December 19, 2024

Bhavana Tv

Its Your Channel

ವೀರಭದ್ರೇಶ್ವರ ಹಾಗೂ ಬಸವೇಶ್ವರ ದೇವರ ಗಡ್ಡಿ ತೇರುಗಳ ರಥೋತ್ಸವ

ರೋಣ : ತಾಲ್ಲೂಕಿನ ಯಾವಗಲ್ ಗ್ರಾಮದ ವೀರಭದ್ರೇಶ್ವರ ಹಾಗೂ ಬಸವೇಶ್ವರ ದೇವರ ಗಡ್ಡಿ ತೇರುಗಳ ರಥೋತ್ಸವವು ಸೋಮವಾರ ಸಂಜೆ ಭಕ್ತರ ನಡುವೆ ಸಡಗರ, ಸಂಭ್ರಮದಿAದ ಜರುಗಿತು. ಬೆಳಿಗ್ಗೆ ೬ ಗಂಟೆಯಿAದ ಜಾತ್ರೆಯ ಅಂಗವಾಗಿ ಎರಡೂ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಬಳಿಕ ಸಂಜೆ ೬ ಗಂಟೆಗೆ ಆಯಾ ದೇವಸ್ಥಾನದ ಎದುರು ಎರಡೂ ಗಡ್ಡಿ ರಥಗಳನ್ನು ಪ್ರತ್ಯೇಕವಾಗಿ ಭಕ್ತರು ಪಾದಗಟ್ಟಿಯವರೆಗೆ ಎಳೆದರು. ರಥೋತ್ಸವ ಉದ್ದಕ್ಕೂ ಭಕ್ತರು ವೀರಭದ್ರೇಶ್ವರ ಮಹಾರಾಜ್ ಕೀ ಜೈ, ಬಸವೇಶ್ವರ ಮಹಾರಾಜ್ ಕೀ ಜೈ ಎಂದು ಜಯಘೋಷ ಹಾಕಿದರು. ರಥೋತ್ಸವದಲ್ಲಿ ಭಜನೆ, ಜಾಂಜ್ ಮೇಳ, ಡೊಳ್ಳು ಕುಣಿತ ನೋಡುಗರ ಗಮನ ಸೆಳೆದವು. ಭಕ್ತರು ಭಕ್ತಿ ಭಾವದಿಂದ ಬಾಳೆಹಣ್ಣುಗಳನ್ನು ಎಸೆದು ನಮನ ಸಲ್ಲಿಸಿದರು. ರಥವು ಯಶಸ್ವಿಯಾಗಿ ಮರಳಿ ಸ್ವಸ್ಥಳಕ್ಕೆ ಬಂದು ನಿಂತಾಗ ಚಪ್ಪಾಳೆ ತಟ್ಟಿದ ಭಕ್ತರು ಭಕ್ತಿಭಾವ ಮೆರೆದರು. ಬಳಿಕ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಕಾಯಿ ಒಡೆಸಿ, ನೈವೇದ್ಯ ಮಾಡಿದರು.
ಕೊರೊನಾ ಸೋಂಕಿನ ಪ್ರಭಾವದಿಂದ ಜಾತ್ರೆ, ಸಂಭ್ರಮಗಳಿoದ ದೂರ ಉಳಿದಿದ್ದ ಜನರಿಗೆ ವೀರಭದ್ರೇಶ್ವರ ಹಾಗೂ ಬಸವೇಶ್ವರ ಗಡ್ಡಿ ತೇರಿನ ರಥೋತ್ಸವ ಸಂಭ್ರಮ ನೀಡಿತು

ವರದಿ ವೀರಣ್ಣ ಸಂಗಳದ

error: