December 22, 2024

Bhavana Tv

Its Your Channel

ಶಾಮಿಯಾನ ಸಪ್ಲೈಯರ್ಸ್ ಮೂರನೇ ವರ್ಷದ ಸಮಾರಂಭ

ರೋಣ: ಗದಗ ಜಿಲ್ಲೆ ಗಜೇಂದ್ರಗಡ ತಾಲ್ಲೂಕು ಶಾಮಿಯಾನ ಸಪ್ಲೈಯರ್ಸ್ ಮೂರನೇ ವರ್ಷದ ಸಮಾರಂಭ ದಿವ್ಯ ಸಾನಿಧ್ಯವನ್ನು ಶ್ರೀ ಮ. ನಿ ಪ್ರ ಸ್ವ ಜಗದ್ಗುರು ವಿಜಯಮಹಾಂತೇಶ ಮಹಾಸ್ವಾಮಿಗಳು ಮೈಸೂರು ಮಠ ಗಜೇಂದ್ರಗಡ. ದಿವ್ಯಸಾನಿಧ್ಯ ವಹಿಸಿದ್ದು ಹಜರತ್ ನಿಜಮುದ್ದಿನ್ ಶಾ. ಆರಷ ಪೀರ್ ಟೆಕೇದ ಭಾವನವರು. ದಿವ್ಯ ಸಾನಿಧ್ಯ ವಹಿಸಿದ್ದು ಉದ್ಘಾಟಕರಾಗಿ ಕಳಕಪ್ಪ ಜಿ ಬಂಡಿ ಅಧ್ಯಕ್ಷರು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮಕರ್ನಾಟಕ ಸರಕಾರ ಶಾಸಕರು ರೋಣ ತಾಲೂಕ ಆಗಮಿಸಿದ್ದರು.
ಕರೋನಾ ಸಂದರ್ಭದಲ್ಲಿ ನಮ್ಮ ಶಾಮಿಯಾನ ಸಪ್ಲೈಯರ್ಸ್ ತುಂಬಾ ತೊಂದರೆ ಅನುಭವಿಸಿರುತ್ತಾರೆ. ಅವರ ನಿತ್ಯದ ಕಾರ್ಯದಲ್ಲಿ ತಮ್ಮ ದುಡಿಮೆಯನ್ನು ಮಾಡಿಕೊಂಡು ಜೀವನವನ್ನು ಸಾಗಿಸುತ್ತಿದ್ದರು ಮಹಾಮಾರಿ ಕಾರಣದಿಂದ ಅವರಿಗೆ ಹೇಳಲಾರದಷ್ಟು ತೊಂದರೆ ಆಗಿದೆ. ಎಲ್ಲರಿಗೂ ಕೆಲಸವನ್ನು ಕೊಡುವಂತಹ ಕಾರ್ಯವನ್ನು ಅವರು ಮಾಡುತ್ತಿದ್ದರು ಮುಂದಿನ ದಿನದಲ್ಲಿ ಅವರ ಎಲ್ಲಾ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲಿ. ಪ್ರತಿವರ್ಷವೂ ಈ ಕಾರ್ಯವನ್ನು ಮಾಡುತ್ತಾ ಬಂದಿದ್ದು ತಾಯಿ ಭುವನೇಶ್ವರಿಯ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡುವುದರ ಮೂಲಕ ಕರ್ನಾಟಕದ ಏಕತೆಯನ್ನು ಸಾರುತ್ತಾರೆ. ಅವರಿಗೆ ಮುಂದಿನ ದಿನದಲ್ಲಿ ಉಜ್ವಲ ಭವಿಷ್ಯ ನೀಡಲಿ ಎಂದು ಅವರು ಹಾರೈಸಿದರು.
ಈ ಸಂದರ್ಭದಲ್ಲಿ ಮಹಾಂತೇಶ ಬೀಳಗಿ ಮುಖ್ಯಾಧಿಕಾರಿಗಳು ಪುರಸಭೆ ಗಜೇಂದ್ರಗಡ. ರೋಣ ಬಿಜೆಪಿ ಮಂಡಲದ ಅಧ್ಯಕ್ಷರಾದ ಮುತ್ತಣ್ಣ ಕಡಗದ. ಪಿಎಸ್‌ಐ ಎಸ್.ಎನ್ ಸಂಗಳದ, ತಹಸೀಲ್ದಾರ ರಜನಿಕಾಂತ ಕೆಂಗೇರಿ, ಪುರಸಭೆ ಅಧ್ಯಕ್ಷರಾದ ಈರಣ್ಣ ಪಟ್ಟಣಶೆಟ್ಟಿ, ಐ.ಎ ರೇವಡಿ ಶಿಕ್ಷಕರು,
ಕಸಾಪ ಅಧ್ಯಕ್ಷರಾದ ಈರಣ್ಣ ಈ ತಾಳಿಕೋಟಿ, ತಾಲೂಕು ಶಾಮಿಯಾನ್ ಸಪ್ಲೇಯರ್ ಸಂಘದ ಉಪಾಧ್ಯಕ್ಷರಾದ ಕುಬೇರ ಗೌಡ, ಚೆನ್ನವೀರಗೌಡ್ರು, ಬೇರೆ ಊರಿನಿಂದ ಬಂದAತ ಶಾಮಿಯಾನ ಸಪ್ಲೈಯರ್ಸ್ ಹಲವರು ಉಪಸ್ಥಿತರಿದ್ದರು.

ವರದಿ ವೀರಣ್ಣ ಸಂಗಳದ ರೋಣ

error: