ಹೊನ್ನಾವರ ತಾಲೂಕಿನ ಮಂಕಿಯ ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಈ ಹೊಸ ಶೈಕ್ಷಣಿಕ ವರ್ಷ 2023-24ರಲ್ಲಿ ಹೊಸ ತನದ ಆರಂಭವನ್ನು ವಿಶೇಷವಾಗಿ ಓರಿಯೆಂಟಷನ್ ಕಾರ್ಯಕ್ರಮದ ಮುಖಾಂತರ 31-05-2023 ರಂದು ಮಾಡಲಾಯಿತು..
ಹೊನ್ನಾವರ ; ಕಾರ್ಯಕ್ರಮದಲ್ಲಿ ಶಾಲೆಯ ಚೆರಮನ್ ಶ್ರೀ. ಎ. ಆರ್. ನಾಯಕ್, ಪ್ರಾಂಶುಪಾಲರಾದ ಶ್ರೀಮತಿ ಸವಿತಾ ಪಾವರ್, ಶಾಲಾ ಸಿಬ್ಬಂದಿ ವರ್ಗ ಹಾಗೂ ಹೊಸದಾಗಿ ದಾಖಲಾತಿ ಪಡೆದ ಮಕ್ಕಳ ಪೋಷಕರು ಭಾಗಿಯಾಗಿದ್ದರು.
ಕಾರ್ಯಕ್ರಮ ದೀಪ ಬೆಳಗಿಸುವುದರೊಂದಿಗೆ ಆರಂಭವಾಯಿತು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಪ್ರಾಂಶುಪಾಲರು ಶಾಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಹಾಗೂ ಶಿಸ್ತುಬದ್ಧ ಜೀವನ ಮೌಲ್ಯವನ್ನು ಮಕ್ಕಳಲ್ಲಿ ಬೆಳೆಸಲು ಮಕ್ಕಳು ಶಾಲೆಯಲ್ಲಿ ಪಾಲಿಸಬೇಕಾದ ನಿಯಮಗಳು ಹಾಗೂ ಅದಕ್ಕೆ ಪೋಷಕರ ನೀಡಬೇಕಾದ ಸಹಕಾರದ ಬಗ್ಗೆ ಮಾರ್ಗದರ್ಶನ ನೀಡಿದರು ನಂತರ ಶಾಲೆಯ ಚೇರ್ಮನ್ ಶ್ರೀ. ಎ.ಆರ್ ನಾಯಕ್ ಮಾತನಾಡಿ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ತೆಗೆದುಕೊಂಡ ಮಕ್ಕಳ ಶೈಕ್ಷಣಿಕ ಸಾಧನೆಗೆ ಸಹಕಾರಿಯಾದ ಕೆಲ ಮಾರ್ಗ ಸೂಚಿಗಳನ್ನು ಉಲ್ಲೇಖಿಸಿದರು ಹಾಗೂ 2023-24ರ ಶೈಕ್ಷಣಿಕ ವರ್ಷದಲ್ಲಿ ತಮ್ಮಿಂದ ನೀಡಲಾಗುವ ಹೆಚ್ಚಿನ ಪ್ರೋತ್ಸಾಹ ಹಾಗೂ ಪಾಲಕರ ಸಹಕಾರದ ಬಗ್ಗೆ ಮಾತನಾಡಿದರು.
ದಿನಾಂಕ 01-06-2023 ರಂದು ಬೇಸಿಗೆ ರಜೆಯನ್ನು ಮನೆಯ ವಾತಾವರಣದಲ್ಲಿ ಕಳೆದ ಮಕ್ಕಳು ಶಾಲೆಯ ವಾತಾವರಣವನ್ನು ಸಂತೋಷವಾಗಿ ಪ್ರವೇಶಿಸುವಂತಾಗಲು ಶಾಲೆಯ ಎಲ್ಲಾ ಕೊಠಡಿ ಹಾಗೂ ಆವರಣವನ್ನು ಸುಂದರವಾಗಿ ಅಲಂಕರಿಸಲಾಗಿತ್ತು.ಎಲ್ಲಾ ಮಕ್ಕಳನ್ನು ಪುಷ್ಪ ಸಿಂಚನ ಮಾಡುವುದರೊಂದಿಗೆ ಶಿಕ್ಷಕರು ಚಪ್ಪಾಳೆಯ ಮೂಲಕ ಸ್ವಾಗತಿಸಿದರು. ನಂತರ ಶಾಲೆಯಲ್ಲಿ ಗಣೇಶನ ವಿಗ್ರಹಕ್ಕೆ ಶಾಲಾ ಸಿಬ್ಬಂದಿ ವರ್ಗ ಹಾಗೂ ಮಕ್ಕಳು ಸೇರಿ ಭಕ್ತಿ ಪೂರ್ವಕ ಪೂಜೆ ಸಲ್ಲಿಸುವುದರ ಮೂಲಕ ಶೈಕ್ಷಣಿಕವರ್ಷ ವನ್ನು ಪ್ರಾರಂಭಿಸಲಾಯಿತು.
More Stories
“ಗಂಧರ್ವ ಲೋಕವನ್ನೇ ಧರೆಗಿಳಿಸಿದ ಗೋಲ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ”
ಮೀನುಗಾರಿಕೆ ಸಂದರ್ಭದಲ್ಲಿ ದೋಣಿಯಲ್ಲಿ ಕುಸಿದು ಸಾವು,
ಮಂಕಿಯ ಜನತಾ ಕಾಲೋನಿಯಲ್ಲಿ ಹಾಳು ಬಿದ್ದ ಬಾಲಕರ ವಸತಿ ನಿಲಯ : ಸುಸಜ್ಜಿತವಾಗಿದ್ದರು ಬಳಸದೆ ಬಿಟ್ಟ ಇಲಾಖೆ.