December 6, 2024

Bhavana Tv

Its Your Channel

ಮಂಕಿಯ ಜನತಾ ಕಾಲೋನಿಯಲ್ಲಿ ಹಾಳು ಬಿದ್ದ ಬಾಲಕರ ವಸತಿ ನಿಲಯ : ಸುಸಜ್ಜಿತವಾಗಿದ್ದರು ಬಳಸದೆ ಬಿಟ್ಟ ಇಲಾಖೆ.

ಮಂಕಿ:- ಬಾಲಕರ ಶೈಕ್ಷಣಿಕ ಚಟುವಟಿಕೆಗಳಿಂದ ಕಂಗೊಳಿಸುತ್ತಿದ್ದ ವಸತಿ ನಿಲಯವೊಂದು, ಇದೀಗ ವಿದ್ಯಾರ್ಥಿಗಳೇ ಇಲ್ಲದಿರುವುದರಿಂದ ಅನಾಥವಾಗಿದೆ. ಯಾವೊಬ್ಬ ಹಿಂದುಳಿದ ವರ್ಗಗಳ ವಿದ್ಯಾರ್ಥಿ ಇಲ್ಲಿ ಪ್ರವೇಶಾತಿ ಪಡೆಯದಿದ್ದರಿಂದ ಖಾಲಿಯಿರುವ ಸುಸಜ್ಜಿತ ಕಟ್ಟಡ ಹಾಳು ಕೊಂಪೆಯಾಗಿದೆ.

ಹೊನ್ನಾವರ ತಾಲ್ಲೂಕಿನ ಮಂಕಿ ಪಟ್ಟಣ ಪಂಚಾಯತ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯವೇ ಇಂಥ ದುಃಸ್ಥಿತಿಯಲ್ಲಿರುವುದು. ಹದಿನೆಂಟು ವರ್ಷಗಳ ಹಿಂದೆ ಉದ್ಘಾಟನೆಗೊಂಡ ಈ ಕಟ್ಟಡಕ್ಕೆ ಕಳೆದ ಆರು ವರ್ಷದಿಂದ ಬೀಗ ಜಡಿಯಲಾಗಿದೆ. ಸರಿಯಾದ ನಿರ್ವಹಣೆ, ಸುಣ್ಣ ಬಣ್ಣವಿಲ್ಲದೆ ತನ್ನ ಅಂದ ಕಳೆದುಕೊಂಡು ಸೊರಗುತ್ತಿದೆ.

ಪರ್ಯಾಯ ಬಳಕೆಗೂ ಕೊಡದ ಪರಿಣಾಮ ಲಕ್ಷ, ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಸರ್ಕಾರಿ ಕಟ್ಟಡವೊಂದು ಇದೀಗ ಅನಾಥ ಸ್ಥಿತಿ ಎದುರಿಸುತ್ತಿದೆ. ಹೀಗೆ ಬಿಟ್ಟರೆ ಸೂಕ್ತ ಭದ್ರತೆಯಿಲ್ಲದೆ ಅಕ್ರಮ ಚಟುವಟಿಕೆಗಳ ತಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಕಟ್ಟಡ ಸುಸಜ್ಜಿತವಾಗಿದೆ. ವಿಶಾಲವಾದ ಕೋಣೆಗಳು, ಸ್ನಾನ ಗೃಹಗಳು, ಶೌಚಾಲಯ, ಅಡುಗೆ ಮನೆ, ಕೈ ತೊಳೆದುಕೊಳ್ಳಲು ನೀರಿನ ತೊಟ್ಟಿ, ಚಿಕ್ಕದಾದ ಒಳಾಂಗಣ, ವಿಶಾಲವಾದ ಕ್ರೀಡಾಂಗಣ ಎಲ್ಲವು ಇದೆ. ಇವುಗಳನ್ನು ಬಳಸಲು ವಿದ್ಯಾರ್ಥಿಗಳೇ ಇಲ್ಲದಿರುವುದರಿಂದ ಇಡೀ ಕಟ್ಟಡ ಪಾಳು ಬೀಳುತ್ತಿದೆ. ಇಷ್ಟು ವ್ಯವಸ್ಥಿತವಾಗಿದ್ದು ಬಳಕೆಗೆ ಯೋಗ್ಯವಿದ್ದರೂ ಹಾಗೆ ಬಿಟ್ಟಿರುವುದು ಸುಸಜ್ಜಿತ ಕಟ್ಟಡವನ್ನೆ ಅಣಕಿಸುವಂತಿದೆ.
ಕಟ್ಟಡದ ಒಳಗಡೆಯ ಆವರಣದಲ್ಲಿ ಗಿಡಗಳ ಹಿಂಡು ಬೆಳೆದು ನಿಂತಿದೆ. ಕಿಡಕಿ, ಕಬ್ಬಿಣದ ಬಾಗಿಲು ತುಕ್ಕು ಹಿಡಿಯುತ್ತಿದೆ. ಸುಜ್ಜಿತ ಕಟ್ಟಡ ಬಳಸದೆ ಜೀರ್ಣವಸ್ಥಗೆ ತಲುಪಿದೆ. ಇದರ ಹತ್ತಿರದಲ್ಲೇ ಶಾಲಾ ಕಾಲೇಜುಗಳಿವೆ, ಇತರ ಸರಕಾರಿ ಕಚೇರಿಗಳಿವೆ, ಹೀಗಿದ್ದರೂ ಕೂಡ ಯಾವ ಇಲಾಖೆಗೂ ಬಳಸಲು ಕೊಡದೆ ಖಾಲಿ ಬಿಟ್ಟು ಸರಕಾರದ ಕಟ್ಟಡವೊಂದನ್ನು ಹಾಳುಗೆಡವಿದ್ದಾರೆ.

ಈ ಕಟ್ಟಡದ ಕೂಗು ಅಳತೆಯ ದೂರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಈಗ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಕಟ್ಟಡದ ನಿರ್ಮಾಣಕ್ಕೂ ಮೊದಲು ಇವರು ಹೊನ್ನಾವರದ ಪಟ್ಟಣದ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿತ್ತು. ಬಾಡಿಗೆ ಕಟ್ಟಡಕ್ಕೆ ಹೋಗುವ ಬದಲು ಈ ವಸತಿ ನಿಲಯವನ್ನೇ ಬಳಸಿ ಸರಕಾರದ ದುಡ್ಡು ಉಳಿಸಬಹುದಿತ್ತು.
ಮಂಕಿ ಗ್ರಾಮ ಪಟ್ಟಣ ಪಂಚಾಯತವಾಗಿದೆ. ಮಂಕಿ ರಾಜ್ಯದಲ್ಲೇ ಅತೀ ದೊಡ್ಡ ಗ್ರಾಮ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ದಿನೇ ದಿನೇ ಹಲವು ಯೋಜನೆಗಳು ಬರುತ್ತಲೆ ಇದೆ. ಹೀಗಿದ್ದರೂ ಕೂಡ ಇದ್ದ ಕಟ್ಟಡವನ್ನು ಹಾಲುಗೆಡುವಳು ಬಿಟ್ಟು ಮಂಕಿಯ ಅಭಿವೃದ್ಧಿ ಹಿನ್ನಡೆಯಾಗುವಂತಿದೆ.

ಊರಿನ ಜನರು ನಮ್ಮೂರು ಅಭಿವೃದ್ಧಿ ಯಾಗಬೇಕು ಅಂತ ಇಂತಹ ಕಟ್ಟಡಗಳನ್ನು, ಶಾಲಾ, ಕಾಲೇಜು, ಬೇರೆ ಬೇರೆ ಇಲಾಖೆಯ ಕಚೇರಿಯನ್ನು ಮಂಜೂರಿ ಮಾಡಿಸುತ್ತಾರೆ. ಅಧಿಕಾರಿಗಳ ಬೇಜಬ್ದಾರಿ ತನಕ್ಕೆ ಅಂದಾಜು ಕೋಟಿ ಬೆಲೆಬಾಳುವ ಕಟ್ಟಡ ಅನಾಥವಾಗುತ್ತಿದೆ.
ವರದಿ:- ವೆಂಕಟೇಶ ಮೇಸ್ತ

error: