ಮಳವಳ್ಳಿ : ಸಾಲಭಾದೆ ಯಿಂದ ಬೇಸತ್ತ ರೈತನೋರ್ವ ವಿಷ ಸೇವಿಸಿ ಆತ್ಮಹತ್ತೆ ಮಾಡಿ ಕೊಂಡಿರುವ ಘಟನೆಯೊಂದು ಮಳವಳ್ಳಿ ತಾಲೂಕಿನ. ಮಾದಹಳ್ಳಿ ಗ್ರಾಮದಲ್ಲಿ ಜರುಗಿದೆ.
ಈ ಗ್ರಾಮದ ಕರಗೇಗೌಡ ಎಂಬುವರ ಮಗನಾದ ಎಂ ಕೆ ಆನಂದ್ ಎಂಬಾತನೇ ಆತ್ಮಹತ್ಯೆಗೆ ಶರಣಾದ ರೈತ ನಾಗಿದ್ದು ನಿನ್ನೆ ರಾತ್ರಿ ಮನೆಯಲ್ಲಿ ಕ್ರಿಮಿನಾಶಕ ಔಷಧ ಸೇವಿಸಿ ಅಸ್ವಸ್ಥನಾಗಿದ್ದ ಈತನನ್ನು ಕೂಡಲೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಯಿತಾದರೂ ಚಿಕಿತ್ಸೆ ಫಲಕಾರಿ ಯಾಗದೆ ಇಂದು(ಮAಗಳವಾರ) ಮುಂಜಾನೆ ಮೃತಪಟ್ಟರೆಂದು ವರದಿಯಾಗಿದೆ.
ಸುಮಾರು ೩೫ ವರ್ಷ ವಯಸ್ಸಿನ ಆನಂದ್ ಅವರು ತಮ್ಮ ೨೫ ಗುಂಟೆ ಜಮೀನಿನ ಜೊತೆ ಬೇರೆಯವರ ಜಮೀನನ್ನು ಸಹ ಪಾಲಿಗೆ ತೆಗೆದುಕೊಂಡು ವ್ಯವಸಾಯ ಮಾಡುತ್ತಿದ್ದರು ಎನ್ನಲಾಗಿದೆ.
ವ್ಯವಸಾಯಕ್ಕಾಗಿ ಸೊಸೈಟಿ, ಬ್ಯಾಂಕ್ , ಸ್ವಸಹಾಯ ಸಂಘಗಳು, ಖಾಸಗಿ ಕೈ ಸಾಲ ಸೇರಿದಂತೆ ಸುಮಾರು ೬ ಲಕ್ಷದಷ್ಟು ಸಾಲ ಮಾಡಿಕೊಂಡಿದ್ದ ಆನಂದ್ ಅವರಿಗೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಸಾಲದ ಬಡ್ಡಿಯನ್ನು ಸಹ ಕಟ್ಟಲಾಗದೆ ಹತಾಶರಾಗಿ ಆತ್ಮಹತ್ಯೆಗೆ ಶರಣಾದರು ಎನ್ನಲಾಗಿದೆ
ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವೈದ್ಯಕೀಯ ಪರೀಕ್ಷೆ ನಂತರ ಶವವನ್ನು ವಾರಸುದಾರರಿಗೆ ನೀಡಲಾಗಿದೆ.
ವರದಿ ; ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ