಕುಣಿದಾಗ ಪ್ರೇಕ್ಷಕರ ಕರತಾಡನ ನಿರಂತರವಾಗಿತ್ತು. ನಂತರದ ನೃತ್ಯಗಳಲ್ಲಿ ‘ ಜಲ, ವಾಯು,ಶಬ್ದ ಮಾಲಿನ್ಯವನ್ನು ನಿಲ್ಲಿಸಬೇಕು’, ‘ ಮರಗಳನ್ನು ಉಳಿಸಬೇಕು’ , ‘ಸ್ವಚ್ಛ ಭಾರತ ಅಭಿಯಾನ’,ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆ, ಭಾರತೀಯ ಸೈನಿಕರ ತ್ಯಾಗ ಬಲಿದಾನಗಳನ್ನು ಬಿಂಬಿಸುವ ನೃತ್ಯಗಳು ಒಂದರ ಮೇಲೊಂದು ಚಪ್ಪಾಳೆ ಗಿಟ್ಟಿಸುತ್ತಾ ಹೋದವು. ಗಣೇಶ ಹಬ್ಬದ ಸಂಭ್ರಮ, ಶಿವಯೋಗಿನಿಯರ ಶಿವ ತಾಂಡವ, ರಾಧಾಕೃಷ್ಣರ ರಾಸಲೀಲೆ, ಕಣ್ಣಿಗೆ ಕಟ್ಟುವಂತಿತ್ತು. ಬಾಹುಬಲಿಯ ಶೌರ್ಯವನ್ನು ಹಾಗೂ ಮಾತೃ ಪ್ರೇಮವನ್ನು ಕೂಡ ವಿಶೇಷವಾಗಿ ಪ್ರದರ್ಶಿಸಲಾಯಿತು. ಪ್ರಸಿದ್ಧ ಕಾಂತಾರ ನೃತ್ಯವಂತೂ ಮತ್ತೊಮ್ಮೆ ಕಾಂತಾರ ಸಿನಿಮಾವನ್ನೇ ಕಣ್ಣಿಗೆ ಕಟ್ಟುವ ಹಾಗೆ ಮಕ್ಕಳು ಪ್ರದರ್ಶಿಸಿದಾಗ ಪ್ರೇಕ್ಷಕರ ಚಪ್ಪಾಳೆ ಮುಗಿಲು ಮುಟ್ಟುವಂತಿತ್ತು. ಅಂದರೆ ಉತ್ಪ್ರೇಕ್ಷೆಯಲ್ಲ. ಕಾಂತಾರ ದೈವವು ಪ್ರೇಕ್ಷಕರ ಮಧ್ಯದಿಂದ ಆವೇಶದಿಂದ ಬಂದಾಗ ಎಲ್ಲರ ಮೈಯಲ್ಲಿ ರೋಮಾಂಚನ ಕಣ್ಣೀರಿನೊಂದಿಗೆ ನೆರೆದಿದ್ದ ಆ ಪ್ರೇಕ್ಷಕರು ಕೈಮುಗಿದಿದ್ದು ದೈವ ರಕ್ಷಣೆಯ ಮಹತ್ವವನ್ನು ಹಾಗೂ ಎಲ್ಲರೆದೆಯಲ್ಲಿ ದೈವ ಭಕ್ತಿಯನ್ನು ಮೂಡಿಸಿತು. ಒಟ್ಟಾರೆ ವಿಭಿನ್ನವಾದ ಪರಿಕಲ್ಪನೆಯಲ್ಲಿ ಗೋಲ್ ಶಾಲೆಯ ಮಕ್ಕಳು ವೃತ್ತಿ ನಿರತ ಕಲಾವಿದರಂತೆ ಕಾರ್ಯಕ್ರಮವನ್ನು ನೀಡಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಯಿತು.

About Post Author

error: